ಟೀಮ್ ಇಂಡಿಯಾ ಜೆರ್ಸಿ ಬಣ್ಣದ ದುಬಾರಿ ಕಾರು ಖರೀದಿಸಿದ ರೋಹಿತ್ ಶರ್ಮ! ಬೆಲೆ ಸುಮಾರು ಎಷ್ಟು ಕೋಟಿ ಗೊತ್ತಾ? ನೋಡಿ ಒಮ್ಮೆ

ಭಾರತ ದೇಶದಲ್ಲಿ ಅತ್ಯಂತ ವಿರಳಾತಿ ವಿರಳ ಜನರ ಬಳಿ ಇರುವ ವಿಶೇಷವಾದ ಐಷಾರಾಮಿ ಕಾರ್ ವೊಂದನ್ನು ಖರೀದಿಸಿ ಸುದ್ದಿ ಆಗಿದ್ದಾರೆ ಟೀಮ್ ಇಂಡಿಯಾದ ಈ ಸ್ಟಾರ್ ಆಟಗಾರ..! ಇತ್ತೀಚೆಗೆ ಸಿನಿಮಾ ಸೆಲೆಬ್ರಿಟಿಗಳು ಐಷಾರಾಮಿ ಕಾರ್ ಕೊಳ್ಳುವ ಮೂಲಕ ಭಾರಿ ಸುದ್ದಿ ಆಗುತ್ತಿದ್ದಾರೆ. ಸಿನಿಮಾ ಮಂದಿ ಕಾರ್ ಕೊಂಡು ಕೊಳ್ಳುತ್ತಿರುವುದು ಇದೀಗ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಕ್ರಿಕೆಟ್ ಲೋಕದ ಕೆಲವೇ ಕೆಲವು ಸ್ಟಾರ್ ಕ್ರಿಕೆಟಿಗರು ಮಾತ್ರ ಕಾರ್ ಕ್ರೇಜ಼್ ಹೊಂದಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಟೀಮ್ ಇಂಡಿಯಾ ಮಾಜಿ ನಾಯಕ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ಪ್ರತಿಷ್ಟಿತ ಕಾರು ಹರಾಜು ಜಾಲತಾಣದ ಮುಖಾಂತರ ಕಾರ್ ವೊಂದನ್ನು ಖರೀದಿಸಿ ಸುದ್ದಿ ಆಗಿದ್ದರು. ಇದೀಗ ಪ್ರಸ್ತುತ ಟೀಮ್ ಇಂಡಿಯಾ ನಾಯಕ ಆಗಿರುವ ರೋಹಿತ್ ಶರ್ಮಾ ಕೂಡ ದುಬಾರಿ ಬೆಲೆಯ ಐಷಾರಾಮಿ ಕಾರ್ ಖರೀದಿ ಮಾಡಿ ಭಾರಿ ಸುದ್ದಿ ಆಗಿದ್ದಾರೆ.

ಕ್ರಿಕೆಟಿಗ ರೋಹಿತ್ ಶರ್ಮಾ ಮೂರು ಮಾದರಿಯ ಕ್ರಿಕೆಟ್ ಪಂದ್ಯಗಳಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಜವಬ್ದಾರಿ ಸ್ವೀಕರಿಸಿದ ನಂತರ ಭಾರತ ತಂಡ ಟಿ-ಟ್ವೆಂಟಿ, ಏಕ್ ದಿನ ವಿಶ್ವ ಕಪ್ ಸೇರಿದಂತೆ ಯಾವುದೇ ಪಂದ್ಯವನ್ನು ಸೋಲದೆ ಯಶಸ್ವಿಯಾಗಿ ಮುನ್ನೆಡೆಸಿಕೊಂಡು ಬರುತ್ತಿದ್ದಾರೆ. ಟೀಮ್ ಇಂಡಿಯಾ ಕ್ಯಾಪ್ಟನ್ ಆದ ನಂತರ ರೋಹಿತ್ ಶರ್ಮಾ ಅವರ ಲೈಫ್ ಸ್ಟೈಲ್ ಕೂಡ ಬದಲಾಗಿ ಬಿಟ್ಟಿದೆ. ಅದಕ್ಕೆ ಪೂರಕವಾಗಿ ಇತ್ತೀಚೆಗೆ ದುಬಾರಿ ಬೆಲೆಯ ಐಷಾರಾಮಿ ಕಾರ್ ಲ್ಯಾಂಬೋರ್ಗಿನಿ ಉರುಸ್ ಕಾರ್ ಖರೀದಿ ಮಾಡಿದ್ದಾರೆ. ರೋಹಿತ್ ಶರ್ಮಾ ಅವರಿಗೆ ಮೊದಲಿನಿಂದಲೂ ಈ ಐಷಾರಾಮಿ ಕಾರ್ ಖರೀದಿ ಮಾಡಬೇಕು ಎಂಬ ಕನಸಿತ್ತಂತೆ.

ಅದರಂತೆ ಇದೀಗ ತಮ್ಮ ನೆಚ್ಚಿನ ಲ್ಯಾಂಬೋರ್ಗಿನಿ ಉರುಸ್ ಲಕ್ಷುರಿ ಕಾರ್ ಕೊಂಡು ಕೊಂಡಿದ್ದಾರೆ. ವಿಶೇಷ ಅಂದರೆ ಟೀಮ್ ಇಂಡಿಯಾ ತಂಡದ ಜರ್ಸಿ ಬಣ್ಣದ ಕಾರನ್ನೇ ಖರೀದಿ ಮಾಡಿದ್ದಾರೆ. ಇದರ ಬೆಲೆ ಬರೋಬ್ಬರಿ ಮೂರು ಕೋಟಿ ಹತ್ತು ಲಕ್ಷ ಎಂದು ತಿಳಿದು ಬಂದಿದೆ. ಇದರ ಜೊತೆಗೆ ರೋಹಿತ್ ಶರ್ಮಾ ಅವರು ಹೆಚ್ಚುವರಿ ಆಗಿ ಈ ಕಾರಿಗೆ ಆಲ್ಟ್ರೇಶನ್ ಕೂಡ ಮಾಡಿಸಿಕೊಂಡಿದ್ದಾರೆ. ಈ ಲ್ಯಾಂಬೋರ್ಗಿನಿ ಉರುಸ್ ಕಾರು 22 ಇಂಚಿನ ಡೈಮಂಡ್ ಕಟ್ ರಿಮ್ ಗಳೊಂದಿಗೆ ಸ್ಪೋರ್ಟಿ ಲೆದರ್ ಇನ್ನರ್ ಡಿಸೈನಿಂಗ್ ಒಳಗೊಂಡಿದೆ. ಈ ಮೂಲಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಭಾರತದಲ್ಲಿ ಕೆಲವೇ ಕೆಲವು ಜನರು ಹೊಂದಿರುವ ಲ್ಯಾಂಬೋರ್ಗೀನಿ ಕಾರಿನ ಒಡೆಯರಾಗಿದ್ದಾರೆ.

Leave a Reply

%d bloggers like this: