ತಾಯಿ ಕೊಟ್ಟ 25 ರೂ ಯಿಂದ ‘ದೃಢ ಸಂಕಲ್ಪ’ ಮನದಲ್ಲಿ ಇರಿಸಿಕೊಂಡು ಇಂದು 7 ಸಾವಿರ ಕೋಟಿಯ ಉದ್ದಿಮೆ ಕಟ್ಟಿದ ವ್ಯಕ್ತಿ

ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬೇಕು ಎಂಬ ಕನಸು ಇದ್ದೇ ಇರುತ್ತದೆ.ಆದರೆ ಕೆಲವರಿಗೆ ಸಾಧನೆ ಮಾಡುವುದಕ್ಕೆ ಅನುಕೂಲ,ಅವಕಾಶ ಇರುತ್ತದೆ.ಇನ್ನೂ ಕೆಲವರಿಗೆ ಸೂಕ್ತ ಅನುಕೂಲ ಇರುವುದಿಲ್ಲ. ಇಂತಹವರು ತಾವೇ ಅವಕಾಶಗಳನ್ನು ಸೃಷ್ಟಿಸಿಕೊಂಡು ಜೀವನದಲ್ಲಿ ಆತ್ಮ ವಿಶ್ವಾಸ,ಹಠ ಛಲದೊಂದಿಗೆ ಗೆಲ್ಲಲೇಬೇಕೆಂಬ ದೃಢ ನಿರ್ಧಾರದೊಂದಿಗೆ ಉತ್ಸಾಹಕತೆಯಿಂದ‌ ಜೀವನದಲ್ಲಿ ಉತ್ತುಂಗ ಮಟ್ಟಕ್ಕೆ ತಲುಪುತ್ತಾರೆ.ಅಂತಹ ವ್ಯಕ್ತಿಗಳಲ್ಲಿ ಒಬೆರಾಯ್ ಗ್ರೂಪ್ ನ ಸ್ಥಾಪಕ ಮತ್ತು ಚೇರ್ಮನ್ ಆದಂತಹ ರಾಯ್ ಬಹದ್ದೂರ್ ಮೋಹನ್ ಸಿಂಗ್ ಒಬೆರಾಯ್ ಕೂಡ ಒಬ್ಬರಾಗಿದ್ದಾರೆ.ಅವರ ಜೀವನ ಕಥೆ ನಮಗೆ ಆದರ್ಶ ಸ್ಪೂರ್ತಿ ಯಾಗಿದೆ. ಮೋಹನ್ ಸಿಂಗ್ ಒಬೆರಾಯ್ ರವರು ಪಾಕಿಸ್ತಾನದ ಜೇಲಂ ಜಿಲ್ಲೆಯ ಬನವು ಎಂಬ ಹಳ್ಳಿಯಲ್ಲಿ ಆಗಸ್ಟ್15,1898 ರಂದು ಜನಿಸಿದರು.

