ತನಗೆ ಇಷ್ಟವಿಲ್ಲದ ಹುಡುಗಿಯೊಂದಿಗೆ ಮದುವೆಯಾದ ನಟ ದೊಡ್ಡಣ್ಣ ಅವರು ಮುಂದೆ ಮಾಡಿದ್ದೇನು ಗೊತ್ತಾ…!

ತನಗೆ ಇಷ್ಟವಿಲ್ಲದ ಹುಡುಗಿಯೊಂದಿಗೆ ಮದುವೆಯಾದ ನಟ ದೊಡ್ಡಣ್ಣ ಅವರು ಮುಂದೆ ಮಾಡಿದ್ದೇನು ಗೊತ್ತಾ…! ಮದುವೆ ಎಂಬುದು ಕೇವಲ ಕುಟುಂಬದವರು ಒಪ್ಪಿ ಮದುವೆ ಮಾಡುವುದಲ್ಲ. ಅದು ಮದುವೆಯಾಗಿ ಬದುಕುವ ಗಂಡು-ಹೆಣ್ಣು ಇಬ್ಬರು ಪರಸ್ಪರ ಒಪ್ಪಿ ಅರ್ಥ ಮಾಡಿಕೊಂಡು ಸಮ್ಮತಿ ಸೂಚಿಸಿದ ನಾವಿಬ್ಬರು ಬಾಳ ಸಂಗಾತಿಯಾಗಿ ಒಟ್ಟಿಗೆ ಬದುಕು ನಡೆಸುತ್ತೇವೆ ಎಂದು ಮುನ್ನುಡಿವಾದ ನಂತರವೇ ಅವರ ವಿವಾಹಕ್ಕೆ ಒಂದ ಉತ್ತಮ ಸೇತುವೆ ನಿರ್ಮಾಣ ಆಗಿ ಎರಡು ಕಡಲುಗಳು ಸೇರ್ಪಡೆಯಾದಂತಾಗುವುದು. ಆದರೆ ಕೆಲವರ ಬದುಕಲ್ಲಿ ಮನೆಯವರ ಒತ್ತಡಕ್ಕೆ, ಇನ್ಯಾವುದೋ ಕೊಟ್ಟ ಮಾತಿಗೆ ಮುರಿಯಬಾರದು ಎಂದು ಪೋಷಕರು ತಮ್ಮ ಮಕ್ಕಳ ಭವಿಷ್ಯವನ್ನು ತಾವೇ ಹಾಳು ಮಾಡಿ ಬಿಡುತ್ತಾರೆ. ಈ ರೀತಿಯಾಗಿ ಬಹುತೇಕರ ಬದುಕಲ್ಲಿ ನಡೆದಿದೆ. ಅದೇ ರೀತಿಯಾಗಿ ಕನ್ನಡ ಚಿತ್ರರಂಗದ ಖ್ಯಾತ ನಟರಾದ ದೊಡ್ಡಣ್ಣ ಅವರು ಕೂಡ ಒಲ್ಲದ ಮನಸ್ಸಿನಿಂದ ತಮ್ಮ ಪೋಷಕರ ಒತ್ತಾಯದ ಮೇರೆಗೆ ಮದುವೆ ಆಗುತ್ತಾರೆ.

