ತನ್ನ ಶರೀರ, ಮನಸ್ಸು, ಹಣ ಎಲ್ಲವು ಆತನಿಗೆ ಕೊಟ್ಟಳು, ಗರ್ಭವತಿ ಕೂಡ ಆದಳು, ನಂತರ ಆಗಿದ್ದೇನು ಗೊತ್ತಾ?

ಬೆಳ್ಳಿ ಪರದೆಯಲ್ಲಿ ಬಣ್ಣದ ಬದುಕಿನ ಕರಾಳ ಕತ್ತಲೆಯ ಲೋಕದಲ್ಲಿ ಕರಗಿದ ಈ ನಟಿಯ ವೈಯಕ್ತಿಕ ಬದುಕಿನ ಕಥೆ ನಿಜಕ್ಕೂ ಕೂಡ ನಿಮ್ಮ ಮನಸ್ಸನ್ನು ಭಾರ ಮಾಡಿ ಕಣ್ಣೀರಾಕಿಸುವುದರಲ್ಲಿ ಸಂಶಯವಿಲ್ಲ. ಬಣ್ಣದ ಲೋಕ ನಯನಗಳಿಗೆ ಕಾಣುವಂತೆ ಸುಂದರವಾಗಿ ವಾಸ್ತವದಲ್ಲಿ ಇರುವುದಿಲ್ಲ. ಇಂದು ಬೆಳ್ಳಿ ಪರದೆಯ ಮೇಲೆ ಮಿಂಚುವ ಅದೆಷ್ಟೋ ನಟ-ನಟಯರಲ್ಲಿ ಅನುಭವಿಸಲಾಗಷ್ಟು ನೋವುಗಳಿರುತ್ತವೆ. ಅಂತಹ ನಟಿಯರ ಪೈಕಿ ಹಿಂದಿ ಚಿತ್ರರಂಗದ ಯುವ ನಟಿ ಜಿಯಾ ಖಾನ್ ಕೂಡ ಒಬ್ಬರು. ಬಾಲಿವುಡ್ ಅಂದಾಕ್ಷಣ ಎಲ್ಲರನ್ನ ಕಣ್ಣರಳಿಸಿ ನೋಡುವಂತೆ ಮಾಡುತ್ತದೆ. ಇಲ್ಲಿರುವಂತಹ ವಿಲಾಸಿ ಬದುಕು, ಹಣದ ಅಮಲು ಮತ್ತೆಲ್ಲೋ ಇಲ್ಲ ಎಂದೂ ಕೂಡ ಹೇಳಲಾಗುತ್ತದೆ.

ಅಂತೆಯೇ ಯುವ ನಟಿ ಜಿಯಾ ಖಾನ್ ಸೌಂದರ್ಯಕ್ಕೆ ಮರುಳಾಗಿ ತನ್ನ ಜೀವನವನ್ನೇ ಬಲಿಯಾಗಿಸಿಕೊಂಡು ಕಥೆಯನ್ನು ತಿಳಿದುಕೊಳ್ಳುವ ಮುನ್ನ ಅವರ ಹಿನ್ನೆಲೆ ತಿಳಿದುಕೊಳ್ಳೋಣ. ಜಿಯಾ ಖಾನ್ ಅವರ ತಾಯಿ ರಭಿಯಾ. ಇವರು ಪಾಕಿಸ್ತಾನ ಮೂಲದ ಉದ್ಯಮಿಯನ್ನ ಮದುವೆ ಆಗುತ್ತಾರೆ. ಇವರಿಬ್ಬರು ಒಂದಷ್ಟು ವರ್ಷಗಳ ದಾಂಪತ್ಯ ಜೀವನವನ್ನು ಸುಂದರವಾಗಿಯೇ ನಡೆಸುತ್ತಾರೆ. ಅದಕ್ಕೆ ಸಾಕ್ಷಿಯಾಗಿ ಮೂವರು ಮಕ್ಕಳು ಕೂಡ ಆಗುತ್ತವೆ. ಅವುಗಳಲ್ಲಿ ಜಿಯಾ ಖಾನ್ ಮೂರನೇ ಅವಳು. ಇದಾದ ಬಳಿಕ ರಭಿಯಾ ಅವರ ಪತಿ ತಮ್ಮ ದೇಶಕ್ಕೆ ಹೊರಟು ಹೋಗುತ್ತಾರೆ. ಇಂತಹ ಕಠಿಣ ಸಂಧರ್ಭದಲ್ಲಿ ರಭಿಯಾ ತನ್ನ ಮಗಳನ್ನ ಕರೆದುಕೊಂಡು ಭಾರತಕ್ಕೆ ಬರುತ್ತಾರೆ.

ಇಲ್ಲಿ ಅವರ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯುತ್ತಾರೆ. ಹೀಗೆ ಬಣ್ಣದ ಲೋಕದಲ್ಲಿ ಮಿಂಚಬೇಕು ಎಂಬ ಆಸೆಯಿದ್ದ ರಭಿಯಾ ಅವರನ್ನ ಬಾಲಿವುಡ್ ಕೈ ಬೀಸಿ ಕರೆಯುತ್ತದೆ. ಅಂತೆಯೇ ಅನೇಕ ಏಳು ಬೀಳು ಶ್ರಮವಹಿಸಿ ಬಾಲಿವುಡ್ ನಲ್ಲಿ ಫೇಮಸ್ ನಟಿ ಕೂಡ ಆಗುತ್ತಾರೆ ನಟಿ ರಭಿಯಾ. ಇನ್ನು ರಭಿಯಾ ಅವರ ಕಿರಿಯ ಪುತ್ರಿ ಜಿಯಾ ಖಾನ್ ತನ್ನ ತಾಯಿಯಂತೆ ತಾನೂ ಕೂಡ ಬಾಲಿವುಡ್ ನಲ್ಲಿ ಮಿಂಚಬೇಕು ಎಂದು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ರನ್ನ ಭೇಟಿ ಮಾಡಲು ಅಮೆರಿಕಾದಿಂದ ಮುಂಬೈಗೆ ಬರುತ್ತಾರೆ.ಇದೇ ಸಂಧರ್ಭದಲ್ಲಿ ಆರ್.ಜಿ.ವಿ.ಕೂಡ ತಮ್ಮ ನಿಶಬ್ದ ಎಂಬ ಚಿತ್ರಕ್ಕೆ ಹೊಸ ನಟಿಯನ್ನ ಹುಡುಕಾಟ ನಡೆಸುತ್ತಿರುತ್ತಾರೆ.

ಅದೇ ಸಮಯಕ್ಕೆ ಜಿಯಾ ಖಾನ್ ಕೂಡ ಸಿಕ್ಕ ಕಾರಣ ನಿಶಬ್ದ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಅವರೊಟ್ಟಿಗೆ ನಟಿಸುವ ಅವಕಾಶ ಪಡೆಯುತ್ತಾರೆ ಜಿಯಾ ಖಾನ್. ಈ ಮೂಲಕ ತನ್ನ ಚೊಚ್ಚಲ ಚಿತ್ರದಲ್ಲೇ ಬಿಗ್ ಬಿ ಜೊತೆ ನಟಿಸುವ ಅವಕಾಶ ಪಡೆಯುತ್ತಾರೆ. ಆದರೆ ಈ ಸಿನಿಮಾ ನಿರೀಕ್ಷೆಗೆ ತಕ್ಕಂತೆ ಯಶಸ್ಸು ಕಾಣುವುದಿಲ್ಲ. ತದ ನಂತರ ಜಿಯಾ ಖಾನ್ ಗಜಿನಿ ಮತ್ತು ಹೌಸ್ ಫುಲ್ ಸಿನಿಮಾಗಳಲ್ಲಿ ಅಪಾರ ಜನಪ್ರಿಯತೆ ಗಳಿಸುತ್ತಾರೆ. ಈ ಮೂಲಕ ಬಾಲಿವುಡ್ ಬೇಡಿಕೆಯ ನಟಿಯಾಗಿ ಗುರುತಿಸುಕೊಳ್ಳುತ್ತಾರೆ ಜಿಯಾ ಖಾನ್. ಬಾಲಿವುಡ್ ನಲ್ಲಿ ಯಶಸ್ಸು ಸಿಕ್ಕ ಮೇಲೆ ನಟಿ ಜಿಯಾ ಖಾನ್ ಬಿ-ಟೌನ್ ಭಾರಿ ಸುದ್ದಿಯಾಗುವುದು ಪಾರ್ಟಿಗಳ ಮೂಲಕ‌.

ಅನೇಕ ಪಾರ್ಟಿಯಲ್ಲಿ ಭಾಗವಹಿಸುತ್ತಾ ಒಂದಷ್ಟು ಸ್ನೇಹಿತರು ಪರಿಚಯರಾಗುತ್ತಾರೆ. ಅಂತಹವರ ಪೈಕಿ ಆದಿತ್ಯ ಪಾಂಚಾಲಿ ಅವರ ಪುತ್ರ ಸೂರಜ್ ಕೂಡ ಒಬ್ಬರು. ಪಾರ್ಟಿಯಲ್ಲಿ ಪರಿಚಯವಾದ ಸೂರಜ್ ಅವರೊಂದಿಗೆ ಜಿಯಾ ಖಾನ್ ಉತ್ತಮ ಸ್ನೇಹ ಸಂಬಂಧ ಹೊಂದುತ್ತಾರೆ. ಇಬ್ಬರ ನಡುವೆ ಸ್ನೇಹ ಗಾಢವಾಗಿ ಪ್ರೀತಿಗೆ ತಿರುಗುತ್ತದೆ. ಸೂರಜ್ ಅವರ ಸೌಂದರ್ಯಕ್ಕೆ ಮನಸೋತ ಜಿಯಾ ಖಾನ್ ಸಂಪೂರ್ಣವಾಗಿ ಅವನನ್ನ ನಂಬುತ್ತಾಳೆ. ಆದರೆ ಸೂರಜ್ ಗೆ ಈ ಮೊದಲೇ ಅನೇಕ ಹುಡುಗಿಯರ ಜೊತೆ ಸಂಬಂಧ ಇರುತ್ತದೆ. ಆದರೆ ಈ ಸತ್ಯ ಅರಿಯುವ ಮುನ್ನ ಜಿಯಾ ಖಾನ್ ಸೂರಜ್ ನೊಂದಿಗೆ ಎಲ್ಲಾ ರೀತಿಯ ಸಂಬಂಧವನ್ನು ಕೂಡ ಹೊಂದಿರುತ್ತಾರೆ.

ಆಗಷ್ಟೊತ್ತಿಗೆ ಸೂರಜ್ ಜಿಯಾ ಖಾನ್ ಅವರ ಬಳಿ ಬೇಕಾದಷ್ಟು ಹಣವನ್ನು ಪಡೆದು ಎಂಜಾಯ್ ‌ಮಾಡಿರುತ್ತಾನೆ. ಅದಲ್ಲದೆ ನಟಿ ಜಿಯಾ ಖಾನ್ ಅವರನ್ನ ದೈಹಿಕವಾಗಿ ಬಳಸಿಕೊಂಡಿರುತ್ತಾನೆ. ಗರ್ಭಿಣಿಯಾದ ಜಿಯಾ ಖಾನ್ ಸೂರಜ್ ಅವರಿಗೆ ಮದುವೆ ವಿಚಾರವಾಗಿ ಮಾತನಾಡಿದಾಗ ಸೂರಜ್ ಒಪ್ಪುವುದಿಲ್ಲ. ಆಗ ನಟಿ ಜಿಯಾ ಖಾನ್ ತಾನು ಮೋಸ ಹೋಗಿರುವುದು ತಿಳಿಯುತ್ತದೆ. ಆಗ ನಟಿ ಜಿಯಾಖಾನ್ ನೋವಿನಿಂದ ಅನಿವಾರ್ಯವಾಗಿ ಗರ್ಭಪಾತ ಮಾಡಿಸುತ್ತಾರೆ. ಕೇವಲ ತನ್ನ ಸೌಂದರ್ಯದ ವ್ಯಾಮೋಹಕ್ಕಾಗಿ ಹಣ, ಗೌರವ, ಶೀಲವನ್ನು ಕೂಡ ಕಳೆದುಕೊಂಡು ಕೊನೆಗೆ ದಿಕ್ಕಿಲ್ಲದ ರೀತಿ ತನ್ನ ಬದುಕನ್ನ ತಾನೇ ಹಾಳು ಮಾಡಿಕೊಂಡ ನಟಿ ಜಿಯಾ ಖಾನ್ ಅವರ ಬಣ್ಣದ ಬದುಕು ನಿಜಕ್ಕೂ ಕೂಡ ದುರಂತವೇ ಸರಿ ಎನ್ನಬಹುದು.

Leave a Reply

%d bloggers like this: