ತನ್ನ ಜೀವನದ ಆ ಒಂದು ತಪ್ಪಿಗೆ ಈಗಲೂ ಕಣ್ಣೀರು ಹಾಕುತ್ತಿರುವ ರಾಧಿಕಾ ಕುಮಾರಸ್ವಾಮಿ! ಆಗಿದ್ದೇನು ಗೊತ್ತಾ

ಒಂದು ವರ್ಷ ಪ್ರದರ್ಶನ ಕಂಡು ಸ್ಯಾಂಡಲ್ ವುಡ್ ನಲ್ಲಿ ದಾಖಲೆ ಬರೆದಂತಹ ಈ ಸೂಪರ್ ಹಿಟ್ ಸಿನಿಮಾದಲ್ಲಿ ಈ ನಟಿ ನಟಿಸಬೇಕಿತ್ತಂತೆ. ಈ ಅವಕಾಶ ಮಿಸ್ ಮಾಡಿಕೊಂಡಿದ್ದಕ್ಕಾಗಿ ಈ ಖ್ಯಾತ ನಟಿ ಇಂದಿಗೂ ಕೂಡ ಕೊರಗುತ್ತಿದ್ದಾರೆ. ಈ ಸಿನಿ ಲೋಕದಲ್ಲಿ ಯಾರು ಯಾವಾಗ ಏನು ಆಗುತ್ತಾರೆ ಎಂಬುದನ್ನ ಊಹೆ ಕೂಡ ಮಾಡಲಾಗುವುದಿಲ್ಲ. ಕೆಲವು ಸ್ಟಾರ್ ನಟರಿಗೆ ಕೆಲವೊಮ್ಮೆ ಅವಕಾಶಗಳೇ ಸಿಗುವುದಿಲ್ಲ. ಇನ್ನು ಕೆಲವು ಆವ್ರೇಜ್ ನಟರಿಗೆ ಸಾಲು ಸಾಲು ಸಿನಿಮಾಗಳ ಅವಕಾಶ ಒದಗಿ ಬರುತ್ತಿಲೇ ಇರುತ್ತದೆ. ಸಿನಿಮಾಗಳು ಹಿಟ್ ಅಥವಾ ಪ್ಲಾಪ್ ಆಗಬಹುದು ಅದು ಎರಡನೇ ಪ್ರಶ್ನೆ ಆದರೆ ಸಿನಿಮಾದ ಕಥೆ ಕೇಳಿದಾಗ ಒಪ್ಪಿಗೆ ಆಗದಿದ್ದಾಗ ಅಥವಾ ಮತ್ತೊಂದು ಚಿತ್ರದ ಡೇಟ್ ಕ್ಲ್ಯಾಶ್ ಆಗುತ್ತದೆ ಎಂಬ ಕಾರಣಕ್ಕಾಗಿ ಕೆಲವೊಮ್ಮೆ ಹುಡುಕಿಕೊಂಡು ಬಂದಂತಹ ಅವಕಾಶವನ್ನು ಸ್ಟಾರ್ ನಟ-ನಟಿಯರೇ ರಿಜೆಕ್ಟ್ ಮಾಡಿ ಬಿಡುತ್ತಾರೆ. ಅದೇ ರೀತಿಯಾಗಿ ನಟಿ ರಾಧಿಕಾ ಕುಮಾರ ಸ್ವಾಮಿ ಅವರು ಕೂಡ ತಮಗೆ ಬಂದಿದ್ದಂತಹ ಸ್ಟಾರ್ ನಟನ ಸಿನಿಮಾವನ್ನು ತಾವೇ ಕೈಯ್ಯಾರೆ ಮಿಸ್ ಮಾಡಿಕೊಂಡರಂತೆ.

ಹೌದು ನಟಿ ರಾಧಿಕಾ ಕುಮಾರ ಸ್ವಾಮಿ ಅವರು ಚಂದನವನದ ಸುಂದರ ನಟಿಯರ ಪೈಕಿ ಮೊದಲ ಪಂಕ್ತಿಯಲ್ಲಿ ನಿಲ್ಲುತ್ತಾರೆ.ಇಂತಹ ಸ್ಪೂರದ್ರೂಪಿ ನಟಿ ರಾಧಿಕಾ ಕುಮಾರ ಸ್ವಾಮಿ ಅವರಿಗೆ ಸಿನಿಮಾಗಳ ಅವಕಾಶದ ಕೊರತೆ ಎಂಬುದು ಇಲ್ಲ. ರಾಧಿಕಾ ಕುಮಾರಸ್ವಾಮಿ ಅವರು ಜನಪ್ರಿಯತೆಯ ಉತ್ತುಂಗದಲ್ಲಿದ್ದ ಸಂಧರ್ಭದಲ್ಲಿ ನಿರ್ದೇಶಕ ಪ್ರಕಾಶ್ ಅವರು ಒಂದು ಕಥೆಯನ್ನ ಹೇಳುತ್ತಾರಂತೆ. ಈ ಕಥೆ ಬೇರಾವುದೂ ಅಲ್ಲ. ಮಿಲನ ಸಿನಿಮಾದ ಕಥೆ. ಈ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕ ನಟರಾಗಿ ಅಭಿನಯಿಸಿದ್ದಾರೆ. ನಟಿಯಾಗಿ ಮಲೆಯಾಳಂ ಚಿತ್ರದ ಖ್ಯಾತ ನಟಿ ಪಾರ್ವತಿ ಮೆನನ್ ಅವರು ಪುನೀತ್ ಗೆ ಜೋಡಿಯಾಗಿ ನಟಿಸಿದ್ದರು. ರಂಗಾಯಣ ರಘು, ಸಿಹಿ ಕಹಿ ಚಂದ್ರು, ಮುಖ್ಯ ಮಂತ್ರಿ ಚಂದ್ರು, ಸುಮಿತ್ರಾ ಹೀಗೆ ದಿಗ್ಗಜ ನಟರ ತಾರಾಗಣವಿದ್ದಂತಹ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ರಾಧಿಕಾ ಅವರಿಗೆ ಅವಕಾಶ ಒದಗಿ ಬಂದಿತ್ತಂತೆ.

ಆದರೆ ಅದೇ ಸಂಧರ್ಭದಲ್ಲಿ ನಟಿ ರಾಧಿಕಾ ಪಂಡಿತ್ ಅವರು ಚಾಲೇಂಜಿಂಗ್ ಸ್ಟಾರ್ ದರ್ಶನ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಮಲ್ಟಿ ಸ್ಟಾರ್ ಸಿನಿಮಾ ಸಾಧುಕೋಕಿಲ ನಿರ್ದೇಶನದ ಅನಾಥರು ಚಿತ್ರಕ್ಕೆ ಸಹಿ ಮಾಡಿದ್ದರಂತೆ. ಹೀಗಾಗಿ ಎರಡು ಚಿತ್ರದ ಶೂಟಿಂಗ್ ಡೇಟ್ ಸಮಸ್ಯೆ ಎದುರಾದ ಕಾರಣ ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಮಿಲನ ಸಿನಿಮಾವನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲವಂತೆ. ಆದರೆ ಈ ಮಿಲನ ಸಿನಿಮಾವನ್ನು ಕೈ ಬಿಟ್ಟಿದ್ದಕ್ಕಾಗಿ ನಟಿ ರಾಧಿಕಾ ಕುಮಾರಸ್ವಾಮಿ ಅವರು ಇಂದಿಗೂ ಕೂಡ ತುಂಬಾ ಬೇಸರ ವ್ಯಕ್ತಪಡಿಸುತ್ತಾರಂತೆ. ಒಟ್ಟಾರೆಯಾಗಿ ಮಿಲನ ಸಿನಿಮಾ ಬರೋಬ್ಬರಿ ಒಂದು ವರ್ಷಗಳ ಕಾಲ ಪ್ರದರ್ಶನ ಕಂಡು ಕನ್ನಡ ಸಿನಿಮಾರಂಗದಲ್ಲಿ ದಾಖಲೆ ನಿರ್ಮಿಸಿತು.

Leave a Reply

%d bloggers like this: