ತಮ್ಮ ಮನೆಯನ್ನು ಖ್ಯಾತ ಗಾಯಕನ ತಂದೆಗೆ ಮಾರಿದ ನಟ ಅಕ್ಷಯ್ ಕುಮಾರ್ ಅವರು

ಇದ್ದಿಕಿದ್ದಂಗೆ ಬಾಲಿವುಡ್ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಅವರು ತಮ್ಮ ಐಷಾರಾಮಿ ಮನೆಯೊಂದನ್ನ ಮಾರಾಟ ಮಾಡಿ ಇದೀಗ ಬಿಟೌನ್ ನಲ್ಲಿ ಸುದ್ದಿಯಾಗಿದ್ದಾರೆ. ಹೌದು ಮನೆ ಕೊಳ್ಳೋದು ಮತ್ತು ಮಾರಾಟ ಮಾಡೋದು ಇತ್ತೀಚೆಗೆ ಬಾಲಿವುಡ್ ನಲ್ಲಿ ಅನೇಕ ನಟ ನಟಿಯರು ಮಾಡ್ತಿರೋ ಸಾಮಾನ್ಯ ಕೆಲ್ಸವಾಗ್ಬಿಟ್ಟಿದೆ. ಇತ್ತೀಚೆಗೆ ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಅವರು ಮುಂಬೈನ ಪ್ರತಿಷ್ಟಿತ ಏರಿಯಾದಲ್ಲಿ ಮನೆಯೊಂದನ್ನ ಖರೀದಿ ಮಾಡಿ ಸುದ್ದಿ ಆಗಿದ್ರು. ಇದೀಗ ಬಾಲಿವುಡ್ ಆಕ್ಷನ್ ಕಿಂಗ್ ಅಂತಾನೇ ಕರೆಸಿಕೊಳ್ಳೋ ನಟ ಅಕ್ಷಯ್ ಕುಮಾರ್ ಅವರು ತಮ್ಮ ಐಷಾರಾಮಿ ಮನೆಯೊಂದನ್ನ ಮಾರಾಟ ಮಾಡಿ ಸುದ್ದಿಯಾಗಿದ್ದಾರೆ.

ಹೌದು ನಟ ಅಕ್ಷಯ್ ಕುಮಾರ್ ಅವರು ಇಂದು ಬಾಲಿವುಡ್ ನ ಸೂಪರ್ ಸ್ಟಾರ್ ನಟರ ಪೈಕಿ ಅವರು ಕೂಡ ಅಗ್ರ ಸ್ಥಾನದಲ್ಲಿ ಇದ್ದಾರೆ. ಕಳೆದ ತಿಂಗಳು ರಿಲೀಸ್ ಆದ ಅವರ ನಟನೆಯ ರಕ್ಷಾಬಂಧನ್ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡರು ಕೂಡ ನಿರೀಕ್ಷೆ ಮಟ್ಟಕ್ಕೆ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಲಿಲ್ಲ. ಸದ್ಯಕ್ಕೆ ಅಕ್ಷಯ್ ಕುಮಾರ್ ಅವರು ರಾಮ್ ಸೇತು ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಸೆಲ್ಫಿ, ಬಡೇ ಮಿಯ್ಯಾ ಚೋಟೆ ಮಿಯ್ಯಾ ಮತ್ತು ಗೂರ್ಕಾ ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಇನ್ನೊಂದು ಸ್ಪೆಷಲ್ ನ್ಯೂಸ್ ಏನಪ್ಪಾ ಅಂದರೆ ತಮಿಳಿನ ಸೂಪರ್ ಹಿಟ್ ಸಿನಿಮಾ ಸೂರರೈ ಪೋಟ್ರು ಸಿನಿಮಾದ ರೀಮೆಕ್ ನಲ್ಲಿಯೂ ಕೂಡ ಅಕ್ಷಯ್ ಕುಮಾರ್ ನಟಿಸಲಿದ್ದಾರೆ.

ಹೀಗೆ ಸಾಲು ಸಾಲು ಸಿನಿಮಾಗಳನ್ನ ಹೊಂದಿರೋ ಅಕ್ಷಯ್ ಕುಮಾರ್ ಮುಂಬೈನ ಅಂದೇರಿ ಟ್ರಾನ್ಸ್ ಕಾನ್ ಟ್ರ್ಯಾಂಪ್ ಟವರ್ ನಲ್ಲಿ ಇರೋ ಮನೆಯನ್ನ ಬರೋಬ್ಬರಿ ಆರು ಕೋಟಿಗೆ ಮಾರಾಟ ಮಾಡಿದ್ದಾರೆ. ಈ ಮನೆಯನ್ನ ಬಾಲಿವುಡ್ ಖ್ಯಾತ ಗಾಯಕ ಅರ್ಮಾನ್ ಮಲಿಕ್ ಅವರ ತಂದೆ ಡಬೂ ಮಲಿಕ್ ಅವರಿಗೆ ಮಾರಿದ್ದಾರೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಈ ಒಪ್ಪಂದ ಕರಾರು ನಡೆದಿದೆಯಂತೆ. ಅಕ್ಷಯ್ ಕುಮಾರ್ ಅವರು ಕೆಲವು ವರ್ಷಗಳ ಹಿಂದೆಯಷ್ಟೇ ಈ ಮನೆಯನ್ನ ನಾಲ್ಕ ಕೋಟಿಗೆ ಖರೀದಿ ಮಾಡಿದ್ದರಂತೆ. ಎರಡು ಕೋಟಿ ಲಾಭದಲ್ಲಿ ಅಕ್ಷಯ್ ಕುಮಾರ್ ಈ ಮನೆಯನ್ನ ಮಾರಾಟ ಮಾಡಿದ್ದಾರೆ. ಅಕ್ಷಯ್ ಅವರ ಬಳಿ ಈಗಾಗಲೇ ಮುಂಬೈನಲ್ಲಿ ಸಾಕಷ್ಟು ಐಷಾರಾಮಿ ಮನೆಗಳಿವೆ. ಅವುಗಳಲ್ಲಿ ಒಂದನ್ನ ಈಗ ಮಾರಿದ್ದಾರೆ.