ತಾಯಿಯ ಆಸೆಯಂತೆ ದೊಡ್ಡ ಅಧಿಕಾರಿಯಾದ ಮಗ, ತಾಯಿಯಿಂದ ಸೆಲ್ಯೂಟ್: ಅದ್ಭುತ ಘಟನೆಗೆ ನೆಟ್ಟಿಗರ ಅಪಾರ ಮೆಚ್ಚುಗೆ

ಪ್ರತಿಯೊಬ್ಬ ತಂದೆ-ತಾಯಿಗಳಿಗೂ ಕೂಡ ತಮ್ಮ ಮಕ್ಕಳು ತಮಗಿಂತ ಉನ್ನತ ಮಟ್ಟಕ್ಕೆ ಬೆಳೆಯಬೇಕು.ಸಮಾಜದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಬೇಕು, ತಮಗಿಂತ ಉತ್ತಮ ಸ್ಥಾನವನ್ನು ಪಡೆಯಬೇಕು ಎಂಬ ಮಹಾದಾಸೆ ಕನಸುಗಳನ್ನು ಹೊತ್ತಿರುತ್ತಾರೆ.ತಂದೆ ತಾಯಿ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿರುತ್ತಾರೆ. ತಾವು ಪಟ್ಟಂತಹ ಕಷ್ಟ ತಮ್ಮ ಮಕ್ಕಳು ಪಡಬಾರದು ಎಂಬುದೇ ಪ್ರತಿಯೊಬ್ಬ ಪೋಷಕರ ಕನಸಾಗಿರುತ್ತದೆ.ಹೀಗೆ ತಮ್ಮ ತ್ಯಾಗ ಪರಿಶ್ರಮಕ್ಕೆ ತಕ್ಕಂತೆ ಒಂದು ದಿನ ತಮ್ಮ ಮಗಳು ಅಥವಾ ಮಗ ತಮ್ಮ ಕಣ್ಮುಂದೆಯೇ ಉನ್ನತ ಸ್ಥಾನವನ್ನು ಏರಿ ತಮ್ಮೆದುರಿಗೆ ಬಂದು ನಿಂತಾಗ ಅದರಿಂದಾಗುವ ಆನಂದ ಖುಷಿ ಅಷ್ಟಿಷ್ಟಲ್ಲ.ಇಂತಹದ್ದೇ ಆದ ಒಂದು ಅವಿಸ್ಮರಣೀಯ ಘಟನೆ ಗುಜರಾತಿನಲ್ಲಿ ನಡೆದಿದೆ.ಹೌದು ಅಮ್ಮ ಪೊಲೀಸ್ ಇಲಾಖೆಯಲ್ಲಿ ಎಎಸ್ ಐ ಆದರೆ ಮಗ ಅದೇ ಪೊಲೀಸ್ ಇಲಾಖೆಯಲ್ಲಿ ಡಿವೈಎಸ್ ಪಿ ಆಗಿದ್ದಾರೆ.

ಕಳೆದ ತಿಂಗಳು ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗುಜರಾತಿನ ಜುನಾಗಡ್ ನಲ್ಲಿ ಆಯೋಜನೆಯಾಗಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯಲ್ಲಿ ಉನ್ನತ ಅಧಿಕಾರಿಯಾಗಿದ್ದ ವಿಶಾಲ್ ರಬಾರಿ ತಮ್ಮ ತಾಯಿ ಎಎಸ್ ಐ ಮದುಬೇನ್ ರಬಾರಿ ಅವರಿಂದ ಸೆಲ್ಯೂಟ್ ಹೊಡೆಸಿಕೊಂಡಿದ್ದಾರೆ.ಡಿವೈಎಸ್ ಹುದ್ದೆ ಏರಿ ತನ್ನ ಮೇಲಾಧಿಕಾರಿಯಾಗಿರುವ ಮಗನಿಗೆ ಎಎಸ್ ಐ ಆಗಿರುವ ತಾಯಿ ಸೆಲ್ಯೂಟ್ ಮಾಡುತ್ತಿರುವ ದೃಶ್ಯವನ್ನು ಹಿರಿಯ ಅಧಿಕಾರಿಗಳು ಫೋಟೋವನ್ನು ತೆಗೆದಿದ್ದಾರೆ. ಈ ಫೋಟೋವನ್ನು ಗುಜರಾತಿನ ಲೋಕಸೇವಾ ಆಯೋಗದ ಅಧ್ಯಕ್ಷರಾಗಿರುವ ದಿನೇಶ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಡಿಕೊಂಡಿದ್ದಾರೆ. ಈ ಫೋಟೋಗೆ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಡಿವೈಎಸ್ಪಿ ಆಗಿ ವಿಶಾಲ್ ರಭಾರಿ ಮತ್ತು ತಾಯಿ ಮಧುಬೆನ್ ರಬಾರಿ ಅವರು ಒಂದೇ ವೇದಿಕೆಯಲ್ಲಿ ಕಾರ್ಯ ನಿರ್ವಹಿಸಿ ಎಲ್ಲರ ಗಮನ ಸೆಳೆದಿದ್ದಾರೆ.