ಆದರೆ ಮದುವೆಯಾದ ಅನೇಕ ತಿಂಗಳು ತನ್ನ ಧರ್ಮಪತ್ನಿಯ ಜೊತೆ ಮಾತೇ ಆಡಿರಲಿಲ್ಲವಂತೆ. ಈ ಕುತೂಹಲಕಾರಿ ವಿಚಾರ ಸಂಗತಿಯನ್ನ ತಿಳಿದುಕೊಳ್ಳುವ ಮುನ್ನ ಹಿರಿಯ ನಟ ದೊಡ್ಡಣ್ಣ ಅವರು ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟ ಪರಿ ಹೇಗೆ ಎಂಬುದನ್ನ ತಿಳಿಯೋಣ. ದೊಡ್ಡಣ್ಣ ಅವರು ನವೆಂಬರ್ 11, 1949 ರಂದು ಹಾಸನ ಜಿಲ್ಲೆಯ ಅರಸೀಕರೆಯಲ್ಲಿ ಜನಿಸುತ್ತಾರೆ. ಇವರು ಉದ್ಯೋಗ ಆರಂಭಿಸಿದ್ದು ಭಧ್ರಾವತಿ ಉಕ್ಕಿನ ಕಾರ್ಖಾನೆಯಲ್ಲಿ. ಇದರ ಜೊತೆಗೆ ತನ್ನ ಸ್ನೇಹಿತರೊಟ್ಟಿಗೆ ಗಂಧರ್ವ ರಂಗ ಎಂಬ ರಂಗಭೂಮಿ ತಂಡ ಕಟ್ಟಿಕೊಂಡು ನಾಟಕ ಮಾಡುತ್ತಿರುತ್ತಾರೆ. ಹೀಗೆ ಸಾಗುತ್ತಾ ಇವರ ಗೆಳೆಯರಾದ ವೆಂಕಟಪ್ಪ ಎಂಬುವವರು ನಿರ್ದೇಶಕ ಸಿದ್ದಲಿಂಗಯ್ಯ ಅವರನ್ನ ಭೇಟಿ ಮಾಡಿಸುತ್ತಾರೆ. ಸಿದ್ದಲಿಂಗಯ್ಯ ಅವರ ಮುಂದೆ ದೊಡ್ಡಣ್ಣ ಅಂಗುಲಿಮಾಲಾ ಸಂಭಾಷಣೆಯನ್ನು ಲೀಲಾಜಾಲವಾಗಿ ಭಾವುಕತೆಯಿಂದ ಹೇಳುತ್ತಾರೆ.

ಇದಕ್ಕೆ ಮನಸೋತ ಸಿದ್ದಲಿಂಗಯ್ಯ ಅವರು ತಮ್ಮ ಕೂಡಿ‌ಬಾಳಿದರೆ ಸ್ವರ್ಗ ಸುಖ ಎಂಬ ಚಿತ್ರದಲ್ಲಿ ಅವಕಾಶ ನೀಡುತ್ತಾರೆ. ಇಲ್ಲಿಂದ ಚಂದನವನ ಪ್ರವೇಶ ಮಾಡಿದ ದೊಡ್ಡಣ್ಣ ಅವರು ಮುಂದೆ ನಡೆದು ಬಂದದ್ದು ಇತಿಹಾಸ. ಹೀಗೆ ಡಾ.ರಾಜ್ ಸೇರಿದಂತೆ ಅನೇಕ ದಿಗ್ಗಜ ನಟರ ಸಿನಿಮಾಗಳಲ್ಲಿ ಖಳ ನಟರಾಗಿ ಅಭಿನಯಿಸಿ ಪಳಗುತ್ತಾರೆ. ಹೀಗೆ ಮುಂದೊಂದು ದಿನ ಬಾಲಕೃಷ್ಣ ಅವರ ಸಲಹೆಯಂತೆ ತಮ್ಮ ನಟನೆಯಲ್ಲಿ ಹಾಸ್ಯ ಮಿಶ್ರಣಮಾಡಿಕೊಂಡು ಹಾಸ್ಯ ನಟರಾಗಿ ಬದಲಾಯಿಸಿಕೊಳ್ಳುತ್ತಾರೆ ನಟ ದೊಡ್ಡಣ್ಣ. ದೊಡ್ಡಣ್ಣ ಅವರು ಇಂದಿಗೂ ಕೂಡ ಬೇಡಿಕೆಯ ಪೋಷಕ ನಟರ ಪೈಕಿ ಒಬ್ಬರು. ಇವರ ಹಾಸ್ಯ ನಟನೆ ನೋಡಿ ನಕ್ಕವರು ಇಲ್ಲ ಎಂಬುದನ್ನ ಹೇಳಲು ಸಾದ್ಯವಿಲ್ಲ. ಕನ್ನಡ ಚಿತ್ರರಂಗದಲ್ಲಿ ಅಪಾರ ಜನಪ್ರಿಯ ನಟರಾಗಿ ಹೆಸರು ಮಾಡಿರುವ ದೊಡ್ಡಣ್ಣ ಅವರು ಬರೋಬ್ಬರಿ 800 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.

ನಾಲ್ಕು ದಶಕಗಳ ಸಿನಿ ವೃತ್ತಿಯಲ್ಲಿ ದೊಡ್ಡಣ್ಣ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ, ಸೌತ್ ಇಂಡಿಯನ್ ಇಂಟರ್ ನ್ಯಾಶನಲ್ ಮೂವಿ ಅವಾರ್ಡ್ಸ್, ಸೈಮಾ ಫಿಲ್ಮ್ ಫೇರ್ ಅವಾರ್ಡ್ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದ್ದಾರೆ. ಇನ್ನು ದೊಡ್ಡಣ್ಣ ಅವರ ವೈಯಕ್ತಿಕ ಬದುಕಿನ ಕಡೆ ನೋಡುವುದಾದರೆ. ದೊಡ್ಡಣ್ಣ ಅವರು ಮನೆಯವರು ಒತ್ತಾಯಪೂರ್ವಕವಾಗಿ ಶಾಂತ ಎಂಬುವವರನ್ನು ಮದುವೆ ಆಗುತ್ತಾರಂತೆ. ಮದುವೆಯಾದ ನಂತರ ಶಾಂತವರನ್ನ ಕಂಡರೆ ದೊಡ್ಡಣ್ಣ ಅವರು ಉರಿದು ಬೀಳುತ್ತಿದ್ದರಂತೆ. ಅವರ ಕೋಣೆಗೆ ಪತ್ನಿ ಶಾಂತ ಟೀ, ಕಾಫಿ ಕೊಡಲು ಹೋಗಬೇಕಾದರು ಭಯದಿಂದಾನೇ ಹೋಗುತ್ತಿದ್ದರಂತೆ. ಹೊಸ ದಂಪತಿಗಳಿರುತ್ತಿದ್ದ ಸಣ್ಣ-ಪುಟ್ಟ ಆಸೆಗಳನ್ನ ಕೇಳಲು ಕೂಡ ಶಾಂತ ಅವರು ಎದುರುತ್ತಿದ್ದರಂತೆ.

ಸಿನಿಮಾ ನೋಡಲು ಜೊತೆಯಾಗಿ ಹೋದಾಗಲು ಕೂಡ ದೊಡ್ಡಣ್ಣ ಅವರು ದೂರದಲ್ಲೇ ಕೂರುತ್ತಿದ್ದರಂತೆ. ಅಷ್ಟರ ಮಟ್ಟಿಗೆ ಶಾಂತ ಅವರ ಮೇಲೆ ದೊಡ್ಡಣ್ಣ ಅವರಿಗೆ ಕೋಪವಿತ್ತಂತೆ. ಆದರೆ ಕಾಲಾಂತರದಲ್ಲಿ ದೊಡ್ಡಣ್ಣ ಮತ್ತು ಶಾಂತ ಅವರ ಸಾಂಸಾರಿಕ ಜೀವನ ಉತ್ತಮವಾಗಿ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಂದು ಗಂಡು ಆಗುತ್ತದೆ. ದೊಡ್ಡ ಮಗಳ ಹೆಸರು ಉಷಾ. ಇವರು ವೀರೆಂದ್ರ ಎಂಬುವರನ್ನ ಮದುವೆ ಆಗಿದ್ದಾರೆ. ಎರಡನೇ ಮಗಳು ಚೈತ್ರ. ಮೂರನೇ ಮಗ ಸುಬ್ಬರೇಶ್. ಇವರು ಜ್ಯೋತಿ ಎಂಬುವರನ್ನ ವಿವಾಹವಾಗಿದ್ದಾರಂತೆ. ಇದೀಗ ದೊಡ್ಡಣ್ಣ ಮತ್ತು ಶಾಂತ ಅವರದ್ದು ನಲವತ್ತು ವರ್ಷಗಳ ದಾಂಪತ್ಯ. ಈಗ ದೊಡ್ಡಣ್ಣ ಅವರು ಮೂವರು ಮಕ್ಕಳು, ಮೊಮ್ಮಕಳೊಂದಿಗೆ ತುಂಬ ಕುಟುಂಬದಲ್ಲಿ ಆದರ್ಶ ಸಂತೋಷದಾಯಕ ಬದುಕು ಸಾಗಿಸುತ್ತಿದ್ದಾರೆ.

Leave a Reply

%d bloggers like this: