ತಮ್ಮ ಚಿತ್ರ ಹೀನಾಯವಾಗಿ ಸೋತ ಬೆನ್ನಲ್ಲೇ ಭಾರತ ಹಾಗೂ ಪಾಕಿಸ್ತಾನ ಪಂದ್ಯದ ಮೈದಾನದಲ್ಲಿ ಕಾಣಿಸಿಕೊಂಡ ದಕ್ಷಿಣ ಭಾರತದ ನಟ

ರಿಯಲ್ ಸೂಪರ್ ಸ್ಟಾರ್ ನಾನಲ್ಲ ಎಂದ ವಿಜಯ್ ದೇವರಕೊಂಡ. ಇತ್ತೀಚೆಗೆ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದ ನಟರ ಪೈಕಿ ಟಾಲಿವುಡ್ ರೊಮ್ಯಾಂಟಿಕ್ ಅಂಡ್ ರೌಡಿ ಸ್ಟಾರ್ ನಟ ವಿಜಯ್ ದೇವರಕೊಂಡ ಕೂಡ ಒಬ್ಬರು. ಅದರಂತೆ ನಟ ವಿಜಯ್ ದೇವರಕೊಂಡ ಅವರು ದುಬೈನ ಅಂತರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ 2022ರ 15ನೇ ಆವೃತ್ತಿಯ ಏಷ್ಯಾ ಕಪ್ ಪಂದ್ಯ ನೋಡಲು ಜೊತೆಗೆ ಲೈಗರ್ ಚಿತ್ರದ ಪ್ರಚಾರಕ್ಕಾಗಿ ದುಬೈಗೆ ಹೋಗಿರುತ್ತಾರೆ. ಅದೂ ಕೂಡ ಆಂಕರ್ ರೂಪದಲ್ಲಿ ಎಂಬುದು ವಿಶೇಷವಾಗಿರುತ್ತದೆ. ವಿಜಯ್ ದೇವರಕೊಂಡ ಆಂಕರ್ ರೂಪದಲ್ಲಿ ಮೈದಾನದಲ್ಲಿ ಕಾಣಿಸಿಕೊಂಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ವಿಜಯ್ ದೇವರಕೊಂಡ ಅವರು ವಾಸಿಂ ಅವರಿಗೆ ಒಂದು ದಿನ ನೀವು ನನಗೆ ಬೌಲಿಂಗ್ ಮಾಡುತ್ತೀರಿ. ಆಗ ನಾನು ಸ್ಪೀಡಾಗಿ ಬ್ಯಾಟ್ ಬೀಸುತ್ತೇನೆ ಎಂದು ಹೇಳಿ ನಿಮ್ಮ ಬೌಲಿಂಗ್ ನಲ್ಲಿ ನಾನ್ ಬ್ಯಾಟಿಂಗ್ ಮಾಡಬೇಕು ಎಂಬ ಆಸೆಯನ್ನ ವ್ಯಕ್ತಪಡಿಸಿದ್ದಾರೆ.

ಇನ್ನು ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಬಗ್ಗೆ ಮಾತನಾಡುತ್ತಾ ವಿಜಯ್ ದೇವರಕೊಂಡ ಅವರು ನಾನು ಮೈದಾನಕ್ಕೆ ಬಂದಾಗ ಜನ್ರು ವಿರಾಟ್ ಕೊಹ್ಲಿ ಅವರನ್ನ ಹುರಿದುಂಬಿಸುತ್ತಿದ್ದ ರೀತಿ ಕಂಡು ನನಗೆ ಅಚ್ಚರಿ ಆಯ್ತು. ಇದುವರೆಗೆ ನಾನ್ ಒಬ್ಬ ಸ್ಟಾರ್ ಅನ್ಕೊಂಡಿದ್ದೆ. ಆದ್ರೇ ಮೈದಾನದಲ್ಲಿ ವಿರಾಟ್ ಕೊಹ್ಲಿ ಅವರ ಕ್ರೇಜ಼್ ಕಂಡು ನಾನಲ್ಲ ನಿಜವಾದ ಹೀರೋ ವಿರಾಟ್ ಕೊಹ್ಲಿ ಅವರು ಸೂಪರ್ ಸ್ಟಾರ್ ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ ಅವರ ನೂರನೇ ಟಿಟ್ವೆಂಟಿ ಪಂದ್ಯ ನೋಡಲು ನಾನು ಬಹಳ ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಏಷ್ಯಾ ಕಪ್ ನಲ್ಲಿ ಪಾಕಿಸ್ತಾನದ ವಿರುದ್ದ ಭಾರತಕ್ಕೆ ಭರ್ಜರಿ ಜಯ ಸಿಕ್ಕಿದೆ. ಇನ್ನು ವಿಜಯ್ ದೇವರಕೊಂಡ ಅವರ ಲೈಗರ್ ಸಿನಿಮಾ ನಿರೀಕ್ಷೆ ಮಟ್ಟಕ್ಕೆ ಪ್ರೇಕ್ಷಕರಿಗೆ ಇಷ್ಟವಾಗದೇ ಇದೀಗ ಬಾಕ್ಸ್ ಆಫೀಸ್ ನಲ್ಲಿ ಲೈಗರ್ ಚಿತ್ರ ಸೋಲನ್ನ ಕಂಡಿದೆ. ಪುರಿ ಜಗನ್ನಾಥ್ ಮತ್ತು ವಿಜಯ್ ದೇವರಕೊಂಡ ಅವರ ಕಾಂಬಿನೇಶನ್ ನ ಈ ಪ್ಯಾನ್ ಇಂಡಿಯಾ ಲೈಗರ್ ಸಿನಿಮಾದ ಬಗ್ಗೆ ನಿರೀಕ್ಷೆ ಇದೀಗ ಹುಸಿಯಾಗಿದೆ.