ತಮ್ಮ ಮಗುವಿಗೆ ‘ರಾಹಾ’ ಎಂದು ನಾಮಕರಣ ಮಾಡಿದ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್, ಹೆಸರಿನ ಅರ್ಥವೇನು

ಬಾಲಿವುಡ್ ಕ್ಯೂಟ್ ಕಪಲ್ ಗಳಲ್ಲಿ ಒಂದಾಗಿರೋ ಆಲಿಯಾ ಭಟ್ ಮತ್ತು ರಣ್ ಬೀರ್ ಕಪೂರ್ ಮಗಳ ಹೆಸರೇನು ಗೊತ್ತಾ. ಬಹಳ ವಿಭಿನ್ನ ವಿಶಿಷ್ಟವಾಗಿ ಇಟ್ಟಿರೋ ಈ ಹೆಸರಿನ ಅರ್ಥ ಏನೆಂದು ತಿಳಿದರೆ ನೀವು ನಿಜಕ್ಕೂ ಕೂಡ ಅಚ್ಚರಿ ಪಡುತ್ತೀರ. ಹೌದು ಬಾಲಿವುಡ್ ಅಂಗಳದಲ್ಲಿ ಸ್ಟಾರ್ ನಟ ನಟಿಯರು ಲವ್, ಡೇಟಿಂಗ್, ಮದ್ವೆ ಅಂತ ಆಗೋದು ಸರ್ವೇ ಸಾಮಾನ್ಯ. ಅದರಂತೆ ಬಾಲಿವುಡ್ ನಲ್ಲಿ ಅತ್ಯಂತ ಜನಪ್ರಿಯ ನಟಿ ಆಲಿಯಾ ಭಟ್ ಮತ್ತು ನಟ ರಣ್ ಬೀರ್ ಕಪೂರ್ ಅವರು ಒಂದಷ್ಟು ವರ್ಷಗಳ ಪ್ರೀತಿ ಪ್ರೇಮ ಅಂತ ಜೊತೆಗಿದ್ದು ಕಳೆದ ವರ್ಷ ಏಪ್ರಿಲ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದಾದ ನಂತರ ಕಳೆದ ನವೆಂಬರ್ ತಿಂಗಳಿನಲ್ಲಿ ಈ ತಾರಾ ಜೋಡಿಗಳಿಗೆ ಹೆಣ್ಣು ಮಗುವಾಗಿ ಪೋಷಕರಾದರು.

ಇದು ಅವರ ಕುಟುಂಬ ಮತ್ತು ಅಭಿಮಾನಿಗಳಲ್ಲಿ ಸಂತೋಷವನ್ನುಂಟು ಮಾಡಿತು. ಈಗ ಹ್ಯಾಪಿ ಫ್ಯಾಮಿಲಿ ಹೊಂದಿರೋ ಆಲಿಯಾ ಭಟ್ ಮತ್ತು ರಣ್ ಬೀರ್ ಕಪೂರ್ ಅವರು ತಮ್ಮ ಮುದ್ದಾದ ಹೆಣ್ಣು ಮಗುವಿಗೆ ರಾಹಾ ಎಂಬ ವಿಶಿಷ್ಟ ಹೆಸರನ್ನ ಇಟ್ಟಿದ್ದಾರೆ. ರಾಹಾ ಅಂದರೆ ಏನು ಅಂತ ಅನೇಕರು ಗೊಂದಲದಲ್ಲಿದ್ದರು. ಅದಕ್ಕೆ ಉತ್ತರ ಈಗ ಸಿಕ್ಕಿದೆ. ಈ ಹೆಸರನ್ನ ಸೂಚಿಸಿದ್ದು ಬೇರಾರು ಅಲ್ಲ ನೀತು ಕಪೂರ್ ಅವರು. ರಾಹಾ ಅಂದರೆ ದೈವಿಕ ಮಾರ್ಗ ಅಂತಂತೆ. ಅಂದರೆ ಅವಳು ಸಂತೋಷ ಎಂಧರ್ಥವಂತೆ. ಸಂಸ್ಕೃತದಲ್ಲಿ ರಾಹಾ ಅಂದರೆ ಒಂದು ಕುಲ ಅಂತೆ. ಬಾಂಗ್ಲಾದಲ್ಲಿ ವಿಶ್ರಾಂತಿ, ಸೌಕರ್ಯ, ಪರಿಹಾರ ಅನ್ನೋ ಅರ್ಥ ಬರುತ್ತದೆಯಂತೆ.

ಅದೇ ರೀತಿಯಾಗಿ ರಾಹಾ ಅಂದರೆ ಅರೇಬಿಕ್ ಭಾಷೆಯಲ್ಲಿ ಶಾಂತಿಯಲ್ಲಿ ಸಂತೋಷ, ಸ್ವಾತಂತ್ರ್ಯ ಮತ್ತು ಆನಂದ ಎಂಬ ಅರ್ಥ ಇದೆಯಂತೆ. ಒಟ್ಟಾರೆಯಾಗಿ ಆಲಿಯಾ ಭಟ್ ಮತ್ತು ರಣ್ ಬೀರ್ ಕಪೂರ್ ಅವರು ತಮ್ಮ ಮಗಳಿಗೆ ಮುದ್ದಾದ ವಿಶಿಷ್ಟ ಅರ್ಥ ಬರುವ ಹೆಸರನ್ನ ಇಡುತ್ತಿದ್ದೇವೆ ಎಂದು ತಮ್ಮ ನಿರ್ಧಾರ ತಿಳಿಸಿರೋ ಈ ಪೋಸ್ಟ್ ಬಾಲಿವುಡ್ ಅಂಗಳ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಇನ್ನೊಂದೆಡೆ ಇತ್ತೀಚೆಗೆ ತಾನೇ ಕೆಲವು ತಿಂಗಳ ಹಿಂದೆಯಷ್ಟೇ ಬಿಡುಗಡೆಯಾಗಿ ಬಾಲಿವುಡ್ ಬಾಕ್ಸ್ ಅಫೀಸ್ ನಲ್ಲಿ ಧೂಳೆಬ್ಬಿಸಿದ ಬ್ರಹ್ಮಾಸ್ತ್ರ ಸಿನಿಮಾದ ಸಕ್ಸಸ್ ನಲ್ಲಿ ಇರುವ ನಟಿ ಆಲಿಯಾ ಭಟ್ ಮತ್ತು ರಣ್ ಬೀರ್ ಕಪೂರ್ ಅವರು ಬಾಲಿವುಡ್ ನಲ್ಲಿ ತಮ್ಮ ಬೇಡಿಕೆ ಮತ್ತು ಜನಪ್ರಿಯತೆಯನ್ನ ಮತ್ತಷ್ಟು ಹೆಚ್ಚಾಗಿಸಿಕೊಂಡಿದ್ದಾರೆ.

Leave a Reply

%d bloggers like this: