ತನ್ನ ಬಳಿ ಇದ್ದ 200 ಎಕೆರೆ ಜಾಗವನ್ನು ಸೈನಿಕರಿಗೆ ದಾನವಾಗಿ ನೀಡಿದ ಕನ್ನಡದ ಖ್ಯಾತ ನಟ

ಭಾರತೀಯ ಯೋಧರಿಗಾಗಿ ಬರೋಬ್ಬರಿ ನೂರೆಪ್ಪತ್ತೈದು ಎಕರೆಯನ್ನು ದಾನ ಮಾಡಿದ ಕನ್ನಡದ ಬಹುಭಾಷಾ ನಟ..! ಭಾರತೀಯ ಚಿತ್ರರಂಗದ ಅನೇಕ ಸ್ಟಾರ್ ನಟರು ತಮ್ಮ ಸಿನಿಮಾಗಳ ಜೊತೆಗೆ ಒಂದಷ್ಟು ಸಾಮಾಜಿಕ ಸೇವೆಯಲ್ಲಿಯೂ ಕೂಡ ತೊಡಗಿಸಿಕೊಂಡಿದ್ದಾರೆ.ಕೆಲವು ನಟರು ತಮ್ಮದೇಯಾದ ಸ್ವಂತ ಸಂಘ-ಸಂಸ್ಥೆಗಳ ಮೂಲಕ ಅಸಹಾಯಕರಿಗೆ ನೆರವಾಗುವ ಮೂಲಕ ಅನೇಕರ ಬದುಕಿಗೆ ದೀಪವಾಗಿದ್ದಾರೆ.ಇನ್ನೂ ಕೆಲವು ಸ್ಟಾರ್ಸ್ ಅನಾಥಾಶ್ರಮ,ವೃದ್ದಾಶ್ರಮ ಚಾರಿಟಿ ಟ್ರಸ್ಟ್ ಗಳಿಗೆ ಕೋಟ್ಯಾಂತರ ರೂ.ಗಳನ್ನು ದೇಣಿಗೆಯಾಗಿ ನೀಡುತ್ತಾರೆ. ಅಂತೆಯೇ ಇತ್ತೀಚೆಗೆ ಬಹುಭಾಷಾ ನಟ ಸುಮನ್ ಕೂಡ ಭಾರತೀಯ ಯೋಧರ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದಾಗಿ ತಮ್ಮ ಮಾಲೀಕತ್ವದ ಸರಿ ಸುಮಾರು ನೂರೆಪ್ಪತ್ತೈದು ಎಕರೆ ಭೂಮಿಯನ್ನು ನೀಡಿದ್ದಾರೆ.ನಟ ಸುಮನ್ ತೆಲುಗು,ತಮಿಳು ಚಿತ್ರರಂಗದಲ್ಲಿ ಜನಪ್ರಿಯ ಮತ್ತ ಭಾರಿ ಬೇಡಿಕೆಯ ನಟರಾಗಿ ಗುರುತಿಸಿಕೊಂಡಿದ್ದಾರೆ.ನಟ ಸುಮನ್ ಅವರು ಮೂಲತಃ ಕರ್ನಾಟಕದ ಕರಾವಳಿ ಭಾಗದವರು.ಮಂಗಳೂರಿನವರಿದ ಸುಮನ್ ಅವರು ಕನ್ನಡ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.

ಹೀಗೆ ದಕ್ಷಿಣ ಭಾರತದ ಖ್ಯಾತ ನಟರಾದ ಸುಮನ್ ಅವರು ನೂರಾರು ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.ಇತ್ತೀಚೇಗೆ ಒಂದು ಮಹತ್ವದ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಹಂಚಿಕೊಂಡಿದ್ದರು.ನಾನು ಸಿನಿಮಾ ಕ್ಷೇತ್ರಕ್ಕೆ ಬಂದು 40 ವರ್ಷಗಳಾಗಿವೆ.ನಾನು ಹೈದರಾಬಾದ್ ನ ಹೊರ ಭಾಗದಲ್ಲಿ ಒಂದು ಸ್ಟುಡಿಯೋ ಮಾಡಬೇಕು ಎಂದು ವಿಶಾಲ ಪ್ರದೇಶವಾದ ಸುಮಾರು ನೂರೈವತ್ತಕ್ಕೂ ಹೆಚ್ಚು ಎಕರೆಯಷ್ಟು ಜಾಗ ಖರೀದಿ ಮಾಡಿದ್ದೆ.ಆದರೆ ನನ್ನ ಪತ್ನಿ ಸಿರಿಶಾ ಸ್ಟುಡಿಯೋ ಬದಲು ಸಮಾಜಕ್ಕೆ ಏನಾದರು ಉಪಯೋಗವಾಗುವಂತಹ ಸಾರ್ಥಕ ಸೇವೆಯನ್ನ ಮಾಡಿ ಎಂದು ಸಲಹೆ ಕೊಟ್ಟರು.ಅವರ ಸಲಹೆ ಮೇರೆಗೆ ಕಾರ್ಗಿಲ್ ಯುದ್ದದಲ್ಲಿ ಭಾರತೀಯ ಸೇನೆಯ ಮೃತಪಟ್ಟ ಯೋಧರ ಕುಟುಂಬಗಳಿಗೆ ನಾನು ಖರೀದಿಸಿದ ಈ ಜಾಗವನ್ನು ನೀಡಲು ನಿರ್ಧರಿಸಿದ್ದೇನೆ.

ಸೇನೆಯಲ್ಲಿ ಎಷ್ಟರ ಮಟ್ಟಿಗೆ ಸಂಕಷ್ಟಕರ ಬದುಕನ್ನ ಎದುರಿಸಬೇಕಾಗಿರುತ್ತದೆ ಎಂಬುದು ನನಗೆ ತಿಳಿದಿದೆ.ಚಳಿ ಮಳೆ ಗಾಳಿ ಎನ್ನದೇ ಯೋಧರು ನಮ್ಮ ದೇಶಕ್ಕಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ದುಡಿಯುತ್ತಿದ್ದಾರೆ.ನನಗೆ ಭಾರತೀಯ ಸೇನೆ ಮತ್ತು ವಾಯುನೆಲೆಯ ಬಗ್ಗೆ ಅಪಾರ ಗೌರವ ಹೆಮ್ಮೆಯಿದೆ.ಇಲ್ಲಿ ದುಡಿದು ತಮ್ಮ ಪ್ರಾಣ ಮುಡಿಪಾಗಿಟ್ಟ ಯೋಧರ ಕುಟುಂಬಕ್ಕೆ ನನ್ನ ಜಾಗವನ್ನು ನೀಡಲು ಮುಂದಾಗಿದ್ದೇನೆ.ಇಲ್ಲಿ ಅವರು ಮನೆಯನ್ನು ನಿರ್ಮಿಸಿಕೊಳ್ಳಬಹುದು.ಹಣ ನೀಡಿದರೆ ಬಳಸಿಕೊಳ್ಳಬಹುದು. ಮನೆಯೊಂದನ್ನ ಕಟ್ಟಿಕೊಂಡರೆ ಅವರಿಗೆ ಆಶ್ರಯ ಸಿಕ್ಕಂತಾಗುತ್ತದೆ ಎಂದು ತಿಳಿಸಿದ್ದಾರೆ.