ತಮ್ಮ ಹುಟ್ಟುಹಬ್ಬದ ಜೊತೆಗೆ ಕೇರಳ ರಾಜ್ಯಕ್ಕೆ ವಿಕ್ರಾಂತ್ ರೋಣ ಚಿತ್ರವನ್ನು ಪರಿಚಯಿಸಿದ ದಕ್ಷಿಣ ಭಾರತದ ಖ್ಯಾತ ನಟ

ಭಾರತೀಯ ಚಿತ್ರರಂಗದ ವೈವಿಧ್ಯಮಯ ನಟರಲ್ಲಿ ಅನೇಕರು ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿ ತಮ್ಮ ಸಿನಿಮಾಗಳು ಸಮಾಜದ ಮೇಲೆ ಪ್ರಭಾವ ಬೀರಬೇಕು ಎಂಬ ದೃಷ್ಟಿಕೋನ ಹೊಂದಿರುತ್ತಾರೆ. ಅಂತಹ ಕಲಾವಿದರ ಪೈಕಿ ಮಲೆಯಾಳಂ ಚಿತ್ರರಂಗದ ರೊಮ್ಯಾಂಟಿಕ್ ಹೀರೋ ನಟ ದುಲ್ಖರ್ ಸಲ್ಮಾನ್ ಕೂಡ ಒಬ್ಬರು. ಮಾಲಿವುಡ್ ಈ ರೊಮ್ಯಾಂಟಿಕ್ ಹೀರೋ ದುಲ್ಖರ್ ಸಲ್ಮಾನ್ ಅವರಿಗೆ ಇಂದು ಅಂದರೆ ಜುಲೈ 28ರಂದು ಜನ್ಮದಿನದ ಸಂಭ್ರಮ. ಇಂದು ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭಾಶಯಗಳ ಸುರಿಮಳೆ ಗೈದಿದ್ದಾರೆ. ನಟ ದುಲ್ಖರ್ ಸಲ್ಮಾನ್ ಅವರಿಗೆ ಕೇವಲ ಮಲೆಯಾಳಂ ಮಾತ್ರ ಅಲ್ಲದೆ ಭಾರತೀಯ ಚಿತ್ರರಂಗದಾದ್ಯಂತ ಅಪಾರ ಅಭಿಮಾನಿ ಬಳಗವನ್ನೊಂದಿದ್ದಾರೆ. ತನ್ನ ತಂದೆಯಂತೆ ಕಲಾ ಸೇವೆಯಲ್ಲಿ ತೊಡಗಿರುವ ನಟ ದುಲ್ಖರ್ ಸಲ್ಮಾನ್ ಅವರು ಮಲೆಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ನಟನಾಗಿ ಮಿಂಚುತ್ತಿದ್ದಾರೆ.

ತನ್ನ ತಂದೆ ಮುಮ್ಮುಟ್ಟಿ ಅವರ ಛಾಯೆ ಇಲ್ಲದೆ ತನ್ನದೇಯಾದ ಸ್ವಂತ ಪ್ರತಿಭೆಯಿಂದ ದುಲ್ಖರ್ ಸಲ್ಮಾನ್ ಅವರು ಬಣ್ಣದ ಲೋಕದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಅವರ ಪ್ರತಿಭೆಗೆ ಅವರು ನಟಿಸಿದ ಎಲ್ಲಾ ಸಿನಿಮಾಗಳು ಕೈಗನ್ನಡಿ ಸಾಕ್ಷಿಯಾಗಿವೆ. ಚಾರ್ಲಿ ಸಿನಿಮಾದ ನೋಡಿದ ಸಿನಿ ಪ್ರೇಕ್ಷಕರು ದುಲ್ಖರ್ ಸಲ್ಮಾನ್ ಅವರ ನಟನೆಗೆ ಫಿದಾ ಆಗದೇ ಇರಲಾರರು. ಇನ್ನು ಬೆಂಗಳೂರು ಡೇಸ್ ಸಿನಿಮಾದಲ್ಲಿನ ಅರ್ಜುನ್ ಪಾತ್ರದಲ್ಲಿ ದುಲ್ಖರ್ ಸಲ್ಮಾನ್ ಜೀವ ತುಂಬಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅರ್ಜುನ್ ಎಂಬ ಪಾತ್ರ ಡಿವೋರ್ಸ್ ಪಡೆದ ಪೋಷಕರ ಪುತ್ರನ ಪಾತ್ರದಲ್ಲಿ ಕಾಣಿಸಿಕೊಂಡಿರುತ್ತಾರೆ. ಅರ್ಜುನ್ ಪಾತ್ರ ಇಂದಿಗೂ ಕೂಡ ದುಲ್ಖರ್ ಸಲ್ಮಾನ್ ಅವರು ಸಿನಿ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಇನ್ನು ನಟ ದುಲ್ಖರ್ ಸಲ್ಮಾನ್ ಒಬ್ಬರು ಪ್ರತಿಭಾನ್ವಿತ ಬಹುಮುಖ ಪ್ರತಿಭೆ ಅನ್ನುವುದಕ್ಕೆ ತಕ್ಕ ಉದಾಹರಣೆ ಅಂದರೆ ಅವರ ಸೋಲೋ ಎಂಬ ಸಿನಿಮಾ.

ಈ ಚಿತ್ರದಲ್ಲಿ ನಟ ದುಲ್ಖರ್ ಸಲ್ಮಾನ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ತನ್ನ ನಟನಾ ಸಾಮರ್ಥ್ಯ ಏನೆಂಬುದನ್ನ ಪ್ರದರ್ಶನ ಮಾಡಿದ್ದರು. ಅದೇ ರೀತಿಯಾಗಿ ಅವರ ನಟನೆಯ ಮಹಾನಟಿ ಎಂಬ ಸಿನಿಮಾ ದುಲ್ಖರ್ ಸಲ್ಮಾನ್ ಮತ್ತು ಕೀರ್ತಿ ಸುರೇಶ್ ಅವರಿಗೆ ತಮ್ಮ ಸಿನಿ ವೃತ್ತಿ ಜೀವನದ ಬಹು ಮುಖ್ಯ ಸಿನಿಮಾ ಆಗಿತ್ತು. ಈ ಮಹಾನಟಿ ಸಿನಿಮಾದಲ್ಲಿ ಒಬ್ಬ ಯಶಸ್ವಿ ನಟಿಯ ಪತಿ ಯಾವ ರೀತಿಯಾಗಿ ತನ್ನ ಸತಿಯ ಯಶಸ್ಸನ್ನು ಒಪ್ಪಿಕೊಳ್ಳವು ಪರದಾಡುತ್ತಾನೋ ಅಂತಹ ಪಾತ್ರದಲ್ಲಿ ದುಲ್ಖರ್ ಸಲ್ಮಾನ್ ನಟಿಸಿದ್ದರು. ಈ ಚಿತ್ರದಲ್ಲಿ ನಟ ದುಲ್ಖರ್ ಸಲ್ಮಾನ್ ಅವರು ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದರು. ಹೀಗೆ ನಟ ದುಲ್ಖರ್ ಸಲ್ಮಾನ್ ಅವರು ತಮ್ಮ ಮನೋಜ್ಞ ನಟನೆಯ ಮೂಲಕ ಇಂದು ಭಾರತೀಯ ಚಿತ್ರರಂಗದ ಸುಪ್ರಸಿದ್ದ ನಟನಾಗಿ ಮಿಂಚುತ್ತಿದ್ದಾರೆ. ಇವರು ಇದೀಗ ಕನ್ನಡದ ವಿಕ್ರಾಂತ್ ರೋಣ ಚಿತ್ರವನ್ನು ಕೇರಳ ರಾಜ್ಯಾದ್ಯಂತ ಬಿಡುಗಡೆ ಮಾಡುವ ಹೊಣೆ ಹೊತ್ತಿದ್ದಾರೆ.

Leave a Reply

%d bloggers like this: