ತೆಲುಗಿನಲ್ಲಿ ಒಂದೇ ಧಾರಾವಾಹಿಗೆ ನಾಯಕ ನಾಯಕಿಯಾದ ಕನ್ನಡದ ಇಬ್ಬರು ಕಿರುತೆರೆ ನಟ ನಟಿ

ತೆಲುಗಿನ ಹೊಸ ಧಾರಾವಾಹಿಯಲ್ಲಿ ನಮ್ಮ ಕನ್ನಡ ಕಲಾವಿದರದ್ದೇ ಹವಾ, ಹೌದು ಇತ್ತೀಚೆಗೆ ನಮ್ಮ ಕನ್ನಡ ಸಿನಿಮಾಗಳು ಮತ್ತು ನಮ್ಮ ಕನ್ನಡದ ನಟ ನಟಿಯರು ಪರಭಾಷೆಯಲ್ಲಿ ಯಾವ ಮಟ್ಟಿಗೆ ಹವಾ ಸೃಷ್ಟಿಸುತ್ತಿದ್ದಾರೋ ಅದೇ ರೀತಿಯಾಗಿ ಇದೀಗ ಕನ್ನಡ ಕಿರುತೆರೆಯ ಕಲಾವಿದರು ಕೂಡ ಪರಭಾಷೆಗಳಲ್ಲಿ ಅ‌ವಕಾಶ ಗಿಟ್ಟಿಸಿಕೊಂಡು ಸಖತ್ ಆಗಿಯೇ ಮಿಂಚುತ್ತಿದ್ದಾರೆ. ಅವರ ಸಾಲಿಗೆ ಇದೀಗ ಕನ್ನಡ ಕಿರುತೆರೆ ಜನಪ್ರಿಯ ಧಾರಾವಾಹಿಯಾಗಿರೋ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ನಟಿ ಅಮೂಲ್ಯ ಮತ್ತು ಕನ್ಯಾಕುಮಾರಿ ಧಾರಾವಾಹಿ ಖ್ಯಾತಿಯ ನಟ ಯಶ್ವಂತ್ ಕೂಡ ತೆಲುಗಿನ ಹೊಸ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ.

ಹೌದು ಕನ್ನಡ ಕಿರುತೆರೆಯ ಪ್ರಸಿದ್ದ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಗಟ್ಟಿ ಮೇಳ ಧಾರಾವಾಹಿಯಲ್ಲಿ ರೌಡಿ ಬೇಬಿ ಆಗಿ ಕಾಣಿಸಿಕೊಂಡು ಕರುನಾಡಿನ ಮನೆ ಮನಗಳಲ್ಲಿ ಅಪಾರ ಅಪಾರ ಜನಪ್ರಿಯತೆ ಪಡೆದಿರೋ ನಟಿ ಅಮೂಲ್ಯ ಅವರು ಈಗಾಗಲೇ ತೆಲುಗಿನಲ್ಲಿ ಮುತ್ಯಮಂತ ಎಂಬ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅದರ ಜೊತೆಗೆ ಇದೀಗ ಅಮ್ಮಾಯಿಗಾರು ಅನ್ನೋವಂತಹ ಮತ್ತೊಂದು ಧಾರಾವಾಹಿಯಲ್ಲಿ ಕಥಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನೊಂದು ಸಂತೋಷದ ವಿಚಾರ ಅಂದರೆ ಇವರಿಗೆ ಜೋಡಿಯಾಗಿ ಕಥಾ ನಾಯಕನಾಗಿ ನಟಿಸುತ್ತಿರೋದು ಕೂಡ ನಮ್ಮ ಕನ್ನಡದ ನಟನೇ ಅನ್ನೋದು. ಹೌದು ಅಮೂಲ್ಯ ಅವರು ಈ ಧಾರಾವಾಹಿಯಲ್ಲಿ ಒಂದು ಶ್ರೀಮಂತ ಮನೆಯ ಮಗಳಾಗಿದ್ದು, ಪ್ರೀತಿಗೆ ಕೊರತೆ ಇರುತ್ತದೆಯಂತೆ.

ಈಕೆಗೆ ತಮ್ಮ ಮನೆಯ ಕೆಲಸದವನ ಮೇಲೆಯೇ ಲವ್ ಆಗುತ್ತಂತೆ. ಇದಾದ ನಂತರ ಏನೆಲ್ಲಾ ಆಗುತ್ತೆ ಅನ್ನೋದನ್ನ ನೀವು ಊಹೆ ಮಾಡಲೇಬಹುದಾಗಿದೆ. ಬಡ ಕುಟುಂಬದ ಹುಡುಗ ಶ್ರೀಮಂತನ ಮನೆಯ ಹುಡುಗಿ ಇವರಿಬ್ಬರು ಪ್ರೇಮಕಥೆಯಂತಹ ಒಂದು ಉತ್ತಮ ಕಥೆಯುಳ್ಳ ಧಾರಾವಾಹಿಯಲ್ಲಿ ಪ್ರಧಾನವಾಗಿ ಕನ್ನಡದ ಕಲಾವಿದರೇ ನಟಿಸುತ್ತಿರೋದು ಸಂತಸದ ವಿಚಾರ ಆಗಿದೆ. ನಟ ಯಶ್ವಂತ್ ಅವರಿಗೆ ತೆಲುಗು ಧಾರಾವಾಹಿ ಇದೇ ಮೊದಲ ಅವಕಾಶ ಆಗಿದ್ದು, ಯಾವ ರೀತಿಯಾಗಿ ತೆಲುಗು ವೀಕ್ಷಕರ ಮನ ಗೆಲ್ಲಲಿದ್ದಾರೆ ಅನ್ನೋದನ್ನ ಮುಂದಿನ ದಿನಗಳಲ್ಲಿ ತಿಳಿಯಬಹುದಾಗಿದೆ. ಇನ್ನು ಈಗಾಗಲೇ ಜೀ಼ ತೆಲುಗು ವಾಹಿನಿಯಲ್ಲಿ ಅಮ್ಮಾಯಿಗಾರು ಧಾರಾವಾಹಿಯ ಪ್ರೋಮೋ ಸಖತ್ ರೆಸ್ಪಾನ್ಸ್ ಪಡೆದುಕೊಂಡಿದೆ.

Leave a Reply

%d bloggers like this: