ತಮ್ಮೆಲ್ಲರನ್ನೂ ನಾನು ತುಂಬಾ ಪ್ರೀತಿಸುತ್ತೇನೆ ಯಾವಾಗಲೂ ಹೀಗೆ ಜೊತೆ ಜೊತೆಯಲಿ ಇರೋಣ, ನಟ ಅನಿರುದ್ದ್ ಅವರು

ಇತ್ತೀಚೆಗೆ ಕೆಲವು ದಿನಗಳಿಂದ ಭಾರಿ ಸುದ್ದಿಯಲ್ಲಿದ್ದ ಸೆಲೆಬ್ರಿಟಿ ಅಂದರೆ ಅದು ನಟ ಅನಿರುದ್ದ್. ಅನಿರುದ್ದ್ ಅವರು ಬಣ್ಣದ ಲೋಕದಲ್ಲಿ ಸೆಕೆಂಡ್ ಇನ್ನಿಂಗ್ಸ್ ಅಂತ ಆರಂಭ ಮಾಡಿದ್ದು ಜೊತೆ ಜೊತೆಯಲಿ ಸೀರಿಯಲ್ ಮೂಲಕ. ಸಿನಿಮಾಗಳು ಕೈ ಕೊಟ್ಟ ನಂತರ ಅವರಿಗೆ ಒಂದೊಳ್ಳೆ ವೇದಿಕೆ ಮತ್ತು ಅಪಾರ ಜನಪ್ರಿಯತೆ ಕೊಟ್ಟ ಧಾರಾವಾಹಿ ಜೊತೆ ಜೊತೆಯಲಿ. ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಧಾರಾವಾಹಿ ಮೇಕಿಂಗ್ ನಲ್ಲಿಯೇ ಸಖತ್ ಕ್ರೇಜ಼್ ಹುಟ್ಟು ಹಾಕಿತ್ತು. ನಾಡಿನಾದ್ಯಂತ ಈ ಜೊತೆ ಜೊತೆಯಲಿ ಶೀರ್ಷಿಕೆ ಗೀತೆಯ ಫೇಮಸ್ ಆಗಿ ಬಿಟ್ಟಿತ್ತು. ಜೊತೆ ಜೊತೆಯಲಿ ಸೀರಿಯಲ್ ನ ಆರ್ಯ ವರ್ಧನ್ ಪಾತ್ರ ನಟ ಅನಿರುದ್ದ್ ಅವರಿಗೆ ಒಂದೊಳ್ಳೆ ಹೆಸರು ತಂದು ಕೊಟ್ಟಿತು. ನಾಡಿನ ಮನೆ ಮನಗಳಲ್ಲಿ ಆರ್ಯವರ್ಧನ್ ಆಗಿ ನಟ ಅನಿರುದ್ದ್ ಸ್ಥಾನ ಪಡೆದುಕೊಂಡರು.

ಈ ಧಾರಾವಾಹಿ ಯಾವ ಮಟ್ಟಿಗೆ ಜನಪ್ರಿಯ ಪಡೆದುಕೊಂಡಿತು ಅಂದರೆ ಸೋಶಿಯಲ್ ಮೀಡಿಯಾ ರೀಲ್ಸ್ ಗಳಲ್ಲಿ, ಕಾಮಿಡಿ ಕಂಟೆಂಟ್ ಗಳಲ್ಲಿ, ಟ್ರೋಲ್ ಪೇಜ್ ಗಳಲ್ಲಿಯೂ ಕೂಡ ಈ ಸೀರಿಯಲ್ ಅನಿರುದ್ದ್ ನಟಿಸುತ್ತಿದ್ದ ಆರ್ಯವರ್ಧನ್ ಪಾತ್ರ ಮತ್ತು ಮೇಘಾ ಶೆಟ್ಟಿ ನಟಿಸುತ್ತಿದ್ದ ಅನು ಸಿರಿಮನೆ ಪಾತ್ರ ಸಖತ್ ಕ್ರೇಜ಼್ ಸೃಷ್ಟಿಸಿದ್ದವು. ಆದರೆ ಇತ್ತೀಚೆಗೆ ಜೊತೆ ಜೊತೆಯಲಿ ಧಾರಾವಾಹಿ ನಿರ್ದೇಶಕ ಕಮ್ ನಿರ್ಮಾಪಕ ಆರೂರು ಜಗದೀಶ್ ನಡುವೆ ಕೆಲವು ವಿಚಾರಗಳಿಗೆ ಮನಸ್ತಾಪ ಉಂಟಾಗಿ ನಟ ಅನಿರುದ್ದ್ ಅವರನ್ನ ಧಾರಾವಾಹಿಯಿಂದ ಹೊರಗಿಡಲಾಯಿತು. ಅದರ ಜೊತೆಗೆ ಟೆಲಿವಿಷನ್ ನಿರ್ಮಾಪಕರ ಸಂಘ ಎರಡು ವರ್ಷಗಳ ಕಾಲ ಅನಿರುದ್ದ್ ಅವರನ್ನ ನಿಷೇಧ ಮಾಡಿತು. ಆದರೆ ಇಲ್ಲಿ ನಟ ಅನಿರುದ್ದ್ ಅವರ ತಪ್ಪೋ, ನಿರ್ದೇಶಕರ ತಪ್ಪೋ ಅನ್ನೊದು ಮಾತ್ರ ಯಾರಿಗೂ ಸ್ಪಷ್ಟವಾಗಲಿಲ್ಲ.

ಸದ್ಯಕ್ಕೆ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರಕ್ಕೆ ಅಪಘಾತವಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಬೇಕು ಎಂಬ ಸನ್ನಿವೇಶ ಸೃಷ್ಟಿಸಿ ಇದೀಗ ನಟ ಅನಿರುದ್ದ್ ಅವರ ಪಾತ್ರಕ್ಕೆ ಬೇರೊಬ್ಬ ನಟನನ್ನ ಕರೆ ತರುವ ಪ್ರಯತ್ನ ನಡೆಯುತ್ತಿದೆ. ಇದರ ಬೆನ್ನಲ್ಲೇ ನಟ ಅನಿರುದ್ದ್ ಅವರು ಪೋಸ್ಟ್ ವೊಂದನ್ನ ಮಾಡಿದ್ದಾರೆ. ಪೋಸ್ಟ್ ನಲ್ಲಿ ನನ್ನ ಮೇಲೆ ತಮಗಿರೋ ಅಪಾರವಾದ ಪ್ರೀತಿಯನ್ನು ನೋಡಿ ನಾನು ತಲೆ ಬಾಗುತ್ತೇನೆ. ಈ ಸಂಘರ್ಷದ ದಿನಗಳಲ್ಲಿ ತಾವು ಸಾವಿರಾರು ಸಂದೇಶಗಳ, ಟ್ವೀಟ್, ಕರೆಗಳ, ಪತ್ರಗಳ, ಪ್ರತಿಭಟನೆಗಳ, ಪತ್ರಿಕಾಗೋಷ್ಠಿಗಳ, ಪ್ರಾರ್ಥನೆಗಳ ಮುಖಾಂತರ, ನನ್ನ ಪರ, ನನ್ನ ಬೆಂಬಲಕ್ಕೆ ನಿಂತಿದ್ದೀರಿ, ಅದಕ್ಕೆ ನಾನು ಚಿರ ಋುಣಿ. ತಮ್ಮ ಪ್ರಯತ್ನಗಳಿಗೆ ತಾವು ಅಂದುಕೊಂಡಿರೋ ಫಲ ಸಿಗಲಿಲ್ಲ ಅಂತ ದಯವಿಟ್ಟು ನಿರಾಶೆಗೊಳ್ಳಬೇಡಿ.

ಶ್ರೀ ಅಮಿತಾಭ್ ಬಚ್ಚನ್ ರವರ ತಂದೆ ಮಹಾನ್ ಕವಿ ಶ್ರೀ ಹರಿವಂಶ್ ರಾಯ್ ಬಚ್ಚನ್ ರವರು ಹೇಳುತ್ತಿದ್ದರು “ಮನ್ ಕಾ ಹುವಾ ತೋ ಅಚ್ಛಾ, ನಾ ಹುವಾ ತೋ ಔರ್ ಭೀ ಅಚ್ಛಾ ಕ್ಯುಂಕೆ ತಬ್ ವೋ ಭಗವಾಗ್ ಕೀ ಇಚ್ಛಾ ಹೋತಿ ಹೈ ಔರ್ ಭಗವಾನ್ ತುಮ್ಹಾರೆ ಲಿಯೇ ಅಚ್ಛಾಹೀ ಸೋಚತಾ ಹೈ” (ನಮ್ಮ ಇಚ್ಛಾನುಸಾರ ಆದರೆ ಒಳ್ಳೆದು, ಆಗದೇ ಇದ್ದರೆ ಇನ್ನೂ ಒಳ್ಳೇದು ಯಾಕಂದರೆ ಆಗ ಅದು ದೇವರ ಇಚ್ಛೆ ಆಗಿರುತ್ತೆ ಹಾಗೂ ದೇವರು ನಮಗಾಗಿ ಒಳ್ಳೇದೆ ಮಾಡುತ್ತಾನೆ) ಸ್ವಲ್ಪ ತಾಳ್ಮೆಯಿಂದ ಇರೋಣ, ತಮ್ಮ ಪ್ರೀತಿ, ಹಾರೈಕೆ, ಪ್ರೋತ್ಸಾಹ, ಆಶೀರ್ವಾದ ಹಾಗೂ ಪ್ರಾರ್ಥನೆ ನನ್ನ ಮುಂದಿನ ಯೋಜನೆಗಳ ಮೇಲೂ ಇರತ್ತೆ ಅನ್ನೋ ನಂಬಿಕೆ ನನಗಿದೆ. ತಮ್ಮೆಲ್ಲರನ್ನೂ ನಾನು ತುಂಬಾ ಪ್ರೀತಿಸುತ್ತೇನೆ ಯಾವಾಗಲೂ ಹೀಗೆ ಎಂದೆಂದಿಗೂ ಜೊತೆ ಇರೋಣ ಎಂದಿದ್ದಾರೆ. ಈ ಪೋಸ್ಟ್ ಗೆ ಅವರ ಅಭಿಮಾನಿಗಳು ಆರ್ಯವರ್ಧನ್ ಪಾತ್ರಕ್ಕೆ ನಿಮ್ಮನ್ನ ಹೊರತುಪಡಿಸಿ ಇತರರನ್ನ ಊಹಿಸಿಕೊಳ್ಳೋದು ಕಷ್ಟಕರ. ನೀವೇ ಆ ಪಾತ್ರ ಮಾಡಿ ಎಂದಿದ್ದಾರೆ. ಅದರ ಜೊತೆಗೆ ಇನ್ನೊಂದಷ್ಟು ಜನರು ನೀವು ಸೃಜನ್ ಲೋಕೇಶ್ ರೀತಿ ನೀವೇ ಸ್ವಂತ ನಿರ್ಮಾಣ ಸಂಸ್ಥೆ ಆರಂಭ ಮಾಡಿ ನಾವು ನಿಮ್ಮ ಜೊತೆ ನಿಮಗೆ ಬೆಂಬಲವಾಗಿ ಇರುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ.