ತನ್ನ ಮಗಳು ಸುಹಾನಾಳನ್ನು ಮನೆಗೆ ಬರಬೇಡ ಎಂದ ಬಾಲಿವುಡ್ ಬಾದ್-ಶಾ ಶಾರುಖ್ ಖಾನ್..! ಇದೇ ಕಾರಣಕ್ಕೆ

ತನ್ನ ಮಗಳಿಗೆ ಮನೆಗೆ ಬರಬೇಡ ಎಂದ ಬಾಲಿವುಡ್ ಬಾದ್-ಶಾ ಶಾರುಖ್ ಖಾನ್..! ಕಳೆದೊಂದು ತಿಂಗಳಿಂದ ಮಗನ ಸಂಕಷ್ಟ ಪರಿಸ್ಥಿತಿ ಕಂಡು ತೀರ್ವ ಆತಂಕದಲ್ಲಿರುವ ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಅವರು ಸಂಪೂರ್ಣವಾಗಿ ಕಂಗೆಟ್ಟಿದ್ದಾರೆ.ಸದಾ ಸಿನಿಮಾ,ಜಾಹೀರಾತು ಅಂತ ಬಿಝಿಯಾಗಿರುತ್ತಿದ್ದ ಶಾರುಖ್ ಖಾನ್ ಇದೀಗ ತಮ್ಮ ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಜೈಲು ಪಾಲಾಗಿರುವುದರಿಂದ ತಮ್ಮ ಎಲ್ಲಾ ಕೆಲಸ ಕಾರ್ಯಗಳಿಗೆ ಬ್ರೇಕ್ ಹಾಕಿ ಮಗನ ಭವಿಷ್ಯದ ಕುರಿತು ಚಿಂತಿತರಾಗಿದ್ದಾರೆ. ಇತ್ತೀಚೆಗೆ ತಾನೇ ಪಾನ್ ಮಸಾಲಾ ಜಾಹೀರಾತುವೊಂದರ ಚಿತ್ರೀಕರಣವನ್ನು ಮುಂದೂಡಿದ್ದಾರೆ.ಜೊತೆಗೆ ಅಟ್ಲೀ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದ ಸಿನಿಮಾ ಚಿತ್ರೀಕರಣದಿಂದ ಕೂಡ ದೂರ ಉಳಿದಿದ್ದಾರೆ.ಅಕ್ಟೋಬರ್ 3 ರಂದು ಎನ್.ಸಿ. ಬಿ.ಅಧಿಕಾರಿಗಳು ಡ್ರಗ್ಸ್ ಸೇವಿಸಿದ್ದಾರೆಂದು ಶಾರುಕ್ ಪುತ್ರ ಆರ್ಯನ್ ಖಾನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ತದ ನಂತರ ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ.

ಸದ್ಯಕ್ಕೆ ನ್ಯಾಯಾಂಗ ಬಂಧನದಲ್ಲಿರುವ ಆರ್ಯನ್ ಖಾನ್ ಆರ್ಥರ್ ಕಾರಾಗೃಹದಲ್ಲಿ ದಿನ ಕಳೆಯುವಂತಾಗಿದೆ. ತನ್ನ ಸೋದರ ಅರೆಸ್ಟ್ ಆಗಿ ಜೈಲಿನಲ್ಲಿರುವ ವಿಚಾರ ತಿಳಿದು ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಕರೆ ಮಾಡಿ ನಾನು ಮುಂಬೈಗೆ ಬರುವುದಾಗಿ ಹೇಳುತ್ತಿದ್ದಾರೆ.ಆದರೆ ಶಾರುಖ್ ಖಾನ್ ತನ್ನ ಮಗಳಿಗೆ ಮನೆಗೆ ಬರುವುದು ಬೇಡ ನೀನು ಅಲ್ಲೇ ಇರು ಎಂದು ಸಮಾಧಾನ ಮಾಡಿ ಧೈರ್ಯ ಹೇಳುತ್ತಿದ್ದಾರಂತೆ.ನಟ ಶಾರುಖ್ ಖಾನ್ ಅವರಿಗೆ ಮೂವರು ಮಕ್ಕಳು ಆರ್ಯನ್ ಖಾನ್,ಸುಹಾನಾ ಖಾನ್ ಮತ್ತು ಅಬ್ರಾಂ ಖಾನ್.ಮಗಳು ಸುಹಾನಾ ಖಾನ್ ಉನ್ನತ ವ್ಯಾಸಂಗಕ್ಕಾಗಿ ಅಮೇರಿಕಾ ನ್ಯೂಯಾರ್ಕ್ ಗೆ ನಲ್ಲಿದ್ದಾರೆ.

ತನ್ನ ಸೋದರ ಡ್ರಗ್ಸ್ ಸೇವನೆ ಪಡದಿದ್ದಾನೆ ಎಂಬ ಆರೋಪದಡಿ ಮುಂಬೈ ಎನ್.ಸಿ.ಬಿ.ಅಧಿಕಾರಿಗಳು ಆರ್ಯನ್ ಖಾನ್ ನನ್ನ ಅರೆಸ್ಟ್ ಮಾಡಿದ್ದಾರೆ ಎಂದಾಗಿನಿಂದ ಸುಹಾನಾ ಖಾನ್ ಅವರ ಆರೋಗ್ಯ ಕೆಟ್ಟು ಮಾನಸಿಕವಾಗಿ ಕುಗ್ಗಿದ್ದಾರಂತೆ.ನ್ಯುಯಾರ್ಕ್ ನಲ್ಲಿರುವ ಸುಹಾನಾ ಆಗಾಗ ತನ್ನ ತಂದೆ ತಾಯಿ ಗೆ ಕರೆ ಮಾಡಿ ಇಲ್ಲಿನ ವಾಸ್ತವ ಸ್ಥಿತಿಯ ಬಗ್ಗೆ ತಿಳಿದುಕೊಳ್ಳುತ್ತಿರುತ್ತಾರಂತೆ. ಅಂತೆಯೇ ಇತ್ತೀಚೆಗೆ ಶಾರುಖ್ ಖಾನ್ ಅವರಿಗೆ ಕರೆ ಮಾಡಿ ನಾನು ಮುಂಬೈಗೆ ಬರುತ್ತೇನೆ ಎಂದಾಗ ಸುಹಾನಾ ಅವರಿಗೆ ನೀನು ಇಲ್ಲಿಗೆ ಬರಬೇಡ ನೀನು ನಿನ್ನ ಕ್ಷೇಮವನ್ನು ನೋಡಿಕೋ ಎಂದು ಧೈರ್ಯ ಹೇಳಿದ್ದಾರಂತೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದರೆ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: