ತಾಯಿಯಾದ ಕೇವಲ ಐದು ವರ್ಷದ ಹೆಣ್ಣು ಮಗು ಬೆಚ್ಚಿಬಿದ್ದ ವೈದ್ಯರು

ತಾಯಿಯಾದ ಕೇವಲ ಐದು ವರ್ಷದ ಹೆಣ್ಣು ಮಗು ಬೆಚ್ಚಿಬಿದ್ದ ವೈದ್ಯರು…! ಜಗತ್ತಿನಲ್ಲಿ ವಿಚಿತ್ರ,ಕುತೂಹಲಕಾರಿ,ಅಚ್ಚರಿಯ ಸಂಗತಿ ಸನ್ನಿವೇಶಗಳು ನಡೆಯುತ್ತಿರುತ್ತವೆ.ಕೆಲವು ನಂಬಲು ಅಸಾಧ್ಯವಾದವುಗಳಾದರೆ,ಕೆಲವು ಪ್ರಕೃತಿಗೂ ನಿಲುಕದ್ದಂತಹ ಘಟನೆಗಳು ನಡೆಯುತ್ತವೆ.ಅಂತೆಯೇ ಕೇವಲ ಐದು ವರ್ಷದ ಹೆಣ್ಣು ಮಗು ನಾಲ್ಕೇ ವರ್ಷಕ್ಕೆ ಋತುಮತಿ ಆಗಿ,ಐದನೇ ವರ್ಷಕ್ಕೆ ಗರ್ಭಪತಿ ಆಗಿದೆ ಅಂದರೆ ಇದು ನಿಜಕ್ಕೂ ನಂಬಲು ಅಸಾಧ್ಯವಾದ ವಿಚಾರ ಆದರೂ ಕೂಡ ಸತ್ಯವಾಗಿ ನಡೆದಿರುವ ಘಟನೆಯಾಗಿದೆ.ಹೆಣ್ಣು ಬಾಲ್ಯ,ಯೌವ್ವನ,ದಾಂಪತ್ಯ,ವೃದ್ದಾಪ್ಯ ಹೀಗೆ ಕ್ರಮವಾಗಿ ಪ್ರಕೃತಿ ನಿಯಮದಂತೆ ಯೌವ್ವನದಲ್ಲಿ ಮದುವೆಯಾಗಿ ಸಾಂಸಾರಿಕ ಜೀವನ ಆರಂಭಿಸಿ ಮತ್ತೊಂದು ಜೀವಕ್ಕೆ ಜೀವ ನೀಡುತ್ತಾಳೆ.ಇದು ಸಹಜವಾಗಿ ಹೆಣ್ಣು ಪ್ರಕೃತಿ ನಿಯಮದಂತೆ ಒಳಪಡುವಂತಹ ಕ್ರಮವಾಗಿರುತ್ತದೆ.ಆದರೆ ಪೆರವು ಎಂಬ ದೇಶದಲ್ಲಿ ಐದು ವರ್ಷದ ಹೆಣ್ಣು ಹುಡುಗಿ ಗರ್ಭ ಧರಿಸಿ ವೈದ್ಯರನ್ನೇ ಚಕಿತಗೊಳ್ಳುವಂತೆ ಮಾಡಿದೆ.ಈ ವಿಚಿತ್ರ ಘಟನೆ ನಡೆದಿರುವುದು ಪೆರವು ಎಂಬ ದೇಶದಲ್ಲಿ.1939 ರ ಇಸವಿಯಲ್ಲಿ ನಡೆದಂತಹ ಈ ವಿಚಿತ್ರ ಘಟನೆ ನಡೆದಿದ್ದು,ಅಂದಿನ ದಿನಮಾನಗಳಲ್ಲಿ ಇಡೀ ಜಗತ್ತೇ ಅಚ್ಚರಿಯಿಂದ ಕಂಡಿದೆ.

ದೇಶ ವಿದೇಶಗಳ ಎಲ್ಲಾ ಪತ್ರಿಕೆಗಳಲ್ಲಿ ಈ ಐದು ವರ್ಷದ ಹೆಣ್ಣುಮಗುವೇ ಮಗುವೊಂದಕ್ಕೆ ತಾಯಿ ಅಗಿರುವ ಅಚ್ಚರಿಗೊಳಿಸುವ ವಿಚಾರ ಭಾರಿ ಸುದ್ದಿಯಾಗಿತ್ತು.ಐದನೇ ವಯಸ್ಸಿಗೇ ತಾಯಿಯಾದ ಈ ಬಾಲಕಿ ಜಗತ್ತಿನ ಅತ್ಯಂತ ಕಿರಿಯ ತಾಯಿ ಎಂಬ ದಾಖಲೆಗೂ ಕೂಡ ಕಾರಣವಾದಳು.ತಾಯಿಯಾದ ಈ ಐದು ವರ್ಷದ ಹೆಣ್ಣು ಮಗುವಿನ ಹೆಸರು ಲಿನಾ ಮಿಡಿನಾ.ಈ ವಿಚಿತ್ರ ಪ್ರಕರಣಕ್ಕೆ ವೈದ್ಯಲೋಕವು ಹೆಸರಿಟ್ಟಿದ್ದು ಪ್ರಕಾಶನ್ ಪ್ರಿಬರ್ಟಿ ಎಂದು.ಈಕೆ ಜನಿಸಿದ್ದು 1934 ಪೆರವು ದೇಶದ ಟಿಕ್ರಾಪುನಗರದಲ್ಲಿ. ಇವಳ ತಂದೆ ಬೆಳ್ಳಿ ಸಾಮಾನುಗಳ ವ್ಯಾಪಾರಿಯಾಗಿದ್ದರು.ಅವನ ಹೆಸರು ಟಿಬ್ರೆಲೋ ಮೆಡಿನಾ.ತಾಯಿ ವಿಕ್ಟೋರಿಯಾ.ಈ ದಂಪತಿಗಳಿಗೆ ಒಂಭತ್ತು ಮಕ್ಕಳು.ಆ ಒಂಭತ್ತನೇ ಮಗಳೇ ಈ ಲಿನಾ. ತುಂಬಾ ಚುರುಕಾಗಿದ್ದ ಲಿನಾ ತುಂಬಾ ತುಂಟಿಯಾಗಿದ್ದಳು. ಹೀಗೆ ಲಿನಾಳಿಗೆ ಇದ್ದಕಿದ್ದಂತೆ ದಿನಗಳು ಉರುಳಿದಂತೆ ಹೊಟ್ಟೆ ಹೂದುತ್ತಾ ಬರುತ್ತದೆ.ಇದು ಯಾವುದೋ ಕಾಯಿಲೆ ಎಂದು ಅನುಮಾನ ವ್ಯಕ್ತಪಡಿಸಿದ ಲಿನಾ ಳ ತಾಯಿ ವಿಕ್ಟೋರಿಯಾ ವೈದ್ಯರ ಬಳಿ ಪರೀಕ್ಷೆ ಮಾಡಿಸುತ್ತಾರೆ.ಆಗ ಲಿನಾ ಗರ್ಭಾವತಿ ಆಗಿರುವುದು ತಿಳಿದು ಬರುತ್ತದೆ.ಆಗ ತಾಯಿ ವಿಕ್ಟೋರಿಯಾ ನಿಜಕ್ಕೂ ಗಾಬರಿಯಾಗುತ್ತಾಳೆ.

ಈ ಐದು ವರ್ಷದ ಲಿನಾಳಿಗೆ ಹೇಗೆ ಗರ್ಭ ಸಾಧ್ಯ.ಇದಕ್ಕೆ ಕಾರಣ ಯಾರು ಎಂಬೆಲ್ಲಾ ಪ್ರಶ್ನೆ ಕಾಡುತ್ತದೆ.ಆ ಸಂಧರ್ಭದದಲ್ಲಿ ಲಿನಾಳ ತಂದೆಯೇ ಇದಕ್ಕೆ ಕಾರಣ ಎಂದು ಆತನನ್ನ ಪೊಲೀಸರು ಅರೆಸ್ಟ್ ಮಾಡುತ್ತಾರೆ.ಬಳಿಕ ಡಿಎನ್.ಎ.ಟೆಸ್ಟ್ ವರದಿ ಬಂದ ನಂತರ ಇದಕ್ಕೆ ಕಾರಣ ಲಿನಾಳ ತಂದೆ ಅಲ್ಲ ಎಂದು ತಿಳಿದು ಆತನನ್ನ ಆರೋಪದಿಂದ ಮುಕ್ತಗೊಳಿಸಲಾಗುತ್ತದೆ.ಕೊನೆಗೆ ಲಿನಾ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ.ಆದರೆ ಲಿನಾಳ ಗರ್ಭಕ್ಕೆ ಕಾರಣ ಯಾರು ಎಂಬುದು ಮಾತ್ರ ಗುಟ್ಟಾಗಿಯೇ ಉಳಿಯುತ್ತದೆ.ಇನ್ನು ತನ್ನ ಐದನೇ ವಯಸ್ಸಿನಲ್ಲಿಯೇ ತಾಯಿಯಾದ ಲಿನಾ ತನ್ನ ಹೆಣ್ಣು ಮಗುವಿಗೆ ತಾನು ಅಕ್ಕನಂತೆ ಕಾಣುತ್ತಿರುತ್ತಾಳೆ.ಆ ಮಗುವು ಕೂಡ ಲಿನಾಳನ್ನ ತನ್ನ ಅಕ್ಕಳೆಂದೇ ತಿಳಿದಿರುತ್ತದೆ.ಹತ್ತು ವರ್ಷದ ಬಳಿಕ ಲಿನಾ ತನ್ನ ತಾಯಿ ಎಂಬುದು ತಿಳಿಯುತ್ತದೆ.ಇದಾದ ಬಳಿಕ ಲಿನಾಳಿಗೆ ಮದುವೆ ಮಾಡಲಾಗುತ್ತದೆ.ಆಗ ಲಿನಾಳಿಗೆ ಗಂಡು ಮಗುವೊಂದು ಜನಿಸುತ್ತದೆ.ಆ ಗಂಡು ಮಗು ಒಂದಷ್ಟು ವರ್ಷಗಳಲ್ಲೇ ಸಾವನ್ನಪ್ಪುತ್ತದೆ.ಒಟ್ಟಾರೆಯಾಗಿ ಲಿನಾಳು ತನ್ನ ಐದನೇ ವಯಸ್ಸಿಗೆ ಗರ್ಭವತಿ ಆಗಿದ್ದು ಹೇಗೆ ಎಂಬುದರ ಬಗ್ಗೆ ಇಂದಿಗೂ ಕೂಡ ಸಂಶೋಧನೆ ಅಧ್ಯಾಯನ ನಡೆಯುತ್ತಿದ್ದರು ಉತ್ತರ ಮಾತ್ರ ದೊರಕಿಲ್ಲ.