ತಮ್ಮ ಮಗಳನ್ನು ಪರಿಚಯಿಸಿದ ರಿಶಬ್ ಶೆಟ್ಟಿ ಅವರು, ಮುದ್ದಾದ ಮಗಳಿಗೆ ದೇವರ ಹೆಸರು ನಾಮಕರಣ ಮಾಡಿದ ದಂಪತಿ

ಕಾಂತಾರ ಸಿನಿಮಾದ ಅಭೂತ ಪೂರ್ವ ಯಶಸ್ಸಿನ ಅಲೆಯಲ್ಲಿ ಇರೋ ರಿಷಭ್ ಶೆಟ್ಟಿ ತಮ್ಮ ಮುದ್ದು ಮಗಳ ಫೊಟೋವೊಂದನ್ನ ಇದೇ ಮೊದಲ ಬಾರಿಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ತಮ್ಮ ಮಗಳ ಹೆಸರನ್ನ ಕೂಡ ತಿಳಿಸಿದ್ದಾರೆ. ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ ಸದ್ಯಕ್ಕೆ ಕಾಂತಾರ ಸಿನಿಮಾದ ಮೂಲಕ ಭಾರತೀಯ ಚಿತ್ರರಂಗದಾದ್ಯಂತ ಭಾರಿ ಸುದ್ದಿಯಲ್ಲಿದ್ದಾರೆ. ಅಷ್ಟರ ಮಟ್ಟಿಗೆ ಕಾಂತಾರ ಸಿನಿಮಾ ಸದ್ದು ಮಾಡಿ ಬಾಕ್ಸ್ ಆಫೀಸ್ ನಲ್ಲಿ ಮೂವತ್ತು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಲೂಟಿ ಮಾಡುತ್ತಿದೆ. ಇನ್ನು ಈ ಚಿತ್ರಕ್ಕೆ ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಅವರ ಕೊಡುಗೆ ಕೂಡ ಇದೆ ಅಂತ ಹೇಳ್ಬೋದು. ಯಾಕಂದ್ರೆ ರಿಷಬ್ ಶೆಟ್ಟಿ ಅವರ ಕೆಲಸದಲ್ಲಿ ಪ್ರಗತಿ ಶೆಟ್ಟಿ ಬೆನ್ನೆಲುಬಾಗಿ ನಿಲ್ಲುತ್ತಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರೋ ಪ್ರಗತಿ ಶೆಟ್ಟಿ ತಮ್ಮ ಫೋಟೋ ಮತ್ತು ಮಗ ರಣ್ ವಿತ್ ಶೆಟ್ಟಿಯ ಫೋಟೋಗಳನ್ನ ಶೇರ್ ಮಾಡ್ತಾನೆ ಇರ್ತಾರೆ.

ಇನ್ನು ಕಳೆದ ಮಾರ್ಚ್ ತಿಂಗಳ 4ರಂದು ಪ್ರಗತಿ ಶೆಟ್ಟಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ರು. ಆಗ ರಿಷಬ್ ಶೆಟ್ಟಿ ಈ ವಿಷಯ ತಿಳಿಸಿ, ತಾಯಿ ಮಗು ಇಬ್ಫರು ಆರೋಗ್ಯವಾಗಿದ್ದಾರೆ ಎಂದು ಪೋಸ್ಟ್ ಮಾಡಿದ್ದರು. ಆದೀಗ ಅದರಂತೆ ರಿಷಬ್ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಏಳು ತಿಂಗಳ ತಮ್ಮ ಮುದ್ದಾದ ಮಗಳ ಫೋಟೋವನ್ನ ಶೇರ್ ಮಾಡಿದ್ದಾರೆ. ಮಗಳ ಫೋಟೋ ಜೊತೆಗೆ ಎಲ್ಲರಿಗೂ ನವರಾತ್ರಿಯ ಶುಭಾಶಯಗಳು. ನಾಡಹಬ್ಬಕ್ಕೆ ಕಾಂತಾರದ ಯಶಸ್ಸು, ನಾಡಿನ ಜನರ ಪ್ರೀತಿ ಮತ್ತಷ್ಟು ಸಂಭ್ರಮವನ್ನು ತಂದಿವೆ. ಇದಕ್ಕೆ ಕಲಶಪ್ರಾಯವಾಗಿ, ಮಗಳು ರಾಧ್ಯಾಳ ಮುಗ್ಧ ನಗುವೂ ಜೊತೆಯಾಗಿದೆ.. ನಿಮ್ಮೆಲ್ಲರ ಹಾರೈಕೆಗಳಿರಲಿ ಎಂದು ಬರೆದಿದ್ದಾರೆ. ಸದ್ಯಕ್ಕೆ ರಿಷಬ್ ಶೆಟ್ಟಿ ಅವರ ಮಗಳ ಫೋಟೋಗೆ ನೆಟ್ಟಿಗರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಶುಭ ಹಾರೈಸಿದ್ದಾರೆ. ಮಗಳಿಗೆ ‘ರಾಧ್ಯಾ’ ಎಂದು ನಾಮಕರಣ ಮಾಡಿದ್ದು ರಾಧ್ಯಾ ಎಂಬುದು ‘ರಾಧ’ ದೇವಿಯ ಇನ್ನೊಂದು ಹೆಸರಾಗಿದೆ.

Leave a Reply

%d bloggers like this: