ತಮ್ಮ ಮಗಳಿಗೆ ಕೃಷ್ಣನ ವೇಷ ತೊಡಿಸಿ ಫೋಟೋಗಳನ್ನು ಹಂಚಿಕೊಂಡ ನಟಿ ಪ್ರಣೀತಾ ಅವರು

ಸ್ಯಾಂಡಲ್ ವುಡ್ ಬಟ್ಟಲು ಕಣ್ಣು ಚೆಲುವೆ ಪ್ರಣಿತಾ ಸುಭಾಷ್ ಅವರು ಇತ್ತೀಚೆಗೆ ತಮ್ಮ ಕೌಟುಂಬಿಕ ಸುಂದರ ಕ್ಷಣಗಳನ್ನ ಹಂಚಿಕೊಳ್ಳುವ ಮೂಲಕ ಆಗಾಗ ಸುದ್ದಿ ಆಗುತ್ತಿರುತ್ತಾರೆ. ಹೌದು ನಟಿ ಪ್ರಣಿತಾ ಅವರು ಉದ್ಯಮಿ ನಿತಿನ್ ರಾಜ್ ಎಂಬುವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇದೀಗ ಸಾಂಸಾರಿಕ ಜೀವನದಲ್ಲಿ ಬಿಝಿ಼ ಆಗಿದ್ದಾರೆ. ಅದರಂತೆ ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿ ಸುದ್ದಿಯಾದ್ರು. ಅದಾದ ನಂತರ ಭೀಮನ ಅಮವಾಸ್ಯೆ ದಿನದಂದು ತಮ್ಮ ಪತಿ ಅವರ ಕಾಲು ತೊಳೆದು ಪೂಜೆ ಮಾಡುವ ಒಂದಷ್ಟು ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಅದಾಗಲೂ ಕೂಡ ಪ್ರಣಿತಾ ಅವರ ಫೋಟೋಗಳು ಸೊಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದವು. ತದ ನಂತರ ತಮ್ಮ ಮುದ್ದು ಮಗಳ ಮಗಳ ಹೆಸರನ್ನ ರಿವೀಲ್ ಮಾಡಿದ್ರು. ಆರ್ನಾ ಎಂಬ ಹೆಸರನ್ನ ತಮ್ಮ ಮಗಳಿಗಿಟ್ಟು ತಮ್ಮ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡು ಸಂಭ್ರಮ ಪಟ್ಟಿದ್ದರು.

ಇದೀಗ ಮತ್ತೆ ನಟಿ ಪ್ರಣಿತಾ ಅವರು ಸುದ್ದಿ ಆಗಿರೋದು ಕೃಷ್ಣಾಷ್ಠಮಿ ಹಬ್ಬದಂದು ತಮ್ಮ ಮಗಳಗೆ ಕೃಷ್ಣನ ವೇಷ ತೊಡಿಸಿ ಆ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವುದರ ಮೂಲಕ. ಹೌದು ನಿನ್ನೆ ದೇಶಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಠಮಿ ಹಬ್ಫದ ಸಂಭ್ರಮ. ಅದರಂತೆ ನಾಡಿನ ಮನೆ ಮನೆಗಳಲ್ಲಿ ತಮ್ಮ ಪುಟಾಣಿ ಮಕ್ಕಳಿಗೆ ಕೃಷ್ಣನ ವೇಷ ತೊಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಅದರಂತೆ ನಟಿ ಪ್ರಣಿತಾ ಅವರು ಕೂಡ ತಮ್ಮ ಎಳೆ ಕಂದಮ್ಮಳಿಗೆ ಕೃಷ್ಣನ ವೇಷ ತೊಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ತಮ್ಮ ಮಗಳು ಆರ್ನಾಳನ್ನು ಅಪ್ಪಿ ಆಲಂಗಿಸಿ ಮುದ್ದಾಡುತ್ತಿರುವ ಒಂದಷ್ಟು ಫೋಟೋಗಳನ್ನ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇನ್ನು ನಟಿ ಪ್ರಣಿತಾ ಅವರು ಸದ್ಯಕ್ಕೆ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡು ಮಗಳ ಲಾಲನೆ ಪಾಲನೆ ಮಾಡುತ್ತಾ ತಾಯ್ತನವನ್ನು ಅನುಭವಿಸುತ್ತಿದ್ದಾರೆ.