ತಮ್ಮ ಹೊಸ ಚಿತ್ರ ಘೋಷಿಸಿದ ನಟಿ ರಮ್ಯಾ ಅವರು, ಕನ್ನಡ ಚಿತ್ರರಂಗಕ್ಕೆ ಮತ್ತೆ ಕಮ್ ಬ್ಯಾಕ್

ಸ್ಯಾಂಡಲ್ ವುಡ್ ಬ್ಯೂಟಿ ಕ್ವೀನ್ ನಟಿ ರಮ್ಯಾ ಬಣ್ಣದ ಲೋಕಕ್ಕೆ ರೀ ಎಂಟ್ರಿ ಆಗುತ್ತಿದ್ದಾರೆ. ಈ ಒಂದು ಸುದ್ದಿ ಅವರ ಅಭಿಮಾನಿಗಳಿಗೆ ಮತ್ತು ಕನ್ನಡ ಚಿತ್ರ ಪ್ರೇಕ್ಷಕರಿಗೆ ಒಂದೊಳ್ಳೆ ಶುಭಸುದ್ದಿ ಅಂತಾನೇ ಹೇಳ್ಬೋದು. ನಟಿ ರಮ್ಯಾ ಅವರು ರಾಜಕೀಯ ರಂಗಕ್ಕೆ ಎಂಟ್ರಿ ಆದ ನಂತರ ಸಿನಿಮಾ ಕ್ಷೇತ್ರಕ್ಕೆ ಬ್ರೇಕ್ ಹಾಕಿದ್ದರು. ಇದೀಗ ಏಳೆಂಟು ವರ್ಷಗಳ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ ರಮ್ಯಾ. ಈ ಬಾರಿ ರಮ್ಯಾ ಕೇವಲ ನಟಿಯಾಗಿ ಮಾತ್ರ ಅಲ್ಲ ನಿರ್ಮಾಪಕಿಯಾಗಿ ಎಂಟ್ರಿ ಆಗ್ತಿದ್ದಾರೆ. ಇದು ವಿಶೇಷ ಅಂತೇಳ್ಬೋದು. ಇನ್ನು ರಮ್ಯಾ ಅವರು ಕಮ್ ಬ್ಯಾಕ್ ಆಗುತ್ತಿರುವ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿರೋದು ಬೇರಾರು ಅಲ್ಲ ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ನಟ ಕಮ್ ನಿರ್ದೇಶಕ ರಾಜ್.ಬಿ ಶೆಟ್ಟಿ. ನಟಿ ರಮ್ಯಾ ಅವರು ಆಪಲ್ ಬಾಕ್ಸ್ ಸ್ಟೂಡಿಯೋಸ್ ಎಂಬ ನಿರ್ಮಾಣ ಸಂಸ್ಥೆಯನ್ನ ಆರಂಭಿಸಿದ್ದಾರೆ.

ಈ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕಿಯಾಗಿ ರೀ ಎಂಟ್ರಿ ಆಗಿದ್ದಾರೆ. ತಮ್ಮ ಆಪಲ್ ಬಾಕ್ಸ್ ಸಂಸ್ಥೆ ಎರಡು ಚಿತ್ರಗಳನ್ನ ನಿರ್ಮಾಣ ಮಾಡಲು ಸಜ್ಜಾಗಿದೆ ಅಂತ ಕೆಲವು ದಿನಗಳ ಹಿಂದೆ ತಿಳಿಸಿದ್ರು. ಆ ಎರಡು ಸಿನಿಮಾಗಳ ಪೈಕಿ ಒಂದು ರಾಜ್ ಶೆಟ್ಟಿ ಅವರು ನಿರ್ದೇಶನ ಮಾಡುತ್ತಿರುವ ಸಿನಿಮಾ. ಈ ಸಿನಿಮಾದ ಟೈಟಲ್ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಈ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾವನ್ನ ನಟಿ ರಮ್ಯಾ ಅವರು ತಮ್ಮ ಆಪಲ್ ಬಾಕ್ಸ್ ಸ್ಟೂಡಿಯೋಸ್ ಸಂಸ್ಥೆಯಡಿಯಲ್ಲಿ ನಿರ್ಮಾಣ ಮಾಡುವುದರ ಜೊತೆಗೆ ತಾವೇ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದೇ ರೀತಿಯಾಗಿ ನಿರ್ದೇಶನದ ಜವಾಬ್ದಾರಿ ಹೊತ್ತಿರೋ ರಾಜ್.ಬಿ ಶೆಟ್ಟಿ ಕೂಡ ಈ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಸಿನಿಮಾಗೆ ವಿಧುನ್ ಮುಕುಂದನ್ ರಾಗ ಸಂಯೋಜನೆ ಮಾಡುತ್ತಿದ್ದು, ಪ್ರವೀಣ್ ಶ್ರಿಯಾನ್ ಛಾಯಾಗ್ರಹಣ ಕೆಲಸ ಮಾಡುತ್ತಿದ್ದಾರೆ. ರಾಜ್ ಶೆಟ್ಟಿ ಅವರ ಗರಡು ಗಮನ ವೃಷಭ ವಾಹನ ಸಿನಿಮಾದಲ್ಲಿ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು ಈ ಚಿತ್ರದಲ್ಲಿ ಕೆಲಸ ಮಾಡಲಿದ್ದಾರಂತೆ. ನಿರ್ದೇಶಕ ಕಮ್ ನಟ ರಾಜ್ ಶೆಟ್ಟಿ ಅವರ ಗರುಡ ಗಮನ ವೃಷಭ ವಾಹನ ಸಿನಿಮಾ ನೋಡಿ ಥ್ರಿಲ್ ಆಗಿ ನಟಿ ರಮ್ಯಾ ಅವರು ರಾಜ್ ಶೆಟ್ಟಿ ಅವರನ್ನ ಭೇಟಿ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದರ ಜೊತೆಗೆ ಒಂದು ಸಿನಿಮಾ ಮಾಡುವ ಭರವಸೆ ಕೂಡ ನೀಡಿದ್ದರು. ಅದರಂತೆ ಇದೀಗ ರಮ್ಯಾ ಅವರು ತಮ್ಮ ಆಪಲ್ ಬಾಕ್ಸ್ ಸ್ಟೂಡಿಯೋಸ್ ಮುಖಾಂತರ ರಾಜ್ ಶೆಟ್ಟಿ ಅವರಿಗೆ ಒಂದು ಚಿತ್ರ ಮಾಡುತ್ತಿದ್ದು, ರಮ್ಯಾ ಅವರ ಜೊತೆಗೆ ಲೈಟರ್ ಬುದ್ದ ಫಿಲ್ಮ್ಸ್ ಸಂಸ್ಥೆ ಕೂಡ ಕೈ ಜೋಡಿಸಿದೆ. ಈಗಾಗಲೇ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ಪ್ರಿಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಆದಷ್ಟು ಬೇಗ ಈ ಸಿನಿಮಾದ ಮತ್ತಷ್ಟು ಮಾಹಿತಿಗಳು ಹೊರ ಬೀಳಲಿದೆ ಎಂದು ಚಿತ್ರತಂಡದ ಮೂಲಗಳಿಂದ ತಿಳಿದು ಬಂದಿದೆ.

Leave a Reply

%d bloggers like this: