ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಖ್ಯಾತ ಕನ್ನಡ ನಟಿ, ತಮ್ಮ ನೆಚ್ಚಿನ ನಟನ ಜೊತೆಯೇ ಮೊದಲ ಚಿತ್ರ

ಸ್ಯಾಂಡಲ್ ವುಡ್ ಮಿಲ್ಕ್ ಬ್ಯೂಟಿ ಆಶಿಕಾ ರಂಗನಾಥ್ ತಮ್ಮ ನೆಚ್ಚಿನ ನಟನ ಸಿನಿಮಾದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಕಳೆದ ಆರು ವರ್ಷಗಳಿಂದ ನಟಿ ಆಶಿಕಾ ರಂಗನಾಥ್ ಅವರು ಚಂದನವನದಲ್ಲಿ ಮಿಂಚಿ ಮಿನುಗುತ್ತಿದ್ದಾರೆ. 2016ರಲ್ಲಿ ಮಹೇಶ್ ಬಾಬು ಅವರ ನಿರ್ದೇಶನದಲ್ಲಿ ಮೂಡಿ ಬಂದ ಕ್ರೇಜಿ಼ಬಾಯ್ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಹೆಜ್ಜೆ ಇಟ್ಟ ಆಶಿಕಾ ರಂಗನಾಥ್ ಅವರು ತಮ್ಮ ಚೊಚ್ಚಲ ಚಿತ್ರದಲ್ಲೇ ಕನ್ನಡ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಕ್ರೇಜಿ಼ಬಾಯ್ ಸಿನಿಮಾದ ನಟನೆಗೆ ಸೈಮಾದಲ್ಲಿ ಬೆಸ್ಟ್ ಡೆಬ್ಯೂ ಆಕ್ಟ್ರೆಸ್ ಅವಾರ್ಡ್ ಗೆ ನಾಮಿನೇಟ್ ಕೂಡ ಆಗಿದ್ರು. ನಂತರ ಶಿವಣ್ಣ ಅವರ ಮಾಸ್ ಲೀಡರ್ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡ್ರು.

ಅದಾದ ಬಳಿಕ ನಟಿ ಆಶಿಕಾ ರಂಗನಾಥ್ ಅವರಿಗೆ ತಕ್ಕ ಮಟ್ಟಿಗೆ ಹೆಸ್ರು ತಂದು ಕೊಟ್ಟ ಸಿನಿಮಾ ಅಂದ್ರೆ ಅದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಮುಗುಳು ನಗೆ ಸಿನಿಮಾದಲ್ಲಿ. ಈ ಚಿತ್ರದಲ್ಲಿ ಅವರಿಗೆ ಪುಟ್ಟ ಪಾತ್ರವಾದರು ಕೂಡ ಅದರಲ್ಲೇ ತಮ್ಮ ನಟನೆ, ಬ್ಯೂಟಿಯ ಮೂಲಕ ಪಡ್ಡೆ ಹುಡುಗರ ಗಮನ ಸೆಳೆದರು. ಆಶಿಕಾಗೆ ಬಿಗ್ ಬ್ರೇಕಿಂಗ್ ಸಿಕ್ಕಿದ್ದ ಶರಣ್ ಅವರ ರ್ಯಾಂಬೋ2 ಸಿನಿಮಾದಲ್ಲಿ. ಈ ಚಿತ್ರದಲ್ಲಿ ಚುಟು ಚುಟು ಹಾಡಿನಲ್ಲಿ ಮಸ್ತ್ ಸ್ಟೆಪ್ ಹಾಕುವ ಮೂಲಕ ಆಶಿಕಾ ಅಭಿಮಾನಿಗಳ ಪಡೆಯನ್ನ ಪಡೆದುಕೊಂಡರು. ಹಾಗೇ ರಾಜು ಕನ್ನಡ ಮೀಡಿಯಂ, ತಾಯಿಗೆ ತಕ್ಕ ಮಗ,, ಅವತಾರ್ ಪುರುಷ, ಕೋಟಿಗೊಬ್ಬ3 ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಸದ್ಯಕ್ಕೆ ಪವನ್ ಒಡೆಯರ್ ಅವರ ರೆಮೋ ಸಿನಿಮಾದಲ್ಲಿ ಆಶಿಕಾ ನಟಿಸಿದ್ದು, ಈ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ.

ಅದರ ಜೊತೆಗೆ ಮತ್ತೆ ಸಿಂಪಲ್ ಸುನಿ ಅವರ ಜೊತೆ ಗತವೈಭವ ಎಂಬ ಸಿನಿಮಾಗೂ ಕೂಡ ಸಹಿ ಮಾಡಿದ್ದಾರೆ. ಹೀಗೆ ಕನ್ನಡದಲ್ಲಿ ಬೇಡಿಕೆಯ ನಟಿಯಾಗಿರೋ ಆಶಿಕಾ ಇದೀಗ ಕಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಅದೂ ಕೂಡ ತಮ್ಮ ನೆಚ್ಚಿನ ನಟ ಸಿದ್ದಾರ್ಥ್ ಅವರ ಹೊಸ ಚಿತ್ರದಲ್ಲಿ. ಆಶಿಕಾ ರಂಗನಾಥ್ ಅವರಿಗೆ ಸಿದ್ದಾರ್ಥ್ ಅವರು ನೆಚ್ಚಿನ ನಟರಲ್ಲಿ ಒಬ್ಬರಂತೆ. ಆಶಿಕಾ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಸಿದ್ದಾರ್ಥ್ ಅವರ ನಟನೆಯ ಬೊಮ್ಮರಿಲ್ಲು, ನುವ್ವೊಸ್ತಾನಂಟೆ ನೇನೊದ್ದಂಟಾನಾ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನ ಅದೆಷ್ಟೊ ಸಲ ನೋಡಿದ್ದೇನೆ ಅನ್ನೋದು ನನಗೆ ಗೊತ್ತಿಲ್ಲ. ಅವರ ದೊಡ್ಡ ಫ್ಯಾನ್ ನಾನು.

ಇದೀಗ ಅವರ ಜೊತೆ ತೆರೆ ಹಂಚಿಕೊಳ್ತಿರೋದು ತುಂಬ ಸಂತಸದ ವಿಷಯ ಎಂದು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡು ತಮಿಳಿನಲ್ಲಿ ಚೊಚ್ಚಲ ಬಾರಿಗೆ ನಟಿಸುತ್ತಿರುವ ಅವರ ಮೊದಲ ತಮಿಳಿನ ಚಿತ್ರದ ಮುಹೂರ್ತ ನಡೆದಿರೋ ಫೋಟೋವನ್ನ ಶೇರ್ ಮಾಡಿಕೊಂಡಿದ್ದಾರೆ. ಈ ಚಿತ್ರದ ಮುಹೂರ್ತ ಚೆನ್ನೈನಲ್ಲಿ ನಡೆದಿದ್ದು, ಆಶಿಕಾ ಅವರು ಭಾಗವಹಿಸಿದ್ದರು. ನಟ ಸಿದ್ದಾರ್ಥ್ ಮತ್ತು ಆಶಿಕಾ ರಂಗನಾಥ್ ಜೊತೆಗಿರೋ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ಈ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ಆದ್ರೇ ಅಥರ್ವ ಎಂಬ ಟೈಟಲ್ ಇಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಿನಿಮಾಗೆ ಕಾಲದಿಲ್ ಸಂದಿಪೊಮ್ ಸಿನಿಮಾ ನಿರ್ದೇಶನ ಮಾಡಿದ್ದ ಎನ್.ರಾಜಶೇಖರ್ ಅವರು ಆಕ್ಷನ್ ಕಟ್ ಹೇಳ್ತಿದ್ದಾರೆ. ರಾಟ್ಸಸನ್ ಫೇಮ್ ಗಿಬ್ರಾನ್ ಅವರು ರಾಗ ಸಂಯೋಜನೆ ಮಾಡುತ್ತಿದ್ದಾರೆ.