ಸೋಶಿಯಲ್ ಮೀಡಿಯಾ ಅಲ್ಲಿ ತಮ್ಮ 18ನೇ ವಯಸ್ಸಿನ ಪೋಟೋ ಹಂಚಿಕೊಂಡ ನಟಿ ರಮ್ಯಾ ಅವರು

ಸ್ಯಾಂಡಲ್ ವುಡ್ ನಲ್ಲಿ ಎಷ್ಟೇ ಬ್ಯೂಟಿಯೊಂದಿರುವ ನಟಿಯರು ಬರಲಿ, ಹೋಗಲಿ ಆದ್ರೆ ಬ್ಯೂಟಿ ಕ್ವೀನ್ ರಮ್ಯಾ ಅವರನ್ನೇ ಸೈಡ್ ಲೈನ್ ಮಾಡುವಂತಹ ನಟಿಯರು ಮಾತ್ರ ಭವೀಷ್ಯದಲ್ಲಿ ಬರುತ್ತಾರೋ ಇಲ್ಲವೊ ಗೊತ್ತಿಲ್ಲ‌. ಆದರೆ ಇದುವರೆಗೆ ನಟಿ ರಮ್ಯಾ ಅವರನ್ನ ಕನ್ನಡದಲ್ಲಿ ಯಾರೂ ಕೂಡ ಬೀಟ್ ಮಾಡೋಕೆ ಆಗಿಲ್ಲ. ಇಂದಿಗೂ ಕೂಡ ಅವರ ಜನಪ್ರಿಯತೆಯನ್ನ ನೋಡಿದರೆ ಮುಂದೆಯೂ ಕೂಡ ರಮ್ಯಾ ಅವರ ಜನಪ್ರಿಯತೆಯನ್ನ ಸೈಡ್ ಲೈನ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಅಂತ ಹೇಳಬಹುದು. ಯಾಕಂದ್ರೆ ನಟಿ ರಮ್ಯಾ ಅವರು ಕಳೆದ ಏಳೆಂಟು ವರ್ಷಗಳಿಂದ ಸಿನಿಮಾರಂಗದಿಂದ ದೂರ ಇದ್ದಾರೆ. ಕನ್ನಡದ ಟಾಪ್ ನಟಿಯಾಗಿ ಮಿಂಚುತ್ತಿರುವ ಸಂಧರ್ಭದಲ್ಲಿಯೇ ರಾಜಕೀಯ ರಂಗಕ್ಕೆ ಎಂಟ್ರಿ ಕೊಟ್ಟು ಸಂಚಲನ ಉಂಟು ಮಾಡಿದ ನಟಿ ರಮ್ಯಾ ಇಂದಿಗೂ ಕೂಡ ಕನ್ನಡ ಸಿನಿ ಪ್ರೇಕ್ಷಕರ ಮನದಲ್ಲಿ ಉಳಿದಿಕೊಂಡಿದ್ದಾರೆ.

ಇತ್ತೀಚೆಗೆ ಒರಾಮ್ಯಾಕ್ಸ್ ಸಂಸ್ಥೆ ಮಾಡಿದ ಸಮೀಕ್ಷೆಯಲ್ಲಿ ಕನ್ನಡ ಚಿತ್ರರಂಗದ ಟಾಪ್ ಲಿಸ್ಟ್ ನಟಿಯರ ಪೈಕಿ ರಮ್ಯಾ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ದಶಕಗಳಿಂದ ಸಿನಿಮಾರಂಗದಲ್ಲಿ ಹೆಚ್ಚು ಸಕ್ರೀಯರಾಗದ ರಮ್ಯಾ ಇಂದಿಗೂ ಕೂಡ ಟಾಪ್ ಲಿಸ್ಟ್ ನಟಿಯರ ಸ್ಥಾನ ಗಿಟ್ಟಿಸಿಕೊಂಡಿರುವುದು ನಿಜಕ್ಕೂ ಕೂಡ ವಿಶೇಷವಾದ ಸಂಗತಿ. ಕೂಡ್ಲು ರಾಮಕೃಷ್ಣ ಅವರ ನಿರ್ದೆಶನದಲ್ಲಿ ಮೂಡಿಬಂದ ದಿಗಂತ್ ಅವರ ನಟನೆಯ ನಾಗರಹಾವು ಚಿತ್ರದಲ್ಲಿ ನಟಿಸಿದ್ದೇ ರಮ್ಯಾ ಅವರ ಕೊನೆಯ ಸಿನಿಮಾವಾಗಿತ್ತು. ಈ ಚಿತ್ರದ ನಂತರ ರಮ್ಯಾ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸಿಲಿಲ್ಲ. ಸದ್ಯಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟಿವ್ ಆಗಿರೋ ರಮ್ಯ ಅವರು ಸಿನಿಮಾಗಳಲ್ಲಿ ಮತ್ತೆ ನಟಿಸುವ ಉತ್ಸಾಹದಲ್ಲಿ ಇದ್ದಂತೆ ಕಾಣುತ್ತಿದ್ದಾರೆ‌.

ಅದಕ್ಕೆ ಪೂರಕವಾಗಿ ರಮ್ಯ ಅವರು ಕನ್ನಡದ ಬಹುತೇಕ ಎಲ್ಲಾ ಸಿನಿಮಾಗಳ ರಿಲೀಸ್ ಪೋಸ್ಟರ್, ಸಕ್ಸಸ್ ಪೋಸ್ಟರ್ ಸೇರಿದಂತೆ ಕನ್ನಡದ ಹೊಸ ಪ್ರತಿಭೆಗಳ ಸಿನಿಮಾಗಳನ್ನ ಪ್ರಚಾರ ಮಾಡುವ ಮೂಲಕ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚೆಗೆ ಡಾಲಿ ಧನಂಜಯ್ ಅವರ ಸಿನಿಮಾ, ರಿಷಭ್ ಶೆಟ್ಟಿ ಅವರ ಸಿನಿಮಾ ಶೂಟಿಂಗ್ ಸ್ಪಾಟ್ ಗಳಿಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದರು. ಇನ್ನು ಎಂದಿನಂತೆ ಇದೀಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ತಾವಿದ್ದಂತಹ ಫೋಟೋವೊಂದನ್ನ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ದಿವ್ಯಾ ಸ್ಪಂದನ ಎಂಬ ಹೆಸರಿನಲ್ಲಿ ರಮ್ಯಾ ಅವರು ಯೌವ್ವನದಲ್ಲಿ ಹೇಗಿದ್ದರು ಅನ್ನೋದನ್ನ ನೋಡಬಹುದಾಗಿದೆ. ರಮ್ಯಾ ಅವರ ಯೌವ್ವನದ ಈ ಫೋಟೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ವೈರಲ್ ಆಗಿದೆ. ನಾಡಿನಾದ್ಯಂತ ಅಪಾರ ಅಭಿಮಾನಿ ಬಳಗ ಹೊಂದಿರುವ ರಮ್ಯಾ ಅವರು ಮತ್ತೆ ಯಾವಾಗ ಸಿನಿಮಾ ಮಾಡಲಿದ್ದಾರೆ ಎಂದು ರಮ್ಯಾ ಅವರ ಅಸಂಖ್ಯಾತ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Leave a Reply

%d bloggers like this: