ತಮಿಳು ಕಿರುತೆರೆಗೆ ಹಾರಿದ ಕನ್ನಡದ ಮತ್ತೊಂದು ಧಾರಾವಾಹಿ ಹಾಗೂ ಮತ್ತೊಬ್ಬ ನಟ, ನಟಿ

ಕನ್ನಡದ ಮತ್ತೊಬ್ಬ ನಟ ಪರಭಾಷೆಗೆ ಹೆಜ್ಜೆ ಇಟ್ಟಿದ್ದಾರೆ. ಕನ್ನಡ ಸಿನಿಮಾ ಮತ್ತು ಕಿರುತೆರೆ ಕಳೆದ ಕೆಲವು ವರ್ಷಗಳಿಂದೀಚೆಗೆ ಭಾರಿ ಸುಧಾರಿಸಿಕೊಂಡಿದೆ. ಅದ್ಯಾವ ಮಟ್ಟಿಗೆ ಅಂದರೆ ಕಥೆ ಇರ್ಬೋದು, ಮೇಕಿಂಗ್ ಇರ್ಬೋದು ಎಲ್ಲವೂ ಕೂಡ ಅದ್ದೂರಿತನದಲ್ಲಿ ಕೂಡಿರುತ್ತದೆ. ಯಾವ ಪರಭಾಷೆಯ ಧಾರಾವಾಹಿ, ಸಿನಿಮಾಗೂ ಕೂಡ ಕಡಿಮೆ ಇಲ್ಲದಂತೆ ಅದ್ಭುತವಾಗಿ ನಿರ್ಮಾಣ ಆಗುತ್ತಿವೆ. ಹಾಗಾಗಿಯೇ ನಮ್ಮ ಕನ್ನಡದ ಸೀರಿಯಲ್ ಗಳು ಸಹ ಪರಭಾಷೆಗೆ ರೀಮೇಕ್ ಆಗುತ್ತಿವೆ. ಕೇವಲ ನಮ್ಮ ಸೀರಿಯಲ್ ಮಾತ್ರ ಹೊರ ಭಾಷೆಗಳಲ್ಲಿ ಸೌಂಡ್ ಮಾಡುತ್ತಿಲ್ಲ. ಅದರ ಜೊತೆಗೆ ನಮ್ಮ ಕನ್ನಡ ಕಿರುತೆರೆಯ ನಟ ನಟಿಯರು ಕೂಡ ಬೇರೆ ಭಾಷೆಗಳಲ್ಲಿ ಅವಕಾಶ ಗಿಟ್ಟಿಸಿಕೊಂಡು ಮಿಂಚುತ್ತಿದ್ದಾರೆ. ಅದ್ರಂತೆ ಇದೀಗ ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರೋ ಮಿಥುನ ರಾಶಿ ಎಂಬ ಧಾರಾವಾಹಿ ಕೂಡ ತಮಿಳು ಭಾಷೆಗೆ ರೀಮೇಕ್ ಆಗುತ್ತಿದೆ.

ಈಗಾಗಲೇ ತಮಿಳು ಭಾಷೆಯ ಮಿಥುನ ರಾಶಿ ಸೀರಿಯಲ್ ಪ್ರೋಮೋ ರಿಲೀಸ್ ಆಗಿದ್ದು, ಅಲ್ಲಿನ ವೀಕ್ಷಕರು ಕೂಡ ಈ ಧಾರಾವಾಹಿ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದಾರೆ. ಕನ್ನಡದಲ್ಲಿ ನಟಿಸಿದ್ದ ನಟ ಪೃಥ್ವಿರಾಜ್ ಅವರೇ ಈ ತಮಿಳಿನ ಮಿಥುನ ರಾಶಿ ಧಾರಾವಾಹಿಯಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ನಟ ಪೃಥ್ವಿ ರಾಜ್ ಅವರು ದೊರೆಸಾನಿ ಸೀರಿಯಲ್ ಮೂಲಕ ತುಂಬಾನೇ ಮೆಚ್ಚುಗೆ ಪಡೆದಿದ್ದರು. ಇದೀಗ ನಮ್ಮ ಕನ್ನಡದ ನಟ ತಮಿಳು ಭಾಷೆಯ ಧಾರಾವಾಹಿಗೆ ನಾಯಕ ನಟನಾಗಿ ಆಯ್ಕೆ ಆಗಿರೋದು ಕನ್ನಡಿಗರಿಗೆ ಸಂತಸದ ವಿಚಾರ ಅಂತ ಹೇಳ್ಬೋದು. ಇನ್ನು ಕನ್ನಡದಲ್ಲಿ ಮಿಥುನ ರಾಶಿ ಧಾರಾವಾಹಿಗೆ ಎಲ್ಲೆಡೆ ಅಪಾರ ಜನ ಮೆಚ್ಚುಗೆ ಸಿಕ್ಕಿತ್ತು. ಆದರೆ ತಮಿಳಿನಲ್ಲಿ ಯಾವ ರೀತಿಯಾಗಿ ಪ್ರತಿಕ್ರಿಯೆ ದೊರೆಯಲಿದೆ ಅನ್ನೋದನ್ನ ಕಾದು ನೋಡಬೇಕಾಗಿದೆ. ವಿಶೇಷ ಅಂದರೆ ಕನ್ನಡದಲ್ಲಿ ಮಿಥುನ ರಾಶಿ ಮಾಡಿದ್ದ ನಟಿ ವೈಷ್ಣವಿ ಅವರೇ ತಮಿಳಿನಲ್ಲೂ ನಾಯಕಿ.