ತಮ್ಮ ಕನಸಿನ ಕಾರು ಖರೀದಿಸಿದ ಕನ್ನಡದ ಜನಪ್ರಿಯ ನಟಿ

ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾ ಖ್ಯಾತಿಯ ನಟಿ ಅದ್ವಿತಿ ಶೆಟ್ಟಿ ಐಷಾರಾಮಿ ದುಬಾರಿ ಕಾರ್ ವೊಂದನ್ನ ಖರೀದಿ ಮಾಡಿ ಭಾರಿ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ನಮ್ಮ ಕನ್ನಡದ ಅನೇಕ ಕಿರುತೆರೆ ಮತ್ತು ಬೆಳ್ಳಿತೆರೆಯ ನಟ ನಟಿಯರು ಹೊಸ ಹೊಸ ದುಬಾರಿ ಬೆಲೆಯ ಕಾರ್ ಗಳನ್ನೇ ಖರೀದಿ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಈ ಸಿನಿಮಾ ಸೆಲೆಬ್ರಿಟಿಗಳು ಕಾರ್ ಕೊಳ್ಳುವುದು ಹೊಸದೇನಲ್ಲ. ಆದರೆ ಹಿಂದೆಲ್ಲಾ ಸ್ಟಾರ್ ನಟರು ಮಾತ್ರ ಐಷಾರಾಮಿ ಕಾರ್ ಗಳನ್ನ ಖರೀದಿ ಮಾಡುತ್ತಿದ್ದರು. ಅವರಿಗೆ ಕಾರ್ ಕ್ರೇಜ಼್ ಅಷ್ಟರ ಮಟ್ಟಿಗೆ ಇರ್ತಿತ್ತು. ಆದರೇ ಇತ್ತೀಚೆಗೆ ಕೆಲವು ದಿನಗಳಿಂದೀಚೆಗೆ ನಾವು ಕೂಡ ಯಾರಿಗೂ ಕಡಿಮೆ ಇಲ್ಲ, ನಮಗೂ ಸಹ ಕಾರ್ ಕ್ರೇಜ಼್ ಇದೆ ಎಂದು ಕಿರುತೆರೆ ನಟಿಯರು, ಸಿನಿಮಾ ನಟಿಯರು ಕೂಡ ದುಬಾರಿ ಬೆಲೆಯ ಐಷಾರಾಮಿ ಕಾರ್ ಅನ್ನೇ ಖರೀದಿ ಮಾಡಿ ಭಾರಿ ಸುದ್ದಿಯಾಗುತ್ತಿದ್ದಾರೆ.

ಅದರಂತೆ ಇದೀಗ ಕಾರ್ ಖರೀದಿ ಮಾಡಿ ಸುದ್ದಿ ಆಗಿರುವುದು ನಟಿ ಅದ್ವಿತಿ ಶೆಟ್ಟಿ. ಹೌದು ನಟಿ ಅದ್ವಿತಿ ಶೆಟ್ಟಿ ಅವರು ಇತ್ತೀಚೆಗೆ ಭಾರಿ ಜನಪ್ರಿಯತೆ ಪಡೆದಿರುವ ಕಿಯಾ ಸೆಲ್ಟೋಸ್ ಎಸ್ಯುವಿ ಕಾರ್ ಖರೀದಿಸಿದ್ದಾರೆ. ಈ ಕಾರಿನ ಬೆಲೆಯು 12 ಲಕ್ಷದಿಂದ ಆರಂಭವಾಗಿ 22ಲಕ್ಷದವರೆಗೆ ಇರಲಿದೆ ಎಂದು ತಿಳಿದು ಬಂದಿದೆ. ಇನ್ನು ಈ ಕಾರಿನ ವಿಶೇಷತೆಗಳನ್ನ ನೋಡುವುದಾದರೆ ಕಿಯಾ ಸೆಲ್ಟೋಸ್ ಎಸ್ಯೂವಿ ಕಾರು ನಾಲ್ಕು ಏರ್ ಬ್ಯಾಗ್ ಗಳನ್ನ ಹೊಂದಿದ್ದು, ಎಲ್ಲಾ ಚಕ್ರಗಳು ಡಿಸ್ಕ್ ಬ್ರೇಕ್ ಆಧಾರಿತವಾಗಿದೆ. ಬ್ರೇಕ್ ಅಸಿಸ್ಟ್, ಹಿಲ್ ಅಸಿಸ್ಟ್, ವೆಹಿಕಲ್ ಸ್ಟ್ಯಾಬಿಲಿಟಿ ನಿಯಂತ್ರಣ ವ್ಯವಸ್ಥೆ ಒಳಗೊಂಡಿದೆ. ಟಾಪ್ ಎಂಡ್ ಮಾಡೆಲ್ಲಿನ ಹೆಚ್ ಟಿ ಎಕ್ಸ್ ಪ್ಲಸ್, ಜಿಟಿಎಕ್ಸ್, ಜಿಟಿಎಕ್ಸ್ ಪ್ಲಸ್ ಅಂಡ್ ಎಕ್ಸ್ ಲೈನ್ ಮಾದರಿಗಳಲ್ಲಿ ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್ ಗಳನ್ನೊಂದಿದೆ. ಇನ್ನು ಈ ಹೊಸ ಕಾರಿನಲ್ಲಿ ಟೈಗರ್ ನೋಸ್ ಗ್ರಿಲ್, ಕ್ರೌನ್ ಜವೆಲ್, ಎಲ್ ಇಡಿ ಹೆಡ್ ಲ್ಯಾಂಪ್, ಥ್ರೀಡಿ ಮಲ್ಟಿ ಲೆಯರ್ ಸೈಡ್ ಟರ್ನ್ ಇಂಡಿಕೇಟರ್, ಆಕರ್ಷಕ ವಿನ್ಯಾಸ ಒಳಗೊಂಡಿದೆ.

ಹೊಸ ತಾಂತ್ರಿಕ ಸೌಲಭ್ಯಗಳನ್ನ ನೋಡುವುದಾದರೆ ಈ ಕಿಯಾ ಸೆಲ್ಟೋಸ್ ಎಸ್ಯೂವಿಯಲ್ಲಿ ಸ್ಕೀಡ್ ಪ್ಲೇಟ್ ರಿಪ್ಲೆಕ್ಟರ್, ಶಾರ್ಕ್ ಫಿನಾ ಆಂಟೆನಾ, ಅಟೋಮ್ಯಾಟಿಕ್ ಸನ್ ರೂಫ್ ಕೂಡ ಹೊಂದಿದೆ. ಇನ್ನು ಅದ್ವಿತಿ ಶೆಟ್ಟಿ ಅವರು ಯಶ್ ಅವರ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾದಲ್ಲಿ ನಟಿ ರಾಧಿಕಾ ಪಂಡಿತ್ ಅವರ ಗೆಳತಿಯಾಗಿ ನಟಿಸಿದ್ದರು. ಅವಳಿಯಾಗಿರುವ ಅದ್ವಿತಿ ಶೆಟ್ಟಿ ಅವರು ತಮ್ಮ ತಂಗಿ ಅಶ್ವಿತಿ ಶೆಟ್ಟಿ ಅವರೊಟ್ಟಿಗೆ ನಟಿಸಿದ್ದರು. ಈ ಚಿತ್ರದಲ್ಲಿ ಅಕ್ಕ ತಂಗಿಯರು ಹೆಚ್ಚು ಗಮನ ಸೆಳೆದಿದ್ದರು. ಅದಲ್ಲದೆ ಅದ್ವಿತಿ ಶೆಟ್ಟಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ಎರಡು ಕನಸು ಧಾರಾವಾಹಿಯಲ್ಲಿ ಕಥಾ ನಾಯಕಿ ಸಹನಾ ಪಾತ್ರದಲ್ಲಿ ನಟಿಸಿದ್ದರು. ಸದ್ಯಕ್ಕೆ ಈ ಕರಾವಳಿ ಬೆಡಗಿ ಅದ್ವಿತಿ ಶೆಟ್ಟಿ ಅವರು ಜೆಕೆ ಅವರ ಐರಾವನ್ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ.

Leave a Reply

%d bloggers like this: