ತೆಲುಗು ಚಿತ್ರರಂಗದಲ್ಲಿ ಚಿತ್ರೀಕರಣ ಸ್ಥಗಿತ, ಯಾವುದೇ ಚಿತ್ರದ ಶೂಟಿಂಗ್ ನಡೆಯುತ್ತಿಲ್ಲ

ಸದ್ಯಕ್ಕೀಗ ತೆಲುಗು ಚಿತ್ರರಂಗದಲ್ಲಿ ಬಿಗ್ ಬಜೆಟ್ ನಲ್ಲಿ ತಯಾರಾಗುತ್ತಿರುವ ಯಾವುದೇ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿಲ್ಲ. ಹೌದು ಇತ್ತೀಚೆಗೆ ದಕ್ಷಿಣ ಭಾರತೀಯ ಚಿತ್ರರಂಗ ಯಾರೂ ಕೂಡ ಊಹೆ ಮಾಡಿಕೊಳ್ಳದ ಹಾಗೇ ಬೆಳೆಯುತ್ತಿದೆ. ಉತ್ತರ ಭಾರತದ ಸಿನಿಮಾಗಳಿರಲಿ, ಯಾವ ಹಾಲಿವುಡ್ ಸಿನಿಮಾಗಳಿಗೂ ಕಡಿಮೆ ಇಲ್ಲದಂತೆ ನಮ್ಮ ಸೌತ್ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ನೂರು, ಇನ್ನೂರು, ಐನೂರು ಕೋಟಿ ಬಜೆಟ್ ನಲ್ಲಿ ಸಿನಿಮಾಗಳು ತಯಾರಾಗುತ್ತಿವೆ. ಅದರಂತೆ ಸೌತ್ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ಡಬ್ ಆಗಿ ವರ್ಲ್ಡ್ ವೈಡ್ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತಿದೆ. ಇತ್ತೀಚೆಗೆ ರಿಲೀಸ್ ಆದ ನಮ್ಮ ಕನ್ನಡದ ಕೆಜಿಎಫ್2, ತೆಲುಗಿನ ಬಾಹುಬಲಿ2, ಪುಷ್ಪಾ, ಆರ್‌.ಆರ್.ಆರ್ ಅಂತಹ ಸಿನಿಮಾಗಳು ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಧೂಳಿಪಟ ಮಾಡುತ್ತಿವೆ.

ಸಿನಿಮಾ ಗೆದ್ದಾಗ ನಿರ್ಮಾಪಕ ಗೆದ್ದೇ ಗೆಲ್ಲುತ್ತಾನೆ. ನಿಜ ಆದರೆ ಅಸಲಿಗೆ ನಿರ್ಮಾಪಕನಿಗೆ ಎಲ್ಲರೂ ನಿರೀಕ್ಷೆ ಮಾಡಿದಷ್ಟು ಆದಾಯ ಅವರಿಗೆ ಸಿಗುವುದಿಲ್ಲ. ಇದಕ್ಕೆ ಅನೇಕ ಕಾರಣಗಳಿವೆ. ಬಿಗ್ ಬಜೆಟ್ ಸಿನಿಮಾ ಅಂದಾಕ್ಷಣ ಆ ಚಿತ್ರದಲ್ಲಿ ಸ್ಟಾರ್ ನಟರ ದಂಡೇ ಇರುತ್ತೆ. ಅವರ ಸಂಭಾವನೆ ಅಂತೂ ಕೇಳೋ ಹಾಗಿಲ್ಲ ಬಿಡಿ. ಇಪ್ಪತ್ತೈದು, ಐವತ್ತು ಕೋಟಿ ಕೆಲವರಿಗೆ ಲಾಭಾಂಶದಲ್ಲಿ ಶೇರು ಹೀಗೆ ಸ್ಟಾರ್ ನಟರ ಸಂಭಾವನೆ ಇರುತ್ತದೆ. ಇದು ನಿರ್ಮಾಪಕರಿಗೆ ಹೊರೆಯಾಗುತ್ತದೆ. ಹಾಗಾಗಿ ತೆಲುಗು ಸಿನಿ ನಿರ್ಮಾಪಕರು ಈಗಾಗಲೇ ತಿಳಿಸಿದಂತೆ ಆಗಸ್ಟ್ ಒಂದರಿಂದ ಬಿಗ್ ಬಜೆಟ್ ನ ಎಲ್ಲಾ ಸಿನಿಮಾಗಳ ಚಿತ್ರೀಕರಣವನ್ನ ನಿಲ್ಲಿಸಿದ್ದಾರೆ. ಅವುಗಳಂತೆ ಇದೀಗ ಅಲ್ಲು ಅರ್ಜುನ್ ಅವರ ಪುಷ್ಪಾ2 ಸಿನಿಮಾ, ಚಿರಂಜೀವಿ ಅವರ ಗಾಡ್ ಫಾದರ್, ಬಾಲಕೃಷ್ಣ ಅವರ ಎನ್ಬಿಕೆ10 , ರಾಮ್ ಚರಣ್ ತೇಜಾ ಅವರ ಆರ್ಸಿ15 ಅಂತಹ ಬಿಗ್ ಬಜೆಟ್ ಸಿನಿಮಾಗಳ ಶೂಟಿಂಗ್ ಸ್ಥಗಿತಗೊಂಡಿವೆ.

ಪ್ರೊಡ್ಯೂಸರ್ಸ್ ಕೌನ್ಸಿಲ್ ತೀರ್ಮಾನಿಸಿ ಮುಂದಿನ ಸಭೆಯ ಆದೇಶದವರೆಗೆ ಯಾವುದೇ ರೀತಿಯಾಗಿ ಬಿಗ್ ಬಜೆಟ್ ಸಿನಿಮಾಗಳ ಚಿತ್ರೀಕರಣ ನಡೆಯದಂತೆ ಆದೇಶ ಮಾಡಿದ್ದಾರೆ. ನಿರ್ಮಾಪಕರು ಒಂದೆಡೆ ಸ್ಟಾರ್ ನಟರ ಸಂಭಾವನೆ, ಟಿಕೆಟ್ ದರ, ಓಟಿಟಿ ಮತ್ತು ಇನ್ನಿತರ ಸಮಸ್ಯೆಗಳಿಂದಾಗಿ ತುಂಬಾ ನಷ್ಟದಲ್ಲಿದ್ದಾನೆ. ಈ ಸಮಸ್ಯೆಗಳಿಗೆ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳುವವರಿಗೆ ನಾವು ಸಿನಿಮಾ ಶೂಟಿಂಗ್ ಮಾಡುವುದಿಲ್ಲ ಎಂದು ನಿರ್ಮಾಪಕರ ಕೌನ್ಸಿಲ್ ತೀರ್ಮಾನ ತೆಗೆದುಕೊಂಡಿದೆ. ಇತ್ತ ಹೈದರಾಬಾದ್ ನಲ್ಲಿ ಸಣ್ಣ ಪುಟ್ಟ ಬಜೆಟ್ ನ ಸಿನಿಮಾಗಳು ಮತ್ತು ಹೊರ ಭಾಷೆಯ ಸಿನಿಮಾಗಳ ಚಿತ್ರೀಕರಣಕ್ಕೆ ಯಾವುದೇ ರೀತಿಯ ಅಡಚಣೆ ತೊಂದರೆ ಇಲ್ಲದೆ ಸರಾಗವಾಗಿ ನಡೆಯುತ್ತಿದೆ. ಒಟ್ಟಾರೆಯಾಗಿ ನಿರ್ಮಾಪಕರ ಈ ನಿರ್ಧಾರದಿಂದಾಗಿ ತೆಲುಗು ಚಿತ್ರರಂಗ ಒಂದು ರೀತಿಯಾಗಿ ಸ್ಥಬ್ದವಾಗಿದೆ.

Leave a Reply

%d bloggers like this: