ತನಗಿಂತ 11 ವರ್ಷ ದೊಡ್ಡವಳಾದ ಖ್ಯಾತ ನಟಿಯ ಪ್ರೀತಿಯಲ್ಲಿ ಬಿದ್ದ ರಿಷಬ್ ಪಂತ್

ಈ ಕ್ರಿಕೆಟ್ ಮತ್ತು ಬಾಲಿವುಡ್ ಸ್ಟಾರ್ಸ್ ಗಳಿಗೂ ಏನೋ ಒಂದು ಅವಿನಾಭಾವ ಸಂಬಂಧ ಇದೆ ಎಂದು ಹೇಳಬಹುದು.ಭಾರತೀಯ ಕ್ರಿಕೆಟ್ ತಂಡದ ಒಂದಷ್ಟು ಆಟಗಾರರು ಬಾಲಿವುಡ್ ಸ್ಟಾರ್ ನಟಿಯರನ್ನೆ ಲವ್ ಮಾಡುತ್ತಾರೆ.ಅವರಲ್ಲಿ ಕೆಲವರು ಮದುವೆ ಆಗುತ್ತಾರೆ.ಉದಾಹರಣೆಗೆ ವಿರುಷ್ಕಾ ದಂಪತಿ ಒಂದೆಡೆಯಾದರೆ,ಕೆ ಎಲ್.ರಾಹುಲ್ ಕೂಡ ಬಾಲಿವುಡ್ ಸ್ಟಾರ್ ನಟಿ ಆತಿಥ್ಯಾ ಶೆಟ್ಟಿಯೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ. ಅಂತೆಯೇ ಇದೀಗ ಮತ್ತೊಬ್ಬ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರಾದ ರಿಷಭ್ ಪಂತ್ ಬಾಲಿವುಡ್ ಸೂಪರ್ ಸ್ಟಾರ್ ನಟಿ ಶ್ರದ್ದಾ ಕಪೂರ್ ಅವರನ್ನ ಇಷ್ಟ ಪಡುತ್ತಿದ್ದಾರೆ.ನಟಿ ಶ್ರದ್ದಾ ಕಪೂರ್ ಬಾಲಿವುಡ್ ನ ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.ಇವರು ಖ್ಯಾತ ನಟ ಶಕ್ತಿ ಕಪೂರ್ ಅವರ ಪುತ್ರಿ.ಶ್ರದ್ದಾ ಕಪೂರ್ ಕೇವಲ ನಟಿ ಮಾತ್ರ ಅಲ್ಲ ಗಾಯಕಿಯೂ ಕೂಡ ಹೌದು.ತಾವು ನಟಿಸಿದ ಕೆಲವು ಚಿತ್ರಗಳಲ್ಲಿ ಸ್ವತಃ ಅವರೇ ಹಾಡನ್ನು ಹಾಡಿದ್ದಾರೆ.

ಈಗ ಕ್ರಿಕೆಟಿಗ ರಿಷಭ್ ಪಂತ್ ನಟಿ ಶ್ರದ್ದಾ ಕಪೂರ್ ಅವರನ್ನ ಇಷ್ಟ ಪಟ್ಟಿರುವುದು ತಪ್ಪಲ್ಲ.ಅದು ಅವರವರ ವೈಯಕ್ತಿಕ ಇಚ್ಚೆ. ಆದರೆ ಈ ಯುವ ಆಟಗಾರ ರಿಷಭ್ ಪಂತ್ ಅವರ ವಯಸ್ಸು ಕೇವಲ 21 ವರ್ಷ.ನಟಿ ಶ್ರದ್ದಾ ಕಪೂರ್ ಅವರ ವಯಸ್ಸು 32. ಅಂದರೆ ಸರಿ ಸುಮಾರು 11 ವರ್ಷಗಳ ಅಂತರ ಇರುವ ನಟಿಯನ್ನ ನಾನು ಇಷ್ಟ ಪಡುತ್ತೇನೆ ಎಂದು ರಿಷಭ್ ಪಂತ್ ಹೇಳಿರುವುದು ನೆಟ್ಟಿಗರಿಗೆ ಕೋಪ ಬರುವಂತೆ ಮಾಡಿದೆ.ಅದಲ್ಲದೆ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ನನಗೆ ಶ್ರದ್ದಾ ಕಪೂರ್ ಅಂದರೆ ತುಂಬಾ ಇಷ್ಟ.ಅವಕಾಶ ಸಿಕ್ಕರೆ ಅವರ ಜೊತೆ ಡೇಟಿಂಗ್ ಮಾಡುತ್ತೇನೆ ಎಂದು ಹೇಳಿದ್ದಾರೆ.

ರಿಷಭ್ ಪಂತ್ ಅವರ ಈ ಹೇಳಿಕೆಯ ವೀಡಿಯೋ ತುಣುಕುಗಳು ಸೊಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.ಈ ಬಗ್ಗೆ ನಟಿ ಶ್ರದ್ದಾ ಕಪೂರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಇನ್ನು ಕ್ರಿಕೆಟಿಗ ರಿಷಭ್ ಪಂತ್ ಭಾರತ ತಂಡದಲ್ಲಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ನಂತರ ವಿಕೆಟ್ ಕೀಪರ್ ಆಗಿದ್ದಾರೆ.ಜೊತೆಗೆ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿ ತಂಡದಲ್ಲಿ ಬಲಿಷ್ಠ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಈ ನಮ್ಮ ಲೇಖನ ಇಷ್ಟವಾದ್ರೆ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.