ತಮ್ಮ ಚಿತ್ರದಿಂದಲೇ ಹೊರಬಂದ ರಮ್ಯಾ ಅವರು, ಮತ್ತೊಬ್ಬ ನಟಿಗೆ ಅವಕಾಶ

ಸ್ಯಾಂಡಲ್ ವುಡ್ ಎವರ್ಗೀನ್ ಬ್ಯೂಟಿ ಕ್ವೀನ್ ನಟಿ ರಮ್ಯಾ ಅವರು ಬಹಳ ವರ್ಷಗಳ ನಂತರ ಸಿನಿಮಾದಲ್ಲಿ ನಟಿಸುತ್ತಾರೆ ಅನ್ನೋ ವಿಚಾರ ಅವರ ಅಸಂಖ್ಯಾತ ಅಭಿಮಾನಿಗಳಿಗೆ ಭಾರಿ ಖುಷಿ ತಂದಿತ್ತು. ಆದರೆ ಈ ಖುಷಿಗೆ ಈಗ ಸ್ವತಃ ರಮ್ಯಾ ಅವರೇ ತಣ್ಣೀರೆರಚಿದ್ದಾರೆ. ಹೌದು ನಟಿ ರಮ್ಯಾ ಅವರು ಸ್ಯಾಂಡಲ್ ವುಡ್ ಗೆ ಆಪಲ್ ಬಾಕ್ಸ್ ಎಂಬ ನಿರ್ಮಾಣ ಸಂಸ್ಥೆ ಹುಟ್ಟು ಹಾಕುವ ಮೂಲಕ ನಿರ್ಮಾಪಕಿಯಾಗಿ ಕಮ್ ಬ್ಯಾಕ್ ಮಾಡುತ್ತಿದ್ದರು. ಇದು ಕನ್ನಡ ಸಿನಿ ಪ್ರೇಕ್ಷಕರಿಗೆ ಸಂತಸದ ವಿಚಾರವಾಗಿತ್ತು. ಸ್ಯಾಂಡಲ್ ವುಡ್ ಮಲ್ಟಿ ಟ್ಯಾಲೆಂಟೆಡ್ ನಟ ಕಮ್ ನಿರ್ದೇಶಕ ರಾಜ್ .ಬಿ. ಶೆಟ್ಟಿ. ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದಲ್ಲಿ ನಟಿ ರಮ್ಯಾ ಅವರು ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ ಅನ್ನೋ ಸುದ್ದಿ ಭಾರಿ ವೈರಲ್ ಆಗಿತ್ತು. ಈ ಚಿತ್ರಕ್ಕೆ ಬಂಡವಾಳ ಹೂಡಿಕೆ ಮಾಡಿ ರಮ್ಯಾ ಅವರೇ ನಟಿಸುತ್ತಾರೆ ಅಂದಮೇಲೆ ನಿರೀಕ್ಷೆ ತುಸು ಹೆಚ್ಚೇ ಇರುತ್ತೆ.

ಅದೇ ರೀತಿಯಾಗಿ ಈ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ಬಗ್ಗೆ ಅಪಾರ ನಿರೀಕ್ಷೆ ಕೂಡಾ ಹೆಚ್ಚಾಗಿತ್ತು. ಆದರೆ ಇದೀಗ ಚಿತ್ರತಂಡದಿಂದ ನಿರಾಸೆಯಾಗುವಂತಹ ಸುದ್ದಿಯೊಂದು ಹೊರ ಬಿದ್ದಿದೆ. ಅದೇನಪ್ಪಾ ಅಂದರೆ ನಟಿ ರಮ್ಯಾ ಅವರು ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿಲ್ಲವಂತೆ. ಅವರು ಕೇವಲ ನಿರ್ಮಾಪಕಿಯಾಗಿ ಈ ಚಿತ್ರದ ಭಾಗವಾಗಲಿದ್ದಾರೆ ಎಂದು ತಿಳಿದು ಬಂದಿದೆ. ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ನಿರ್ದೇಶಕ ರಾಜ್.ಬಿ.ಶೆಟ್ಟಿ ಅವರೊಟ್ಟಿಗೆ ನಟಿಸಲು ಈಗ ಆರ್.ಜೆ ಸಿರಿ ರವಿಕುಮಾರ್ ಅವರು ಬಂದಿದ್ದಾರಂತೆ. ಈ ವಿಷಯವನ್ನ ಸ್ವತಃ ರಮ್ಯಾ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ರಮ್ಯಾ ಅವರು ನಟಿಸುತ್ತಿಲ್ಲ ಅನ್ನೋ ವಿಚಾರ ಇದೀಗ ಅವರ ಅಸಂಖ್ಯಾತ ಅಭಿಮಾನಿಗಳಿಗೆ ಭಾರಿ ಬೇಸರ ಮೂಡಿಸಿದೆ. ಇನ್ನು ರಮ್ಯಾ ಅವರ ಆಪಲ್ ಬಾಕ್ಸ್ ಸಂಸ್ಥೆ ಎರಡು ಚಿತ್ರಗಳನ್ನ ನಿರ್ಮಾಣ ಮಾಡಲು ತಯಾರಿ ನಡೆಸುತ್ತಿದ್ದು, ಅದರಲ್ಲಿ ಒಂದು ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಕೆಲಸ ಕಾರ್ಯಗಳು ಈಗಾಗಲೇ ಭರದಿಂದ ಸಾಗುತ್ತಿದೆ.