ತಮ್ಮ ಮಗುವಿಗೆ ದೇವರ ಹೆಸರು ನಾಮಕರಣ ಮಾಡಿದ ನಟಿ ಸೋನಮ್ ಕಪೂರ್

ಹಿಂದಿ ಚಿತ್ರರಂಗದ ಸುಪ್ರಸಿದ್ದ ನಟಿ ಇತ್ತೀಚೆಗೆ ತಾನೇ ಕೆಲವು ದಿನಗಳಿಂದೆಯಷ್ಟೆ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಬಿಟೌನ್ ನಲ್ಲಿ ಭಾರಿ ಸುದ್ದಿಯಲ್ಲಿದ್ದರು. ಕೆಲವು ತಿಂಗಳಿಂದ ನಮ್ಮ ಭಾರತೀಯ ಚಿತ್ರರಂಗದ ಅನೇಕ ನಟ ನಟಿಯರು ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ಮದುವೆ, ಬೇಬಿ ಬಂಪ್ ಫೋಟೋ ಶೂಟ್ ಮತ್ತು ಇನ್ನಿತರ ಖಾಸಗಿ ವಿಚಾರಗಳಿಗೇನೇ ಸುದ್ದಿ ಆಗುತ್ತಿದ್ದಾರೆ. ಅದ್ರಂತೆ ಕೆಲವು ದಿನಗಳ ಹಿಂದೆಯಷ್ಟೇ ಬಾಲಿವುಡ್ ನಟಿ ಸೋನಂ ಕಪೂರ್ ಅವರು ಗಂಡು ಮಗುವಿಗೆ ಜನ್ಮ ನೀಡಿ ಸುದ್ದಿ ಆಗಿದ್ದರು. ಅವರ ಅಭಿಮಾನಿಗಳು ಈ ಸುದ್ದಿಯನ್ನ ತಿಳಿದು ತುಂಬ ಸಂತೋಷ ಪಟ್ಟು ಶುಭ ಹಾರೈಸಿದ್ದರು. ಇದೀಗ ನಟಿ ಸೋನಂ ಕಪೂರ್ ತಮ್ಮ ಮುದ್ದು ಮಗನಿಗೆ ವಿಶಿಷ್ಟ ಹೆಸರನ್ನ ನಾಮಕರಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಹೌದು ಸೋನಂ ಕಪೂರ್ ಹಿಂದಿ ಚಿತ್ರರಂಗದ ಖ್ಯಾತ ನಟಿ. ಸೋನಮ್ ಕಪೂರ್ ಅವರು ಉದ್ಯಮಿ ಆನಂದ್ ಅಹೂಜ ಅವರನ್ನ 2018ರಲ್ಲಿ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದರು. ಸೋನಂ ಕಪೂರ್ ಬಾಲಿವುಡ್ ಖ್ಯಾತ ನಟ ಕಮ್ ನಿರ್ಮಾಪಕ ಅನಿಲ್ ಕಪೂರ್ ಅವರ ಪುತ್ರಿ. ತಮ್ಮ ತಂದೆಯಂತೆ ಸೋನಮ್ ಕಪೂರ್ ಸಹ ಬಣ್ಣದ ಲೋಕದಲ್ಲಿ ಮಿಂಚಿ ಸ್ಟಾರ್ ನಟಿಯಾಗಿ ಹೆಸರು ಮಾಡಿದವರು. ಸೋನಮ್ ಕಪೂರ್ ಅವರು ತಮ್ಮ ಪ್ರತಿಭೆಗೆ ತಕ್ಕಂತೆ ರಾಷ್ಟ್ರೀಯ ಮತ್ತು ಫಿಲಂಫೇರ್ ಪ್ರಶಸ್ತಿಯನ್ನ ಗೆದ್ದಿದ್ದು, 2012 ರಿಂದ 2016 ರವರೆಗೆ ಫೋರ್ಬ್ಸ್ ಪಟ್ಟಿಯಲ್ಲಿ ಅತ್ಯಧಿಕ ಆದಾಯ ಗಳಿಸುವ ನೂರು ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಸೋನಮ್ ಕಪೂರ್ 2005ರಲ್ಲಿ ಬಣ್ಣದ ಲೋಕಕ್ಕೆ ಬಾಲಿವುಡ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಚಿತ್ರವೊಂದಕ್ಕೆ ಸಹಾಯಕ ನಿರ್ದೇಶಕಿಯಾಗಿ ಎಂಟ್ರಿ ಕೊಟ್ಟು, ತದ ನಂತರ ಸಂಜಯ್ ಲೀಲಾ ಬನ್ಸಾಲಿ ಅವರ ಸಾವರಿಯಾ ಎಂಬ ಪ್ರೇಮಕಥಾ ಹಂದರ ಹೊಂದಿರುವ ಸಿನಿಮಾ ಮೂಲಕ ನಾಯಕಿ ನಟಿಯಾಗಿ ಹೆಜ್ಜೆ ಇಟ್ಟ ಸೋನಮ್ ಕಪೂರ್ ಅವರು ತದ ನಂತರ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಬಾಲಿವುಡ್ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದಾಗಲೇ ಉದ್ಯಮಿಆನಂಜ್ ಅಹೂಜ ಅವರೊಟ್ಟಿಗೆ ಸಪ್ತಪದಿ ತುಳಿಯುತ್ತಾರೆ ಸೋನಂ ಕಪೂರ್. ಮದುವೆಯಾದ ನಂತರ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿರೋ ಸೋನಂ ಇದೀಗ ಒಂದು ಮುದ್ದಾರ ಗಂಡು ಮಗುವಿಗೆ ತಾಯಿಯಾಗಿ ಸಾಂಸಾರಿಕ ಜೀವನ ನಡೆಸುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ಸೋನಂ ಕಪೂರ್ ತಮ್ಮ ಮಗನಿಗೆ ನಾಮಕರಣ ಮಾಡಿರೋ ವಿಚಾರ ತಿಳಿಸಿದ್ದಾರೆ. ಮಗನಿಗೆ ‘ವಾಯು’ ಕಪೂರ್ ಎಂದು ಹೆಸರಿಟ್ಟಿದ್ದಾರೆ. ಮಗುವಿನ ಫೋಟೋ ಹಂಚಿಕೊಂಡು ವಾಯುವು ತನ್ನಲ್ಲಿರೋ ಪ್ರಬಲ ದೇವರು. ಹಾಗಾಗಿ ನಮ್ಮ ಮಗುವಿಗೆ ವಾಯು ಎಂದು ಹೆಸರಿಟ್ಟಿದ್ದೇವೆ. ನಮ್ಮ ಮಗ ನಮ್ಮ ಉಸಿರಾಟದ ದೇವರು. ವಾಯುವು ಜೀವನ ಮತ್ತು ಬುದ್ದಿವಂತಿಕೆಯ ಮಾರ್ಗದರ್ಶಿ ಶಕ್ತಿಯಾಗಿದ್ದಾನೆ. ಕೆಟ್ಟದನ್ನ ನೋಶ ಪಡಿಸಿ ಜೀವಗಳಿಗೆ ಜೀವ ನೀಡುತ್ತಾನೆ. ವಾಯು ಧೈರ್ಯ ಶಾಲಿ ಶೌರ್ಯ ವಂತನಾಗಿದ್ದು, ಮೋಡಿ ಮಾಡುತ್ತಾನೆ. ಹಾಗಾಗಿ ನಮ್ಮ ಮಗನಿಗೆ ವಾಯು ಎಂದು ನಾವು ಹೆಸರಿಡಲು ತೀರ್ಮಾನಿಸಿದೆವು ಎಂದು ನಟಿ ಸೋನಂ ಕಪೂರ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Leave a Reply

%d bloggers like this: