ತನ್ನ ದತ್ತು ಮಕ್ಕಳಿಗಾಗಿ ಸನ್ನಿ ಲಿಯೋನ್ ಕಟ್ಟಿಸಿದ ಬಂಗಲೆ ಮೊದಲ ಬಾರಿಗೆ ತೋರಿಸುತ್ತೇವೆ ನೋಡಿ

ಬಾಲಿವುಡ್ ಖ್ಯಾತ ಮಾದಕ ನಟಿಯಾದ ಸನ್ನಿಲಿಯೋನ್ ತನ್ನ ಬೋಲ್ಡ್ ನಟನೆಯಿಂದ ಮಾತ್ರವಲ್ಲದೆ ತಮ್ಮ ಸಾಮಾಜಿಕ ಸೇವಾ ಉದಾತ್ತ ಗುಣಗಳಿಂದಲೂ ಕೂಡ ಅಪಾರ ಅಭಿಮಾನ ಗಳಿಸಿದ್ದಾರೆ.ನಟಿ ಸನ್ನಿಲಿಯೋನ್ ಅವರ ಅಭಿಮಾನಿ ಬಳಗ ಮಂಡ್ಯದಲ್ಲಿಯೂ ಕೂಡ ತಲೆಯೆತ್ತಿದೆ.ಇತ್ತೀಚೆಗೆ ಸನ್ನಿಲಿಯೋನ್ ಜನ್ಮದಿನದ ಪ್ರಯುಕ್ತ ಮಂಡ್ಯದ ಪ್ರಮುಖ ರಸ್ತೆಯೊಂದರಲ್ಲಿ ಬ್ಯಾನರ್ ಹಾಕಿ ಪುಷ್ಪಾರ್ಚನೆ ಮಾಡಿ ಹರ್ಷೋದ್ಗಾರದಿಂದ ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡಿದ್ದರು.ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ ಸನ್ನಿಲಿಯೋನ್ ಆಗಾಗ ಒಂದಷ್ಟು ತಮ್ಮ ದಿನನಿತ್ಯದ ಅಪ್ ಡೇಟ್ಸ್ ಗಳನ್ನ ನೀಡುತ್ತಾ ಇರುತ್ತಾರೆ.ಇನ್ನು ನಟಿ ಸನ್ನಿ ಲಿಯೋನ್ ಕನ್ನಡದ ಚಿತ್ರಗಳಲ್ಲಿಯೂ ಕೂಡ ನಟಿಸಿದ್ದಾರೆ.ಇನ್ನು ಇವರ ಬಗ್ಗೆ ಒಂದಷ್ಟು ವಿವರಗಳನ್ನು ತಿಳಿಯುವುದಾದರೆ ಇವರ ಪೂರ್ಣ ಹೆಸರು ಕರೆಂಜಿತ್ ಕೌರ್ ವೋಹ್ರಾ.ಬಣ್ಣದ ಲೋಕದಲ್ಲಿ ಸನ್ನಿ ಲಿಯೋನ್ ಎಂಬ ಹೆಸರಿನಿಂದ ಅಪಾರ ಪ್ರಸಿದ್ದತೆ ಗಳಿಸಿದ್ದಾರೆ.

ಕೆನಡಾ ಮತ್ತು ಅಮೇರಿಕನ್ ಪೌರತ್ವವನ್ನು ಹೊಂದಿದ್ದಾರೆ.ನಟಿ ಸನ್ನಿ ಲಿಯೋನ್ ನೀಲಿ ಚಿತ್ರಗಳಲ್ಲಿ ನಟಿಸುವುದರ ಮೂಲಕ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದರು.ಇನ್ನು ಇವರನ್ನು ಪೆಂಟ್ ಹೌಸ್ ಪೆಟ್ ಎಂದೇ ಕರೆಯಲಾಗುತ್ತದೆ.2010 ರಲ್ಲಿ ಜಗತ್ತಿನಾದ್ಯಂತ ಅತ್ಯುನ್ನತ ಪೋರ್ನ್ ಸ್ಟಾರ್ ಆಗಿ ಮಿಂಚಿದ್ದರು.ಇದಲ್ಲದೆ ನಟಿ ಸನ್ನಿ ಲಿಯೋನ್ ಅವರು ಒಂದಷ್ಟು ಮಾನವೀಯ ಕಾರ್ಯಗಳ ಮೂಲಕ ಜನ ಮೆಚ್ಚುಗೆ ಪಡೆದಿದ್ದಾರೆ.ಅದರಲ್ಲಿಯೂ ಒಂದಷ್ಟು ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ಸಂಪೂರ್ಣ ವಿಧ್ಯಾಭ್ಯಾಸ ದ ಖರ್ಚು ವೆಚ್ಚ ಮತ್ತು ಅವರ ಭವಿಷ್ಯಕ್ಕೆ ಉತ್ತಮ ದಾರಿ ದೀಪವಾಗುತ್ತಿದ್ದಾರೆ.2011 ರಲ್ಲಿ ಡ್ಯಾನಿಯಲ್ ವೆಬರ್ ಅವರೊಂದಿಗೆ ವಿವಾಹವಾಗಿರುವ ಸನ್ನಿಲಿಯೋನ್ ಅಮೇರಿಕಾದ ಪ್ರತಿಷ್ಟಿತ ಪ್ರದೇಶವಾದ ಲಾಸ್ ಏಂಜಲೀಸ್ ನಲ್ಲಿ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ.

2017 ರಲ್ಲಿ ಈ ಐಷಾರಾಮಿ ಬಂಗಲೆಯನ್ನು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಖರೀದಿ ಮಾಡಿದ್ದರು.ಇದು ಸರಿ ಸುಮಾರು 43,560 ಚದರಡಿ ವಿಸ್ತೀರ್ಣ ಹೊಂದಿರುವ ಈ ಬೃಹತ್ ಬಂಗಲೆಯಲ್ಲಿ ಸನ್ನಿ ಲಿಯೋನ್ ದಂಪತಿಗಳು ತಾವು ಅಮೇರಿಕಾ ಪ್ರವಾಸ ಕೈಗೊಂಡಾಗ ಇದೇ ಬಂಗಲೆಯಲ್ಲಿ ಉಳಿದುಕೊಳ್ಳುತ್ತಾರೆ.ಇತ್ತೀಚೆಗೆ ಅಮೇರಿಕಾಗೆ ಹೋದಾಗ ಜೊತೆಯಾಗಿ ಅವರು ದತ್ತು ಪಡೆದಿರುವ ಮಕ್ಕಳನ್ನು ಕೂಡ ಕರೆದೊಯ್ದು ಸಂಭ್ರಮದಿಂದ ಅವರೊಟ್ಟಿಗೆ ಕಾಲ ಕಳೆದಿದ್ದರು.ಕೋವಿಡ್ ಲಾಕ್ ಡೌನ್ ಸಂಧರ್ಭದಲ್ಲಿ ಇದೇ ಬಂಗಲೆಯಲ್ಲಿದ್ದುಕೊಂಡು ವೀಡಿಯೋ ಮಾಡಿ ತಮ್ಮ ನೆಚ್ಚಿನ ಮನೆಯ ಬಗ್ಗೆ ಇದು ನನ್ನ ಸ್ವರ್ಗ ಎಂದು ಮೆಚ್ಚುಗೆ ಮಾತುಗಳನ್ನು ಮಾತನಾಡಿದ್ದರು.

Leave a Reply

%d bloggers like this: