ಟೀಸರ್ ಮೂಲಕವೇ ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿರುವ ಕಬ್ಜ ಚಿತ್ರದ ಬಜೆಟ್ ಎಷ್ಟು ಗೊತ್ತೇ

ಸ್ಯಾಂಡಲ್ ವುಡ್ ರಿಯಲ್ ಸ್ಕಾರ್ ಉಪೇಂದ್ರ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಕಬ್ಜ ಸಿನಿಮಾದ ಟೀಸರ್ ನಿನ್ನೆ ಅಂದರೆ ಸೆಪ್ಟೆಂಬರ್ 17ರಂದು ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ ಅದ್ದೂರಿಯಾಗಿ ರಿವೀಲ್ ಆಗಿದೆ. ಕಬ್ಜ ಚಿತ್ರದ ಟೀಸರ್ ಅನ್ನ ಬಾಹುಬಲಿ ಸಿನಿಮಾದಲ್ಲಿನ ಬಲ್ಲಾಳ ದೇವ ಪಾತ್ರ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಲಾಂಚ್ ಮಾಡಿದ್ದಾರೆ. ಕಬ್ಜ ಚಿತ್ರದ ಟೀಸರ್ ಕಂಡು ಕನ್ನಡ ಚಿತ್ರರಂಗ ಮಾತ್ರ ಅಲ್ಲದೇ ಇಡೀ ಭಾರತೀಯ ಚಿತ್ರರಂಗವೇ ನಿಬ್ಬೆರಗಾಗಿದೆ.ಅದರಲ್ಲಿಯೂ ಈ ಕಬ್ಜ ಸಿನಿಮಾದ ಟೀಸರ್ ಈ ಮಟ್ಟಕ್ಕೆ ಇರುತ್ತೆ ಅಂತ ಯಾರೂ ಕೂಡ ಊಹೆ ಮಾಡಿರಲಿಲ್ಲ. ಅಷ್ಟರ ಮಟ್ಟಿಗೆ ಚಿತ್ರದ ಟೀಸರ್ ಅದ್ದೂರಿತನದಲ್ಲಿ ಮೂಡಿ ಬಂದಿದೆ. ಚಿತ್ರದ ಸೆಟ್ ನೋಡಿ ನಿಜಕ್ಕೂ ಕೂಡ ದಂಗಾಗಿಸುವಂತೆ ಭಾವ ಮೂಡಿಸಿದೆ.

ಕಲಾ ನಿರ್ದೇಶಕ ಶಿವಕುಮಾರ್ ಅವರ ಕೈ ಚಳಕ ಕಂಡು ಭಾರತೀಯ ಚಿತ್ರರಂಗದ ಸಿನಿ ಪ್ರೇಕ್ಷಕರು ಪುಳಕಿತರಾಗಿದ್ದಾರೆ. ಕಬ್ಜ ಟೀಸರ್ ನಲ್ಲಿ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅವರ ಲುಕ್ ರಿವೀಲ್ ಆಗಿದೆ. ನಿರ್ದೇಶಕ ಆರ್.ಚಂದ್ರು ಅವರು ಹೇಳುವಂತೆ ಕಿಚ್ಚ ಸುದೀಪ್ ಅವರು ಡೈಮೆಂಡ್ ಅಂತಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಕಬ್ಜ ಸಿನಿಮಾದ ಟೀಸರ್ ಕಂಡು ಬಹುತೇಕರು ಈ ಸಿನಿಮಾ ಕೂಡ ಕೆಜಿಎಫ್ ಅಂತೆಯೇ ಅದ್ದೂರಿಯಾಗಿದೆ. ಚಿತ್ರದ ಮೇಕಿಂಗ್ ಕೂಡ ಕೆಜಿಎಫ್ ಸಿನಿಮಾವನ್ನೇ ಹೋಲುವಂತಿದೆ ಎಂದು ಪ್ರೇಕ್ಷಕರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನ ತಿಳಿಸುತ್ತಿದ್ದಾರೆ. ಕಬ್ಜ ಸಿನಿಮಾ ಕಳೆದ ಮೂರು ವರ್ಷಗಳಿಂದ ತಯಾರಾಗುತ್ತಿರೋ ಸಿನಿಮಾ. ಕೋವಿಡ್ ಸಂಕಷ್ಟದ ದಿನಗಳನ್ನ ಎದುರಿಸಿ ಈ ಚಿತ್ರವನ್ನ ಮಾಡಲಾಗಿದೆ.

ಆರ್.ಚಂದ್ರು ಅವರು ಕಬ್ಜ ಸಿನಿಮಾವನ್ನ ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನ ಕೂಡ ಹೊತ್ತಿಕೊಂಡಿದ್ದಾರೆ. ಕಬ್ಜ ಸಿನಿಮಾದ ಟೀಸರ್ ನೋಡಿದ ಎಲ್ಲರು ಕೂಡ ಇದು ಮತ್ತೊಂದು ಕೆಜಿಎಫ್ ಆಗಲಿದೆ ಎಂದು ಹೇಳ್ತಿದ್ದಾರೆ. ಕಬ್ಜ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಅಂದ್ರೆ ಕಬ್ಜ ಸಿನಿಮಾಗೆ ಮ್ಯೂಸಿಕ್ ಮಾಡಿರೋದು ಕೆಜಿಎಫ್ ಚಿತ್ರಕ್ಕೆ ಮ್ಯೂಸಿಕ್ ಮಾಡಿರೋ ರವಿ ಬಸ್ರೂರ್ ಅವರೇ. ಕೆಜಿಎಫ್ ಬಿಜಿಎಮ್ ಮೋಡಿ ಮಾಡಿದ ಹಾಗೇನೇ ಕಬ್ಜ ಸಿನಿಮಾದ ಬಿಜಿಎಮ್ ಕೂಡ ಈಗ ಟೀಸರ್ ನಲ್ಲಿಯೇ ಸಖತ್ ಸೌಂಡ್ ಮಾಡುತ್ತಿದೆ. ಕೆಜಿಎಫ್, ವಿಕ್ರಾಂತ್ ರೋಣ ಆದ ನಂತರ ಕನ್ನಡದಲ್ಲಿ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಕಬ್ಜ ಹೊರ ಹೊಮ್ಮುವ ಮೂಲಕ ಮತ್ತೊಮ್ಮೆ ಕನ್ನಡ ಚಿತ್ರರಂಗದತ್ತ ಇಡೀ ವಿಶ್ವದ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡುತ್ತಿದೆ.

ಇನ್ನು ಈ ಬಹು ನಿರೀಕ್ಷಿತ ಹಾಗೂ ಬಹು ದೊಡ್ಡ ಬಜೆಟ್ಟಿನ ಕಬ್ಜ ಚಿತ್ರದ ಬಜೆಟ್ ಬಗ್ಗೆ ನೋಡುವುದಾದರೆ ಮೂಲಗಳ ಪ್ರಕಾರ ಕಬ್ಜ ಚಿತ್ರಕ್ಕೆ ಸುಮಾರು ಐವತ್ತರಿಂದ ಅರವತ್ತು ಕೋಟಿ ಹಣ ಖರ್ಚು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಷ್ಟು ಕಡಿಮೆ ಬಜೆಟ್ ಅಲ್ಲಿ ಉತ್ತಮ ಗುಣಮಟ್ಟದ ಚಿತ್ರ ಮಾಡಿದ್ದು ಸಿನಿರಸಿಕರಿಗೆ ಆಶ್ಚರ್ಯ ತರಿಸಿದೆ. ಚಿತ್ರದ ಪ್ರಚಾರದ ಕೆಲಸಗಳು ಇನ್ನುಮೇಲೆ ಶುರುವಾಗಲಿದ್ದು ಕಬ್ಜ ಚಿತ್ರದ ಬಜೆಟ್ ಇನ್ನೂ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಚಿತ್ರದ ಟೀಸರ್ ನಿನ್ನೆ ಸಂಜೆ ಬಿಡುಗಡೆ ಆಗಿದ್ದು ಇಂದು ಇಪ್ಪತ್ನಾಲ್ಕು ಗಂಟೆಯಲ್ಲಿ ಬರೋಬ್ಬರಿ ಹನ್ನೊಂದು ಮಿಲಿಯನ್ ವೀಕ್ಷಣೆಯನು ಪಡೆದು ಎಲ್ಲರ ಹುಬ್ಬೇರಿಸಿದೆ. ಈ ಚಿತ್ರದ ಮೂಲಕ ಡಿಸೆಂಬರ್ ಅಲ್ಲಿ ಕನ್ನಡ ಚಿತ್ರರಂಗ ಮತ್ತೊಮ್ಮೆ ಭಾರಿ ಸದ್ದು ಮಾಡಲಿದೆ.