ತೆಲುಗಿನಲ್ಲಿ ಕಾಂತಾರ ಚಿತ್ರಕ್ಕೆ ದೊಡ್ಡ ಗೆಲುವು, ರಿಷಭ್ ಶೆಟ್ಟಿ ಅವರಿಗೆ ಬಂತು ದೊಡ್ಡ ಆಫರ್

ಕಾಂತಾರ ಸಿನಿಮಾಗೆ ಸಿಕ್ಕ ಅಭೂತಪೂರ್ವ ಯಶಸ್ಸು ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಇದೀಗ ಭಾರತೀಯ ಚಿತ್ರರಂಗ ಮಾತ್ರ ಅಲ್ಲದೆ ವರ್ಲ್ಡ್ ವೈಡ್ ಅಪಾರ ಜನಪ್ರಿಯತೆ ಗಳಿಸಲು ಸಾಧ್ಯವಾಗಿದೆ. ದಶಕಗಳ ಕಾಲ ಒದ್ದಾಡಿ ಯಶಸ್ಸು ಸಿಗದೇ ಒದ್ದಾಡುತ್ತಿರೋವಾಗ ಒಂದೇ ಒಂದು ಸಿನಿಮಾ ಸೂಪರ್ ಹಿಟ್ ಆಗ್ಬಿಟ್ರೆ ಅವರ ಸ್ಟಾರ್ ಗಿರಿ ರಾತ್ರೋ ರಾತ್ರಿ ಗಗನ ಮುಟ್ಟುಬಿಡುತ್ತೆ. ಅದೇ ರೀತಿಯಾಗಿ ಇದೀಗ ರಿಷಬ್ ಶೆಟ್ಟಿ ಅವರಿಗೂ ಕೂಡ ಅದೃಷ್ಟ ಒಲಿದಿದೆ ಎಂದರೆ ಅತಿಶಯೋಕ್ತಿ ಆಗಲ್ಲ. ರಿಷಬ್ ಶೆಟ್ಟಿ ತಮ್ಮ ನಿರ್ದೇಶನದ ಸಾಮಾರ್ಥ್ಯ ಏನೆಂಬುದನ್ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದಲ್ಲಿಯೇ ತೋರಿಸಿಕೊಟ್ಟಿದ್ದಾರೆ. ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡಾ ಒಲಿದು ಬಂದಿದ್ದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಷಯ. ಆದ್ರೆ ಈಗ ಕಾಂತಾರ ಸಿನಿಮಾದ ಮೂಲಕ ದೇಶಾದ್ಯಂತ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ಮಾತ್ರ ಅಲ್ಲದೇ ಭಾರತೀಯ ಚಿತ್ರರಂಗದ ದಿಗ್ಗಜ ನಟ ನಟಿಯರು, ನಿರ್ದೇಶಕರು, ತಂತ್ರಜ್ಞರು ಕಾಂತಾರ ಸಿನಿಮಾ ನೋಡಿ ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಅದರಲ್ಲಿಯೂ ಕೂಡ ರಿಷಬ್ ಶೆಟ್ಟಿ ಅವರ ಅಮೋಘ ನಟನೆಗೆ ಫಿಧಾ ಆಗಿದ್ದಾರೆ. ರಿಲೀಸ್ ಆದ ಕಡೆ ಎಲ್ಲಾ ಭಾಗಗಳಲ್ಲಿ ಕಾಂತಾರ ಸಿನಿಮಾ ಕಮಾಲ್ ಮಾಡುತ್ತಿದೆ. ಕಾಂತಾರದಲ್ಲಿ ರಿಷಬ್ ಶೆಟ್ಟಿ ಅವರ ಪ್ರತಿಭೆ ಕಂಡು ಇದೀಗ ಟಾಲಿವುಡ್ ಸೂಪರ್ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಅವರು ತಮ್ಮ ಸಂಸ್ಥೆಯಲ್ಲಿಯೂ ಕೂಡಾ ಒಂದು ಸಿನಿಮಾ ಮಾಡಿ ಎಂದು ಆಫರ್ ನೀಡಿದ್ದಾರಂತೆ. ಇದಕ್ಕೆ ರಿಷಬ್ ಅವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೋ ಕಾದು ನೋಡಬೇಕು. ಇನ್ನು ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಅವರು ಬರೋಬ್ಬರಿ 350 ಕೋಟಿ ದುಬಾರಿ ವೆಚ್ಚದಲ್ಲಿ ಸ್ಟೂಡಿಯೋವೊಂದನ್ನ ನಿರ್ಮಿಸಿ, ಅಲ್ಲು ಸ್ಟೂಡಿಯೋ ಅಂತಾನೇ ಹೆಸರಿಟ್ಟಿದ್ದರು. ಈ ಮೂಲಕ ಕನ್ನಡ ಅಲ್ಲು ಅರವಿಂದ್ ಅವರು ಸುದ್ದಿಯಾಗಿದ್ದರು. ಇನ್ನು ಇದೀಗ ರಿಷಬ್ ಶೆಟ್ಟಿ ಅವರಿಗೆ ತಮ್ಮ ಗೀತಾ ಆರ್ಟ್ಸ್ ಸಂಸ್ಥೆಯಡಿಯಲ್ಲಿ ಸಿನಿಮಾ ಮಾಡೋದಕ್ಕೆ ಅವಕಾಶ ನೀಡಿರುವುದು ನಿಜಕ್ಕೂ ಕೂಡ ಸಂತಸದ ವಿಚಾರವಾಗಿದೆ.

Leave a Reply

%d bloggers like this: