ತೆಲುಗು ಚಿತ್ರರಂಗದಿಂದ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕರ್ನಾಟಕದ ನಟಿ

ತೆಲುಗಿನ ಉಪ್ಪೇನಾ ಸಿನಿಮಾ ಬೆಡಗಿಯ ಮಲೆಯಾಳಂ ನ ಹೊಸ ಸಿನಿಮಾ ಅದ್ದೂರಿಯಾಗಿ ಸೆಟ್ಟೇರಿದೆ. ತೆಲುಗಿನಲ್ಲಿ ಸೂಪರ್ ಹಿಟ್ ಆದ ಉಪ್ಪೇನಾ ಸಿನಿಮಾದ ನಂತರ ನಟಿ ಕೃತಿ ಶೆಟ್ಟಿ ಅವರಿಗೆ ಅನೇಕ ಅವಕಾಶಗಳು ಹರಸಿ ಬಂದವು. ಅದರಂತೆ ಕೃತಿ ಶೆಟ್ಟಿ ಅವರಿಗೆ ಕೆಲವು ಸಿನಿಮಾಗಳು ಯಶಸ್ಸು ದೊರಕಿಸಿಕೊಟ್ಟರು ನಿರೀಕ್ಷೆ ಮಟ್ಟಕ್ಕೆ ಕೈ ಹಿಡಿಯಲಿಲ್ಲ. ಇದೀಗ ಕೃತಿ ಶೆಟ್ಟಿ ‘ಅಜಯಂತೆ ರಂದಂ ಮೋಷನಂ’ 3ಡಿಯಲ್ಲಿ ಮೋಡಿ ಮಾಡಲಿದ್ದಾರೆ ಟೊವಿನೋ ಥಾಮಸ್ ಕೃತಿ ಶೆಟ್ಟಿ. ಮಲಯಾಳಂ ಖ್ಯಾತ ನಟ ಟೊವಿನೋ ಥಾಮಸ್, ನಟಿ ಕೃತಿ ಶೆಟ್ಟಿ ಅಭಿನಯದ ಈ ನೂತನ ಪ್ಯಾನ್ ಇಂಡಿಯಾ ಸಿನಿಮಾ ‘ಅಜಯಂತೆ ರಂದಂ ಮೋಷನಂ’ ಫ್ಯಾಂಟಸಿ ಅಡ್ವೆಂಚರ್ ಸಿನಿಮಾ ಆಗಿದೆಯಂತೆ. ಇದು 3ಡಿಯಲ್ಲಿ ತೆರೆ ಕಾಣಲಿರುವ ಬಿಗ್ ಬಜೆಟ್ ಚಿತ್ರ ಎಂದೂ ಕೂಡ ಹೇಳಲಾಗ್ತಿದೆ. ಈ ಸಿನಿಮಾದಲ್ಲಿ ನಟ ಟೊವಿನೋ ಥಾಮಸ್ ಅವರು ಮೂರು ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇನ್ನು ನಟಿ ಕೃತಿ ಶೆಟ್ಟಿ ಅವರು ಸೌತ್ ಸಿನಿರಂಗದಲ್ಲಿ ಸೆನ್ಸೇಷನಲ್ ನಟಿಯಾಗಿ ಮಿಂಚಿದ್ದು ಇದೀಗ ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿ ನೀಡುತ್ತಿದ್ದಾರೆ. ಈ ಸಿನಿಮಾದಲ್ಲಿ ತಾರಾಗಣದಲ್ಲಿ ಐಶ್ವರ್ಯ ರಾಜೇಶ್, ಸುರಭಿ ಲಕ್ಷಿ ಕೂಡ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ‘ಅಜಯಂತೆ ರಂದಂ ಮೋಷನಂ’ ನಿರ್ದೇಶಕ ಜಿತಿನ್ ಲಾಲ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಇವರ ಮೊದಲ ಸಿನಿಮಾ. ಸುಜಿತ್ ನಂಬಿಯಾರ್ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ನಿರ್ಮಾಣವಾಗುತ್ತಿರುವ 3ಡಿಯಲ್ಲಿ ತೆರೆ ಕಾಣುವ ಅಜಯಂಂತೆ ರಂದಂ ಮೋಷನಂ ಚಿತ್ರಕ್ಕೆ ಯುಜಿಎಂ ಪ್ರೊಡಕ್ಷನ್ ಮತ್ತು ಮ್ಯಾಜಿಕ್ ಫ್ರೇಮ್ಸ್ ಸಂಸ್ಥೆ ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ದೀಪು ನೈನನ್ ಥಾಮಸ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ತೆಲುಗು, ತಮಿಳಿನಲ್ಲಿ ಸಖತ್ ಶೈನ್ ಆಗಿರೋ ನಟಿ ಕೃತಿಶೆಟ್ಟಿ ಅವರು ಇದೀಗ ಮಾಲಿವುಡ್ ಮಿಂಚಲು ಹೊರಟಿದ್ದಾರೆ.

Leave a Reply

%d bloggers like this: