ಟಾಟಾ ಕಾರು ಕೊಳ್ಳಬೇಕೆಂದವರಿಗೆ ಸ್ವಲ್ಪ ಬೆಲೆ ಏರಿಕೆಯ ಬಿಸಿ

ಕಾರು ಪ್ರಿಯರಿಗೆ ಟಾಟಾ ಮೋಟಾರ್ಸ್ ಕಂಪನಿ ಸೈಲೆಂಟಾಗಿ ತನ್ನ ವಿವಿಧ ಮಾದರಿಗಳ ಕಾರಿನ ಬೆಲೆ ಏರಿಕೆ ಮಾಡುವ ಮೂಲಕ ಶಾಕ್ ವೊಂದನ್ನ ನೀಡಿದೆ. ಆಟೋ ಮೊಬೈಲ್ ಕ್ಷೇತ್ರದಲ್ಲಿ ಒಂದಲ್ಲ ಒಂದು ರೀತಿಯಾಗಿ ತಂತ್ರಜ್ಞಾನ ಹೊಸ ಆವಿಷ್ಕಾರಗಳು ನಡೆಯುತ್ತಿರುತ್ತವೆ. ಇತರೆ ಕ್ಷೇತ್ರಗಳಲ್ಲಿ ಪೈಪೋಟಿ ಇರುವಂತೆ ಕಾರು ಮಾರುಕಟ್ಟೆಯಲ್ಲಿಯೂ ಕೂಡ ಭಾರಿ ಪೈಪೋಟಿ ಇರುತ್ತವೆ. ಅದರಂತೆ ಜಿ.ಎಸ್.ಟಿ ಮತ್ತು ಇನ್ನಿತರ ಕಚ್ಚಾ ಸಲಕರಣಿಗಳ ಎಲ್ಲಾ ಬೆಲೆಯು ಹೆಚ್ಚಾಗಿರುವುದರಿಂದ ಕಾರುಗಳ ಬೆಲೆಯನ್ನ ಕೂಡ ಏರಿಕೆ ಮಾಡಬಹುದಾಗಿರುತ್ತದೆ. ಹೌದು ಟಾಟಾ ಮೋಟಾರ್ಸ್ ತನ್ನ ಸಂಸ್ಥೆಯ ಎಲ್ಲಾ ಕಾರಿನ ಬೆಲೆಯಲ್ಲಿ 0.55ರಿಂದ ಶೇಕಡಾ1.50ರಷ್ಟು ಏರಿಕೆ ಮಾಡಲಾಗಿದೆ. ಟಾಟಾ ಮೋಟಾರ್ಸ್ ಈ ಹೊಸ ವರ್ಷದಿಂದೀಚೆಗೆ ಬರೋಬ್ಬರಿ ಮೂರನೇ ಬಾರಿ ಈ ಬೆಲೆ ಏರಿಕೆ ಮಾಡಲಾಗಿದೆ.

ಕಳೆದ ಬಾರಿ ಟಾಟಾ ಮೋಟಾರ್ಸ್ ತನ್ನ ಕಾರಿನ ಬೆಲೆಯಲ್ಲಿ ಶೇಕಡಾ 1ರಿಂದ 2ರಷ್ಟು ಬೆಲೆ ಏರಿಕೆ ಮಾಡಿತ್ತು. ಈ ಬೆಲೆ ಏರಿಕೆಯ ನಿಯಮ ಈ ಜುಲೈ ತಿಂಗಳ 9ರಿಂದ ಜಾರಿ ಮಾಡಲಾಗಿತ್ತು. ಆಟೋ ಬಿಡಿ ಭಾಗಗಳು ಮತ್ತು ತಯಾರಕ, ಇನ್ನಿತರ ವೆಚ್ಚಗಳ ಪರಿಣಾಮ ಅನಿವಾರ್ಯವಾಗಿ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಕಾರುಗಳ ಬೆಲೆಯನ್ನ ಏರಿಕೆ ಮಾಡಿದೆ. ಈ ಒಂದು ಹೊಸ ಬೆಲೆಯಲ್ಲಿ ನೋಡುವುದಾದರೆ ಒಂದು ಕಾರಿನ ಮೇಲೆ ಸರಿ ಸುಮಾರು 17,000 ವರೆಗೆ ಏರಿಕೆ ಕಂಡಿದೆಯಂತೆ. ಟಾಟಾ ಮೋಟಾರ್ಸ್ ಅವರ ನೆಕ್ಸಾನ್ ಮಾಡೆಲ್ಲಿನ ಕಾರಿನ ಬೆಲೆಯು ಗರಿಷ್ಠ 17,000 ರೂ.ವರೆಗೆ ಏರಿಕೆ ಮಾಡಲಾಗಿದೆ. ಸಫಾರಿ ಕಾರಿನ ವಿವಿಧ ಮಾದರಿಯ ಕಾರಿನ ಬೆಲೆಯಲ್ಲಿ 15,000 ರೂವರೆಗೆ ಏರಿಕೆ ಮಾಡಲಾಗಿದೆ. ಹ್ಯಾರಿಯರ್ ಕಾರಿನ ಬೆಲೆಯಲ್ಲಿ 10 ಸಾವಿರಗಳವರೆಗೆ ವ್ಯತ್ಯಾಸ ಕಾಣಬಹುದಾಗಿದೆ.

ಇನ್ನು ಅದೇ ರೀತಿಯಾಗಿ ಟಾಟಾ ಮೋಟಾರ್ಸಿನ ಟಿಯಾಗೋ, ಟಿಯಾಗೋ ಎನ್‌.ಆರ್.ಜಿ ಮತ್ತು ಟಿಗೋರ್ ಕಾರಿನ ಬೆಲೆ ತಲಾ ಐದು ಸಾವಿರ ವರೆಗೆ ಏರಿಕೆ ಕಂಡಿದೆ. ಅದಲ್ಲದೆ ಇತ್ತೀಚೆಗೆ ಭಾರಿ ಬೇಡಿಕೆಯನ್ನೊಂದಿರುವ ಟಾಟಾ ಮೋಟಾರ್ ನ ಎಲೆಕ್ಟ್ರಿಕ್ ಕಾರ್ ಗಳ ಬೆಲೆಯು ಕೂಡ ಶೇಕಡ 1ರಷ್ಟು ಏರಿಕೆ ಮಾಡಲಾಗಿದೆ. ಹುಂಡ್ಯೈ ಕಂಪನಿ ಮತ್ತು ಟಾಟಾ ಮೋಟಾರ್ಸ್ ನಡುವೆ ಭಾರಿ ಪೈಪೋಟಿ ವ್ಯವಹಾರ ವ್ಯಾಪಾರ ನಡೆಯುತ್ತದೆ. ಇನ್ನು ಟಾಟಾ ಮೋಟಾರ್ಸ್ ಕಂಪನಿಯ ನೆಕ್ಸಾನ್ ಮಾದರಿಯ ಕಾರುಗಳು ಬರೋಬ್ಬರಿ 29ವೇರಿಯೆಂಟ್ ಗಳನ್ನ ಹೊಂದಿದ್ದು, ಎಕ್ಸ್ ಎಮ್ ಪ್ಲಸ್ ಎಸ್ ವೆರಿಯೆಂಟ್ ಪೆಟ್ರೋಲ್ ಅಂಡ್ ಡೀಸೆಲ್ ಇಂಜಿನ್ ಆಯ್ಕೆಗಳನ್ನೊಂದಿದೆ. ಈ ಕಾರುಗಳ ಬೆಲೆಯಲ್ಲಿಯೂ ಸಹ ಶೇಕಡ 1ರಷ್ಟು ಏರಿಕೆ ಆಗಿದೆ ಎಂದು ಸಂಸ್ಥೆ ತಿಳಿಸಿದೆ. ಟಾಟಾ ಮೋಟಾರ್ಸ್ ಕಂಪನಿಯು ಕಳೆದ ಡಿಸೆಂಬರ್ ತಿಂಗಳಿನಿಂದ ಅತ್ಯುತ್ತಮವಾಗಿ ಮಾರಾಟವಾಗಿ ಎರಡನೇ ಸ್ಥಾನದಲ್ಲಿದ್ದು, ನಂತರದ ದಿನಗಳಲ್ಲಿ ಬೆಲೆ ಏರಿಕೆ ಕಾರಣವೋ ಅಥವಾ ಇನ್ಯಾವುದೋ ಕಾರಣಗಳಿಂದಾಗಿ ಟಾಟಾ ಮೋಟಾರ್ಸ್ ಮೂರನೇ ಸ್ಥಾನದಲ್ಲಿ ಬಂದು ನಿಂತಿದೆ.

Leave a Reply

%d bloggers like this: