ತೆಲುಗು ಚಿತ್ರರಂಗದಲ್ಲಿ ಮೊದಲ ಸೋಲು ಕಂಡ ಕರ್ನಾಟಕದ ನಟಿ

ಯಶಸ್ಸು ಎಂಬುದು ಸದಾ ಒಂದೇ ರೀತಿ ಇರುವುದಿಲ್ಲ. ಅದು ಒಂದು ರೀತಿ ಚಲಿಸುವ ಚಕ್ರವಿದ್ದಂತೆ. ಸದಾ ಚಲಿಸುತ್ತಿರುತ್ತದೆ. ವಿಜಯಲಕ್ಷ್ಮಿ ಯಾರ ಮನೆಗೆ ಯಾವಾಗ ಹೆಜ್ಜೆ ಇಡುತ್ತಾಳೆ ಎಂಬುದು ತಿಳಿಯುವುದಿಲ್ಲ. ಅದೇ ರೀತಿ ಸಿನಿಮಾ ಕ್ಷೇತ್ರದಲ್ಲಿ ಕೂಡ ಕಲಾವಿದರಿಗೆ ಯಶಸ್ಸು ಎಂಬುದು ಒಂದೇ ರೀತಿ ಇರುವುದಿಲ್ಲ. ಒಂದು ಸಿನಿಮಾ ಗೆದ್ದರೆ, ಇನ್ನೊಂದು ಸಿನಿಮಾ ಗೆಲ್ಲುತ್ತದೆ ಎಂದು ನಿರೀಕ್ಷೆ ಮಾಡುವುದಕ್ಕೆ ಸಾಧ್ಯವಿಲ್ಲ. ಆದರೆ ಒಂದು ಸಿನಿಮಾ ಗೆದ್ದು, ನಂತರದ ಸಿನಿಮಾ ಸೋತರೆ ಆ ನಟ ನಟಿಗೆ ಮುಂದಿನ ದಿನಗಳಲ್ಲಿ ಬೇಡಿಕೆ ಕಡಿಮೆ ಆಗುವುದು ಬಹುತೇಕ ಖಚಿತವಾಗಿ ಬಿಡುತ್ತದೆ. ಅದೇ ರೀತಿಯಾಗಿ ತೆಲುಗಿನಲ್ಲಿ ಉಪ್ಪೇನಾ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ನಟಿ ಕೃತಿ ಶೆಟ್ಟಿ ಚೊಚ್ಚಲ ಸಿನಿಮಾದಲ್ಲಿಯೇ ಅದ್ಭುತ ಯಶಸ್ಸು ಕಂಡರು. ಉಪ್ಪೇನಾ ಸಿನಿಮಾ ಬಾಕ್ಸ್ ಅಫೀಸ್ ನಲ್ಲಿ ಧೂಳೆಬ್ಬಿಸಿತು.

ತಮ್ಮ ಮೊದಲ ಸಿನಿಮಾದಲ್ಲಿಯೇ ಕೃತಿ ಶೆಟ್ಟಿಗೆ ಅಪಾರ ಜನಪ್ರಿಯತೆ ದೊರೆತು ಟಾಲಿವುಡ್ ನಲ್ಲಿ ಬೇಡಿಕೆ ಉಂಟಾಯಿತು. ಇದಾದ ಬಳಿಕ ಕೃತಿ ಶೆಟ್ಟಿ ಅವರು ನ್ಯಾಚುರಲ್ ಸ್ಟಾರ್ ನಟ ನಾನಿ ಅಭಿನಯದ ಶ್ಯಾಮ್ ಸಿಂಗ ರಾಯ್ ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಈ ಚಿತ್ರವೂ ಕೂಡ ಕೃತಿ ಶೆಟ್ಟಿಗೆ ಭರ್ಜರಿ ಯಶಸ್ಸು ತಂದು ಕೊಡುತ್ತದೆ. ಉಪ್ಪೇನಾ ಮತ್ತು ಶ್ಯಾಮ್ ಸಿಂಗ ರಾಯ್ ಈ ಎರಡೂ ಸಿನಿಮಾಗಳು ಸೂಪರ್ ಹಿಟ್ ಆದ ನಂತರ ನಟಿ ಕೃತಿ ಶೆಟ್ಟಿ ಅವರಿಗೆ ಅಪಾರ ಅಭಿಮಾನಿಗಳ ಬಳಗ ಸೃಷ್ಟಿಯಾಗುತ್ತದೆ. ಪಡ್ಡೆ ಹೈಕಳಿಗೆ ನಟಿ ಕೃತಿ ಶೆಟ್ಟಿ ಅವರು ಸಖತ್ ಮೋಡಿ ಮಾಡಿದ್ದರು. ಎರಡೂ ಚಿತ್ರಗಳು ಸೂಪರ್ ಹಿಟ್ ಆದ ನಂತರ ಕೃತಿ ಶೆಟ್ಟಿ ಅಭಿನಯದ ಮೂರನೇ ಸಿನಿಮಾ ಅಂದರೆ ದಿ ವಾರಿಯರ್ ಸಿನಿಮಾ. ಈ ಚಿತ್ರ ತೆಲುಗು ಮತ್ತು ತಮಿಳಿನಲ್ಲಿ ರಿಲೀಸ್ ಆಗಿತ್ತು. ಆದರೆ ನಟಿ ಕೃತಿ ಶೆಟ್ಟಿ ಅವರ ಈ ಮೂರನೇ ಸಿನಿಮಾ ಮಕಾಡೆ ಮಲಗಿದೆ. ಬಾಕ್ಸ್ ಆಫೀಸಿನಲ್ಲಿ ದಿ ವಾರಿಯರ್ ಸಿನಿಮಾ ಹೇಳಿಕೊಳ್ಳುವಷ್ಟು ಕಲೆಕ್ಷನ್ ಮಾಡಿಲ್ಲ.

ಐಎಂಡಿಬಿಯಲ್ಲಿ ದಿ ವಾರಿಯರ್ ಚಿತ್ರಕ್ಕೆ ಕೇವಲ 5.8 ರೇಟಿಂಗ್ ಮಾತ್ರ ಸಿಕ್ಕಿದೆ. ಇತ್ತ ಬುಕ್ ಮೈ ಶೋ ನಲ್ಲಿಯೂ ಕೂಡ ಈ ಚಿತ್ರದ ರೇಟಿಂಗ್ ದಿನ ಕಳೆದಂತೆ ಕುಸಿಯುತ್ತಿದೆ. ದಿ ವಾರಿಯರ್ ಸಿನಿಮಾಗೆ ಎನ್.ಲಿಂಗು ಸ್ವಾಮಿ ನಿರ್ದೇಶನ ಮಾಡಿದ್ದು, ರಾಮ್ ಪೋತಿನೇನಿ, ಆದಿ ಪಿನಿಶೆಟ್ಟಿ, ಅಕ್ಷರಾ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದಿ ವಾರಿಯರ್ ಸಿನಿಮಾ ಸೂಪರ್ ಹಿಟ್ ಆಗಿದ್ರೆ ನಟಿ ಕೃತಿ ಶೆಟ್ಟಿ ಅವರು ಹ್ಯಾಟ್ರಿಕ್ ಹಿಟ್ ಬಾರಿಸುತ್ತಿದ್ದರು. ಆದರೆ ಈ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಹಿನ್ನೆಲೆ ನಟಿ ಕೃತಿ ಶೆಟ್ಟಿ ಅವರಿಗೆ ಹ್ಯಾಟ್ರಿಕ್ ಹಿಟ್ ಕನಸಾಗಿ ಉಳಿದೋಯಿತು. ಇನ್ನು ದಿ ವಾರಿಯರ್ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ನಂತರ ನಟಿ ಕೃತಿ ಶೆಟ್ಟಿ ಅವರ ಅಭಿಮಾನಿಗಳಿಗೆ ಅಸಮಾಧಾನ ವಾಗಿದೆ. ಇದರ ನಡುವೆಯೂ ಕೂಡ ಕೃತಿ ಶೆಟ್ಟಿ ಅವರಿಗೆ ಮುಂದಿನ ಸಿನಿಮಾಗಳು ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದ್ದಾರೆ.