ತಮ್ಮ ಪ್ರೀತಿಯನ್ನು ಎಲ್ಲರೆದುರು ಒಪ್ಪಿಕೊಂಡ ಮತ್ತೊಂದು ಬಾಲಿವುಡ್ ಜೋಡಿ

ಬಾಲಿವುಡ್ ನಲ್ಲಿ ಆಗಾಗ ಚರ್ಚೆ ಅಲ್ಲಿರುವ ಕ್ಯೂಟ್ ಜೋಡಿಗಳಲ್ಲಿ ನಟ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರ ಅಡ್ವಾನಿ ಅವರದ್ದು ಕೂಡ ಪ್ರಮುಖವಾದುದ್ದಾಗಿದೆ. ಬಿಟೌನ್ ನಲ್ಲಿ ತಾರಾ ಜೋಡಿಗಳಿಗೆ ಕೊರತೆ ಏನಿಲ್ಲ. ಸದಾ ಒಂದಲ್ಲ ಒಂದು ಜೋಡಿಯ ಸುದ್ದಿ ಬಾಲಿವುಡ್ ಅಂಗಳದಲ್ಲಿ ಸೌಂಡ್ ಆಗ್ತಾನೆ ಇರುತ್ತದೆ. ಅದರಂತೆ ಇದೀಗ ಸಖತ್ ಹಾಟ್ ಟಾಪಿಕ್ ಆಗುತ್ತಿರೋದು ಅಂದ್ರೆ ಅದು ನಟ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರ ಅಡ್ವಾನಿ ಅವರ ಲವ್ವಿಡವ್ವಿ ಕಹಾನಿ. ಈ ವಿಷಯ ಹೊರ ಬಿದ್ದಿರೋದು ಹಿಂದಿ ಕಿರುತೆರೆಯ ಫೇಮಸ್ ರಿಯಾಲಿಟಿ ಶೋ ಒಂದದಲ್ಲಿ ಅನ್ನೋದು ವಿಶೇಷ. ಹೌದು ಕರಣ್ ಜೋಹಾರ್ ಅವರು ನಡೆಸಿಕೊಡುವ ಕಾಫಿ ವಿಥ್ ಕರಣ್ ಜೋಹಾರ್ ಕಾರ್ಯಕ್ರಮದಲ್ಲಿ ಈ ವಾರದ ಅತಿಥಿಯಾಗಿ ನಟ ವಿಕ್ಕಿ ಕೌಶಲ್ ಮತ್ತು ಸಿದ್ದಾರ್ಥ್ ಮಲ್ಹೋತ್ರಾ ಅವರು ಭಾಗವಹಿಸಿದ್ದಾರೆ.

ಸಾಮಾನ್ಯವಾಗಿ ಈ ಶೋ ನಲ್ಲಿ ಭಾಗವಹಿಸುವ ಬಹುತೇಕ ಸ್ಟಾರ್ ನಟ ನಟಿಯರು ಒಂದಲ್ಲ ಒಂದು ಕುತೂಹಲಕಾರಿ ಸಂಗತಿಯನ್ನ ಬಿಚ್ಚಿಡುತ್ತಾರೆ. ಅದರಂತೆ ಇದೀಗ ನಟ ಸಿದ್ದಾರ್ಥ್ ಮಲ್ಹೋತ್ರಾ ಅವರು ಚಾಟ್ ಶೋನಲ್ಲಿ ನಟಿ ಕಿಯಾರ ಅಡ್ವಾಣಿ ಅವರೊಟ್ಟಿಗೆ ಇರುವ ರಿಲೇನ್ಶಿಪ್ ಅನ್ನ ಧೃಡಪಡಿಸಿದ್ದಾರೆ. ಈ ಜೋಡಿ ಇಲ್ಲಿಯವರೆಗೆ ಡೇಟಿಂಗ್ ನಡೆಸುತ್ತಿತ್ತು. ಆದರೆ ಈ ಬಗ್ಗೆ ಎಲ್ಲಿಯೂ ಕೂಡ ಸ್ಪಷ್ಟನೆ ನೀಡಿರಲಿಲ್ಲ. ಆದರೆ ಇದೀಗ ಈ ಕಾಫಿ ವಿಥ್ ಕರಣ್ ಜೋಹಾರ್ ಶೋನಲ್ಲಿ ನಟ ಸಿದ್ದಾರ್ಥ್ ಮಲ್ಹೋತ್ರಾ ಅವರು ಕೆಲವು ಪ್ರಶ್ನೆಗಳಿಗೆ ಉತ್ತರ ನೀಡುವಾಗ ನಟಿ ಕಿಯಾರ ಅಡ್ವಾಣಿ ಅವರೊಟ್ಟಿಗೆ ಸಂಬಂಧದಲ್ಲಿರೋದನ್ನ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಇದೀಗ ಈ ಒಂದು ಸುದ್ದಿ ಬಾಲಿವುಡ್ ಅಂಗಳದಲ್ಲಿ ಭಾರಿ ಸುದ್ದಿಯಾಗಿದ್ದು, ಈ ಜೋಡಿ ಯಾವಾಗ ಹಸೆಮಣೆ ಏರಲಿದೆ ಎಂದು ಕಾತುರವನ್ನು ವ್ಯಕ್ತಪಡಿಸುತ್ತಿದೆ.