ತಮ್ಮ ಹೊಸ ತಮಿಳು ಚಿತ್ರಕ್ಕೆ ತಾವೇ ಧ್ವನಿ ನೀಡಿದ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಅವರು

ತಮಿಳು ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಸಂಪೂರ್ಣವಾಗಿ ಕನ್ನಡದಲ್ಲೇ ಮಾತನಾಡಿದ ಕೆಜಿಎಫ್ ಬೆಡಗಿ. ಕೆಜಿಎಫ್ ಸಿನಿಮಾ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ. ಈ ಚಿತ್ರ ಮಾಡಿದ ದಾಖಲೆ ಅಷ್ಟಿಷ್ಟಲ್ಲ ಬಿಡಿ. ಕೆಜಿಎಫ್ ಭಾಗ1 ಮತ್ತು ಭಾಗ2 ಈ ಎರಡೂ ಸಿನಿಮಾಗಳು ಕನ್ನಡ ಚಿತ್ರರಂಗವನ್ನು ಇಡೀ ವಿಶ್ವದ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿತು. ಅದರಂತೆ ನಟ ಯಶ್ ಅವರನ್ನ ಪ್ಯಾನ್ ಇಂಡಿಯಾ ಮಾತ್ರ ಅಲ್ಲ ಇಂಟರ್ ನ್ಯಾಶನಲ್ ಸ್ಟಾರ್ ನಟನಾಗಿ ಮಿಂಚುವಂತೆ ಮಾಡಿತು. ಇದರ ಜೊತೆಗೆ ಕೆಜಿಎಫ್ ಚಿತ್ರದ ನಾಯಕಿ ಶ್ರೀ ನಿಧಿ ಶೆಟ್ಟಿ ಅವರಿಗೂ ಕೂಡ ಅಪಾರ ಜನಪ್ರಿಯತೆ ತಂದುಕೊಟ್ಟಿತು. ಇದೀಗ ನಟಿ ಕನ್ನಡತಿ ಶ್ರೀ ನಿಧಿ ಶೆಟ್ಟಿ ಕೂಡ ಪ್ಯಾನ್ ಇಂಡಿಯಾ ಸ್ಟಾರ್ ನಟಿ ಅಂತಾನೇ ಹೇಳ್ಬೋದು. ಇತ್ತೀಚೆಗೆ ಶ್ರೀ ನಿಧಿ ಶೆಟ್ಟಿ ಅವರು ತಮಿಳಿನ ಸೂಪರ್ ಸ್ಟಾರ್ ನಟ ಚಿಯಾನ್ ವಿಕ್ರಂ ಅವರೊಟ್ಟಿಗೆ ನಟಿಸಿರುವ ಕೋಬ್ರಾ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು.

ಕೋಬ್ರಾ ಸಿನಿಮಾ ಮೂಲತಃ ತಮಿಳು ಭಾಷೆ ಚಿತ್ರವಾಗಿದ್ದು ತೆಲುಗು ಮತ್ತು ಕನ್ನಡ ಭಾಷೆಗೂ ಕೂಡ ಡಬ್ ಆಗಿದೆ. ಮೂರೂ ಭಾಷೆಗಳಲ್ಲಿ ಕೋಬ್ರಾ ಸಿನಿಮಾ ತೆರೆಗೆ ಬರುತ್ತಿದ್ದು, ಚಿತ್ರತಂಡ ಎಲ್ಲೆಡೆ ಭರ್ಜರಿ ಪ್ರಚಾರ ಮಾಡುತ್ತಿದೆ. ಅದರಂತೆ ಕೋಬ್ರಾ ಚಿತ್ರದ ನಾಯಕ ನಟ ಚಿಯಾನ್ ವಿಕ್ರಂ ಮತ್ತು ನಟಿ ಶ್ರೀ ನಿಧಿ ಶೆಟ್ಟಿ ಅವರು ಬೆಂಗಳೂರಿನ ಕೋರಮಂಗಲ ಫೋರಂ ಮಾಲ್ ನಲ್ಲಿ ನಡೆದ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು. ಈ ತಮಿಳಿನ ಕೋಬ್ರಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರೋ ಶ್ರೀನಿಧಿ ಶೆಟ್ಟಿ ಅವರು ತಾವೊಬ್ಬರು ಕನ್ನಡತಿ ಅನ್ನೋದನ್ನ ಹೆಮ್ಮೆಯಿಂದ ಹೇಳಿಕೊಳ್ತಾ ಇಡೀ ಕಾರ್ಯಕ್ರಮ ಪೂರಾ ಕನ್ನಡದಲ್ಲೇ ಮಾತನಾಡಿದರು. ಶ್ರೀನಿಧಿ ಶೆಟ್ಟಿ ಅವರ ಬಗ್ಗೆ ಸ್ವತಃ ನಟ ವಿಕ್ರಂ ಅವರು ಇವರಿಗೆ ಕನ್ನಡ ಡಬ್ಬಿಂಗ್ ಮಾಡೋವಾಗ ಸುಸ್ತಾಗುತ್ತಿದ್ದರು ಕೂಡ ನನ್ನ ಮಾತೃಭಾಷೆ ನನ್ನ ಕನ್ನಡ ಭಾಷೆ ಡಬ್ಬಿಂಗ್ ಅನ್ನ ನಾನೇ ಮಾಡ್ಬೇಕು ಅಂತ ತುಂಬಾ ಉತ್ಸಾಹದಲ್ಲಿ ಡಬ್ಬಿಂಗ್ ಮಾಡಿದ್ದಾರೆ.

ಅವರ ಕಮಿಟ್ಮೆಂಟ್ ಮತ್ತು ಮಾತೃಭಾಷೆ ಮೇಲಿರೋ ಅಭಿಮಾನಕ್ಕೆ ನಿಜಕ್ಕೂ ಕೂಡ ಹೆಮ್ಮೆ ಎನಿಸುತ್ತೆ ಎಂದು ನುಡಿದಿದ್ದಾರೆ. ಅದರ ಜೊತೆಗೆ ವಿಕ್ರಮ್ ಅವರು ನಟ ಯಶ್ ಬಗ್ಗೆ ಅವರೊಟ್ಟಿಗೆ ಇರೋ ಸ್ನೇಹ ಸಂಬಂಧದ ಬಗ್ಗೆ ಮಾತನಾಡಿ, ನಾನು ಕೆಜಿಎಫ್ ಚಿತ್ರ ನೋಡಿದ ನಂತರ ಪ್ರಶಾಂತ್ ನೀಲ್ ಅವರಿಗೆ ಕರೆ ಮಾಡಿ ನಿಮ್ಮೊಟ್ಟಿಗೆ ಸಿನಿಮಾ ಮಾಡಬೇಕು ಎಂದು ಹೇಳಿದ್ದೆ ಎಂದು ಹೇಳಿದರು. ಇನ್ನು ನಟಿ ಶ್ರೀನಿಧಿ ಶೆಟ್ಟಿ ಅವರು ನಮ್ಮ ಮಾತೃಭಾಷೆ ಕನ್ನಡದಲ್ಲಿ ನಾನು ಡಬ್ ಮಾಡಿದ್ದೇನೆ. ದಯವಿಟ್ಟು ಎಲ್ಲರು ಕೋಬ್ರಾ ಸಿನಿಮಾ ನೋಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದರು. ಇದೇ ಆಗಸ್ಟ್ 31ರಂದು ವಿಕ್ರಮ್ ಮತ್ತು ಶ್ರೀನಿಧಿ ಶೆಟ್ಟಿ ನಟನೆಯ ಆಕ್ಷನ್ ಥ್ಲಿಲ್ಲರ್ ಕೋಬ್ರಾ ಸಿನಿಮಾ ತಮಿಳು, ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಈ ಕೋಬ್ರಾ ಚಿತ್ರಕ್ಕೆ ಲಲಿತ್ ಕುಮಾರ್ ಬಂಡವಾಳ ಹೂಡಿದ್ದು, ಅಜಯ್ ಜ್ಞಾನಮುತ್ತು ನಿರ್ದೇಶನ ಮಾಡಿದ್ದಾರೆ. ವಿಶೇಷ ಪಾತ್ರದಲ್ಲಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ನಟಿಸಿದ್ದಾರೆ.

Leave a Reply

%d bloggers like this: