ತಮ್ಮ ಪ್ರೀತಿಯನ್ನು ಅಭಿಮಾನಿಗಳಿಗೆ ಖಚಿತ ಪಡಿಸಿದ ಕನ್ನಡದ ಖ್ಯಾತ ನಟ ನಟಿ

ಚಂದನವನದ ಕಂಚಿನ ಕಂಠದ ನಟ ಕಮ್ ಗಾಯಕರಾಗಿ ಹೆಸರಾಗಿರೋ ವಸಿಷ್ಟ ಸಿಂಹ ಮತ್ತು ಖ್ಯಾತ ನಟಿ ಹರಿಪ್ರಿಯಾ ಸದ್ದಿಲ್ಲದೇ ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅದರ ಒಂದಷ್ಟು ಫೋಟೋಗಳು ಹೊರ ಬೀಳುತ್ತಿದ್ದಂತೆ ಸ್ಯಾಂಡಲ್ ವುಡ್ ಮಂದಿ ಸೇರಿದಂತೆ ಅಭಿಮಾನಿಗಳಿಗೆ ಸಖತ್ ಸರ್ಪ್ರೈಸ್ ಕೊಟ್ಟಿದ್ದಾರೆ. ಅದಕ್ಕೂ ಮುನ್ನ ದುಬೈನಲ್ಲಿ ಕೈ ಕೈ ಹಿಡಿದು ಶಾಪಿಂಗ್ ಮಾಡುವ ಮೂಲಕ ಕುತೂಹಲ ಮೂಡಿಸಿದ ಈ ಜೋಡಿ ದುಬೈಯಿಂದ ಬಂದ ತಕ್ಷಣ ತಾವಿಬ್ಬರು ಮದುವೆ ಆಗುತ್ತಿರೋದನ್ನ ಕನ್ಫರ್ಮ್ ಮಾಡಿದ್ದಾರೆ. ಹೌದು ರಾಜಾಹುಲಿ ಸಿನಿಮಾದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ ನಟ ವಸಿಷ್ಟ ಸಿಂಹ ತಮ್ಮ ಚೊಚ್ಚಲ ಸಿನಿಮಾಲ್ಲೇ ತಮ್ಮ ನಟನೆಯ ಮೂಲಕ ಪ್ರೇಕ್ಷಕರ ಮನ ಗೆದ್ದರು.

ತದ ನಂತರ ತಮಗೆ ಬಂದಂತಹ ಸಣ್ಣ ಪುಟ್ಟ ಪಾತ್ರಗಳನ್ನ ಮಾಡುತ್ತಾ ಗಮನ ಸೆಳೆದು ತಾವೂ ಕೂಡ ನಾಯಕ ನಟರಾಗಿ ನಟಿಸಿ ಕೆಜಿಎಫ್ ಅಂತಹ ಪ್ಯಾನ್ಇಂಡಿಯಾ ಸಿನಿಮಾದಲ್ಲಿ ನಟಿಸಿ ಸ್ಟಾರ್ ನಟರಾಗಿ ಸ್ಯಾಂಡಲ್ ವುಡ್ ನಲ್ಲಿ ಶೈನ್ ಆಗ್ತಿದ್ದಾರೆ. ಲವ್ಲೀ ಅನ್ನೋ ಸಿನಿಮಾದಲ್ಲಿ ಬಿಝಿಯಾಗಿದ್ದ ನಟ ವಸಿಷ್ಟಸಿಂಹ ಸದ್ದಿಲ್ಲದೇ ಎಲ್ಲರಿಗೂ ಶಾಕ್ ಕೊಟ್ಟಿದ್ದು ಅಂದರೆ ಅದು ನಟಿ ಹರಿಪ್ರಿಯಾ ಅವರನ್ನ ಮದುವೆ ಆಗುತ್ತಿರೋ ಸುದ್ದಿ ಮೂಲಕ. ಈ ಬಗ್ಗೆ ಯಾರಿಗೂ ಕೂಡ ಒಂದು ಸಣ್ಣ ಸಂದೇಹ ಇರಲಿಲ್ಲ. ಇವರಿಬ್ಬರು ಎಲ್ಲಿಯೂ ಕೂಡ ಅಷ್ಟಾಗಿ ಜೊತೆಯಾಗಿ ಕಾಣಿಸಿಕೊಂಡವರಲ್ಲ. ಹಾಗಾಗಿ ಬಹುತೇಕರಿಗೆ ಯಾವಾಗಪ್ಪಾ ಇವರಿಬ್ಬರು ಲವ್ ಮಾಡೋ ಮಟ್ಟಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದು ಎಂದು ಬಾಯ್ಮೇಲ್ ಬೆರಳಿಟ್ಟುಕೊಂಡಿದ್ದು ಉಂಟು.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರೋ ನಟಿ ಹರಿಪ್ರಿಯಾ ಅವರು ಮೊನ್ನೆಯಷ್ಟೇ ಸಿಂಹ ಚಿತ್ರ ಇರೋ ಮತ್ತು ಪುಟ್ಟ ಲಕ್ಷ್ಮಿ ರೂಪದ ಮಗುವಿನ ಪೋಟೋ ಹಂಚಿಕೊಂಡು ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು ಎಂದು ಬರೆದು ಪೋಟೋ ಶೇರ್ ಮಾಡಿಕೊಂಡಿದ್ದಾರೆ. ಅದೇ ಫೋಟೋ ಶೇರ್ ಮಾಡಿಕೊಂಡು ನಟ ವಸಿಷ್ಠ ಸಿಂಹ ಕೂಡಾ ಎಂದೂ ನಿನ್ನ ನೆರಳಾಗಿ ಕಾಯುವೆ ನಾನು ಎಂದು ಬರೆದು ಪೋಸ್ಟ್ ಮಾಡಿದ್ದರು. ಈ ಫೋಟೋ ವೈರಲ್ ಆಗಿತ್ತು. ಇದೀಗ ಇಬ್ಬರು ಮರಳುಗಾಡಿನಲ್ಲಿ ಪರಸ್ಪರ ಅಪ್ಪಿ ಮುಖಾಮುಖಿ ನೋಡುತ್ತಿರೋ ಫೋಟೋ ಶೇರ್ ನಾವು ಎಂದು ಬರೆದಿರೋ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೊ ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಫೋಟೋ ನೋಡಿದ ಅವರ ಅಭಿಮಾನಿಗಳು ಹಿತೈಷಿಗಳು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸುತ್ತಿದ್ದಾರೆ.

Leave a Reply

%d bloggers like this: