ತಮಗಿಂತ 10 ವರ್ಷಗಳಿಗಿಂತ ಚಿಕ್ಕವರನ್ನು ಮದುವೆಯಾದ ಖ್ಯಾತ ನಟಿ- ನಟಿಯರು! ಆದ್ರೆ ರಾಧಿಕಾ- ಕುಮಾರಸ್ವಾಮಿ ನಡುವೆ ಅಂತರ ಮಾತ್ರ

ಮದುವೆ ಎಂಬುದು ಎರಡು ಮನಸುಗಳ ಸಂಗಮ.ಈ ಸಂಗಮಕ್ಕೆ ವಯಸ್ಸಿನ ಅಂತರದ ವಿಚಾರ ಗೌಣವಾಗುತ್ತದೆ. ವಯಸ್ಸು ಎಂಬುದು ಕೇವಲ ಸಂಖ್ಯೆಗಳಾಗಿರುತ್ತದೆ.ಸಾಮಾನ್ಯವಾಗಿ ಬಹುತೇಕ ದಂಪತಿಗಳ ವಯಸ್ಸಿನ ಅಂತರ ಕನಿಷ್ಟ ಮೂರರಿಂದ ಐದು ವರ್ಷಗಳಷ್ಟು ವ್ಯತ್ಯಾಸ ಇರುತ್ತದೆ.ಇನ್ನೂ ಕೆಲವು ದಂಪತಿಗಳ ವಯಸ್ಸಿನ ಅಂತರ ಬರೋಬ್ಬರಿ ಹತ್ತು ವರ್ಷಗಳಿಗಿಂತ ಹೆಚ್ಚು ಅಂತರ ಇರುತ್ತದೆ.ಅಂತೆಯೇ ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ನಟರ ದಂಪತಿಗಳ ನಡುವೆ ವಯಸ್ಸಿನ ಅಂತರ ತಿಳಿದರೆ ನೀವು ನಿಜಕ್ಕೂ ಕೂಡ ಆಶ್ಚರ್ಯ ಪಡುತ್ತೀರಿ.ಹೌದು ಸ್ನೇಹಿತರೆ ಕನ್ನಡ ನಾಡಿನ ಜನ ಮೆಚ್ಚಿದ ನಟ ಸಾರ್ವಭೌಮ, ಡಾ.ರಾಜ್ ಕುಮಾರ್ ಮತ್ತು ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ದಂತಪತಿಗಳ ನಡುವಿನ ವಯಸ್ಸಿನ ಅಂತರ ಹತ್ತು ವರ್ಷಗಳು.

ಅಂದರೆ ಪಾರ್ವತಮ್ಮ ಅವರಿಗಿಂತ ರಾಜ್ ಕುಮಾರ್ ಅವರು ಹತ್ತು ವರ್ಷ ಹಿರಿಯರಾಗಿದ್ದಾರೆ.ಅದರಂತೆ ಕನ್ನಡ ಚಿತ್ರರಂಗದ ಟೈಗರ್ ಎಂದೇ ಖ್ಯಾತ ನಾಮರಾದ ಬಹುಭಾಷಾ ನಟರಾಗಿ ಮಿಂಚಿದ ಟೈಗರ್ ಪ್ರಭಾಕರ್ ಅವರ ಮೂರನೇ ಪತ್ನಿ ಅಂಜು ಅವರಿಗಿಂತ ಪ್ರಭಾಕರ್ ಅವರು ಬರೋಬ್ಬರಿ ಮೂವತ್ತು ವರ್ಷ ದೊಡ್ಡವರಾಗಿದ್ದಾರೆ. ಅಂದರೆ ಇದು ಒಂದು ಪೀಳಿಗೆಯ ಅಂತರವೇ ಆಗಿದೆ.ಇನ್ನು ಸ್ಯಾಂಡಲ್ ವುಡ್ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಕೂಡ ಕೆಲವು ವರ್ಷಗಳೀಂದಿಚೆಗೆ ನಟಿ ಕೀರ್ತಿ ಅವರನ್ನ ಎರಡನೇ ಮದುವೆ ಆಗಿದ್ದಾರೆ.ಕೀರ್ತಿ ಅವರಿಗಿಂತ ವಿಜಯ್ ಬರೋಬ್ಬರಿ ಹದಿನೆಂಟು ವರ್ಷ ದೊಡ್ಡವರಿದ್ದಾರೆ.

ಅದರಂತೆ ಸ್ಯಾಂಡಲ್ ವುಡ್ ನ ಸುಪ್ರಸಿದ್ದ ನಟಿಯಾಗಿ ದಶಕಗಳ ಕಾಲ ಕನ್ನಡ ಚಿತ್ರರಂಗ ಆಳಿದಂತಹ ನಟಿ ರಾಧಿಕಾ ಕುಮಾರಸ್ವಾಮಿ ತಮ್ಮ ಪತಿ ಮಾಜಿ ಸಿ.ಎಂ.ಎಚ್.ಡಿ.ಕುಮಾರಸ್ವಾಮಿ ಅವರಿಗಿಂತ ವಯಸ್ಸಿನಲ್ಲಿ 27 ವರ್ಷ ಚಿಕ್ಕವರಿದ್ದಾರೆ.ರಿಯಲ್ ಸ್ಟಾರ್ ಉಪೇಂದ್ರ ಕೂಡ ಪ್ರಿಯಾಂಕ ಉಪೇಂದ್ರ ಅವರಿಗಿಂತ ಹತ್ತು ವರ್ಷ ದೊಡ್ಡವರಾಗಿದ್ದಾರೆ.ಕೆಲವೇ ವರ್ಷಗಳಿಂದೆಯಷ್ಟೇ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಪರಿಚಯ,ಸ್ನೇಹ ಪ್ರೀತಿಯಾಗಿ ಮದುವೆಯಾದ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ವಯಸ್ಸಿನ ಅಂತರ ಕೂಡ ಹತ್ತು ವರ್ಷವಾಗಿದೆ.ನಿವೇದಿತಾ ಗೌಡ ಅವರಿಗಿಂತ ಚಂದನ್ ಶೆಟ್ಟಿ ಹತ್ತು ವರ್ಷ ಹಿರಿಯವರಾಗಿದ್ದಾರೆ.