ಒಬೆರಾಯ್ ಅವರು ಆರು ತಿಂಗಳ ಮಗುವಿದ್ದಾಗಲೇ ತನ್ನ ತಂದೆಯನ್ನು ಕಳೆದುಕೊಂಡರು. ಆದ್ದರಿಂದ ಇವರ ತಾಯಿಯೇ ಇಡೀ ಕುಟುಂಬದ ಜವಾಬ್ದಾರಿಯನ್ನು ಹೊರಬೇಕಾಗುತ್ತದ್ದೆ. ಒಬೆರಾಯ್ ತನ್ನ ಪ್ರಾಥಮಿಕ ಶಿಕ್ಷಣವನ್ನ ತಮ್ಮ ಹುಟ್ಟೂರಿನಲ್ಲಿಯೇ ಪಡೆದು ತದ ನಂತರ ಉನ್ನತ ವ್ಯಾಸಂಗಕ್ಕಾಗಿ ಪಾಕಿಸ್ತಾನದ ರಾವಲ್ಪಿಂಡಿ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮುಗಿಸುತ್ತಾರೆ. ತದನಂತರ ಒಂದಷ್ಟು ಆತ್ಮೀಯರು ಕೊಟ್ಟ ಮಾರ್ಗದರ್ಶನದಂತೆ ಬೆರಳಚ್ಚು ಕೋರ್ಸ್ ಅಧ್ಯಯನ ಮಾಡಲು ಕೋರ್ಸ್ ಸೇರಿಕೊಳ್ಳುತ್ತಾರೆ.ಆದರೆ ಕಾರಣಾಂತರಗಳಿಂದ ಮನೆ ಪರಿಸ್ಥಿತಿಯನ್ನು ಸ್ವತಃ ಅರಿತಂತಹ ಒಬೆರಾಯ್ ತನ್ನ ಬೆರಳಚ್ಚು ಕೋರ್ಸನ್ನು ಅರ್ಧಕ್ಕೆ ಮೊಟಕುಗೊಳಿಸಿ ತಮ್ಮ ಊರಿಗೆ ಮರಳುತ್ತಾರೆ.ಮನೆಗೆ ಬಂದ ಒಬೆರಾಯ್ ಅವರಿಗೆ ಚಿಕ್ಕಪ್ಪ ಒಂದು ಚಪ್ಪಲಿ ತಯಾರಿಸುವಂತಹ ಫ್ಯಾಕ್ಟರಿ ಯಲ್ಲಿ ಕೆಲಸ ಕೊಡಿಸುತ್ತಾರೆ. ಒಬೆರಾಯ್ ರವರಿಗೆ ಈ ಕೆಲಸ ಇಷ್ಟವಿಲ್ಲದಿದ್ದರೂ ಕೂಡ ಮನೆಯ ಕಷ್ಟದ ಪರಿಸ್ಥಿತಿಯನ್ನು ಅರಿತು ಒಲ್ಲದ ಕೆಲಸವನ್ನು ಮಾಡುತ್ತಾರೆ.

ಆದರೆ ಈ ಫ್ಯಾಕ್ಟರಿ ದುರಾದೃಷ್ಟವಶಾತ್ ಲಾಕ್ ಔಟ್ ಆಗುತ್ತದೆ.ಇದೀಗ ಮತ್ತೆ ಒಬೆರಾಯ್ ರವರಿಗೆ ನಿರುದ್ಯೋಗದ‌ ಸಮಸ್ಯೆ ಎದುರಾಗುತ್ತದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಸಂಬಂಧಿಕರ ಹುಡುಗಿಯೊಂದನ್ನು ಮದುವೆ ಯಾಗಲೇಬೇಕಾದಂತಹ ಅನಿವಾರ್ಯ ಸೃಷ್ಟಿಯಾಗುತ್ತದೆ.ಇನ್ನೊಂದೆಡೆ ಇಡೀ ಜಗತ್ತಿಗೆ ಪ್ಲೇಗ್ ರೋಗ ಹರಡಲು ಆರಂಭವಾಗಿರುತ್ತದೆ.ಮದುವೆ ಆದ ಮೇಲೆ ಹೆಂಡತಿಯ ಮನೆಯಲ್ಲಿದ್ದ ಓಬೆರಾಯ್ ಅವರಿಗೆ ಆತಂಕವಾಗಿ ತನ್ನ ತಾಯಿಯನ್ನು ನೋಡಲು ಹುಟ್ಟೂರಿಗೆ ಹೋಗಿರುತ್ತಾರೆ.ಆಗ ಅವರ ತಾಯಿ ಬಲವಂತವಾಗಿ ನೀನು ಇಲ್ಲಿ ಇರುವುದು ಸೂಕ್ತವಲ್ಲ, ದಯವಿಟ್ಟು ನಿನ್ನ ಹೆಂಡತಿಯ ಮನೆಯಲ್ಲಿಯೆ ಇರು ಎಂದು ಸಲಹೆ ನೀಡುಮಿ 25 ರೂ ಗಳನ್ನ ನೀಡಿ ಕಳುಹಿಸುತ್ತಾರೆ.

ತಾಯಿಯ ಮನವಿಗೆ ಮಣಿದು ತನ್ನ ಪತ್ನಿಯ ತವರೂರಿಗೆ ಮರಳಿದ ಓಬೆರಾಯ್ ಉದ್ಯೋಗ ಹರಸಿ ಶಿಮ್ಲಾ ಗೆ ಬರುತ್ತಾರೆ.ಒಬೆರಾಯ್ ರವರು ತನ್ನ ತಾಯಿ ಕೊಟ್ಟ ಆ 25 ರೂ ತೆಗೆದುಕೊಂಡು ಶಿಮ್ಲಾಗೆ ಬರುತ್ತಾರೆ.ಇಲ್ಲಿ ಊಟಕ್ಕೆಂದು ಸಿಸಿಎಲ್ ಹೋಟೆಲ್ ಗೆ ಹೋಗಿರುತ್ತಾರೆ.ಆ ಸಂದರ್ಭದಲ್ಲಿ ಮೋಹನ್ ಸಿಂಗ್ ರವರು ಊಟವಾದ ಬಳಿಕ ಅಲ್ಲಿಯೆ ಇದ್ದಂತಹ ಹೋಟೆಲ್ ಮ್ಯಾನೆಜರ್ ಡಾ. ಡಿ.ವಿ.ಜಾರ್ಜ್ ಅವರ ಬಳಿ ಯಾವುದಾದರೊಂದು ಕೆಲಸ ಕೊಡಿ ಎಂದು ಮನವಿ ಮಾಡಿಕೊಳ್ಳುತಾರೆ. ಇವರ ಕಷ್ಟದ ಬಗ್ಗೆ ತಿಳಿದು ಮ್ಯಾನೆಜರ್ ಆದ ಡಿ.ವಿ.ಜಾರ್ಜ್ ಕ್ಲರ್ಕ್ ಉದ್ಯೋಗಕ್ಕೆ ನೇಮಿಸಿಕೊಂಡು 40.ರೂ. ಗಳ ಸಂಬಳ ನೀಡುವುದಾಗಿ ಹೇಳುತ್ತಾರೆ.ಕೆಲಸ ಮಾಡುತ್ತಾ ಓಬೆರಾಯ್ ಅಲ್ಲಿನ ಮೇಲಾಧಿಕಾರಿಗಳ ಪ್ರೀತಿ ವಿಶ್ವಾಸ ನಂಬಿಕೆಯನ್ನು ಗಳಿಸಿಗೊಳ್ಳುತ್ತಾರೆ.

ಕೆಲಸದ ಮೇಲಿದ್ದಂತಹ ಇವರ ಶ್ರದ್ಧೆ ಭಕ್ತಿಯನ್ನು ಕಂಡಂತಹ ಮೇಲಾಧಿಕಾರಿಗಳು ಇವರಿಗೆ ಸಂಬಳವನ್ನು ಹೆಚ್ಚು ಮಾಡಿ ಉಳಿದುಕೊಳ್ಳುವಂತಹ ವ್ಯವಸ್ಥೆಯನ್ನು ಕೂಡ ಮಾಡುತ್ತಾರೆ. ಆಗ ಮೋಹನ್ ಸಿಂಗ್ ಓಬೆರಾಯ್ ಅವರು ಊರಲ್ಲಿದ್ದಂತಹ ತನ್ನ ಪತ್ನಿಯನ್ನು ಕೂಡ ಶಿಮ್ಲಾ ಗೆ ಕರೆಸಿಕೊಳ್ಳುತ್ತಾರೆ. ಹೀಗೆ ದಂಪತಿಗಳು ಒಂದಷ್ಟು ತಿಂಗಳುಗಳ ಕಾಲ ಸುಂದರವಾದ ಸಂಸಾರವನ್ನು ನಡೆಸಿಕೊಂಡು ಹೊಗುತ್ತಿರುತ್ತಾರೆ.ಹೀಗೆ ಹೆಂಡತಿಯ ಕಾಲು ಗುಣ ಎಂಬಂತೆ ಓಬೆರಾಯ್ ಅವರು ಕೆಲಸ ಮಾಡುತಿದ್ದಂತಹ ಹೋಟೆಲ್ನಲ್ಲಿ ಮ್ಯಾನೆಜ್‌ಮೆಂಟ್‌ ಬದಲಾವಣೆ ಯಾಗುತ್ತದೆ.ಈ ಬದಲಾವಣೆಯಾದಗ ಮೋಹನ್ ಸಿಂಗ್ ಒಬೆರಾಯ್ ರವರ ಹುದ್ದೆ ಕೂಡ ಬದಲಾಗುತ್ತದೆ.ಅವರಿಗೆ ಟೈಪಿಂಗ್ ಜೊತೆಗೆ ಕ್ಯಾಷಿಯರ್ ಜವಾಬ್ದಾರಿಯನ್ನು ಕೂಡ ನೀಡಲಾಗುತ್ತದೆ‌.

ಹೀಗೆ ದಿನಗಳು ಸಾಗುತ್ತಾ ಹೋಟೆಲ್ ಮಾಲೀಕರು ಒಮ್ಮೆ ಮೋಹನ್ ಸಿಂಗ್ ಓಬೆರಾಯ್ ರವರನ್ನು ಕರೆದು ಈ ಹೋಟೆಲ್ ಅನ್ನು 25,000 ರೂ.ಗಳಿಗೆ ನಿನಗೆ ನೀಡುತ್ತೇನೆ ಎಂದು ತಿಳಿಸುತ್ತಾರೆ. ಈ ಅವಕಾಶವನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಮೋಹನ್ ಸಿಂಗ್ ರವರು ನಿರ್ಧರಿಸಿ ತಮ್ಮ ಊರಲ್ಲಿದ್ದಂತಹ ಆಸ್ತಿ ಹಾಗೂ ತಮ್ಮ ಮಡದಿಯ ಒಡವೆಗಳನ್ನು ಗಿರವಿ ಇಟ್ಟು ಹಣ ಹೊಂದಿಸುತ್ತಾರೆ.ಓಬೆರಾಯ್ ರವರು ಆಗಸ್ಟ್ 14 ರಂದು,1934 ರಲ್ಲಿ ಟಿಸಿಎಲ್ ಹೋಟೆಲನ್ನು ಖರೀದಿ ಮಾಡುತ್ತಾರೆ. ಅದೇ ವರ್ಷ ಮೋಹನ್ ಸಿಂಗ್ ಓಬೆರಾಯ್ ರವರು ಓಬೆರಾಯ್ ಗ್ರೂಪ್ ಆಫ್ ಸಂಸ್ಥೆಯನ್ನ ಪ್ರಾರಂಭ ಮಾಡುತ್ತಾರೆ.

ಇದರಲ್ಲಿ ಎಲ್ಲಾ ರೀತಿಯ ಮೂವತ್ನಾಲ್ಕು ಅನುಕೂಲವುಳ್ಳ ಐಷರಾಮಿ ಹೋಟೆಲ್ ಗಳು ಒಳಗೊಂಡಿರುತ್ತವೆ.ಹೀಗೆ ಬಡತನದ ಬೇಗೆಯಲ್ಲಿ ಬೆಂದು ಆಗರ್ಭ ಶ್ರೀಮಂತ ರಾಗಿ ಅರಳಿದ ಪರಿ ಅಂತೂ ನಿಜಕ್ಕೂ ಕೂಡ ಸಾಹಸವೆ ಸರಿ.ಇಂದು ಮೋಹನ್ ಸಿಂಗ್ ಓಬೆರಾಯ್ ರವರು ಸುಮಾರು ಆರು ದೇಶಗಳಲ್ಲಿ ತಮ್ಮ ಓಬೆರಾಯ್ ಗ್ರೂಪ್ ನ ಹೋಟೆಲ್ ಗಳನ್ನು ಹೊಂದಿದ್ದಾರೆ.ಪ್ರಸ್ತುತ ಇವರು ಬರೊಬ್ಬರಿ 7 ಸಾವಿರ ಕೋಟಿ ಉದ್ಯಮವನ್ನು ನಡೆಸುತಿದ್ದಾರೆ. ತನ್ನ ತಾಯಿ ಕೊಟ್ಟಂತಹ ಕೇವಲ 25 ರೂಪಾಯಿ ಇಂದ ದುಡಿಮೆ ಆರಂಭಿಸಿದ ಮೋಹನ್ ಸಿಂಗ್ ಓಬೆರಾಯ್ ರವರು ಇಂದು ಸಾವಿರಾರು ಮಂದಿಗೆ ಉದ್ಯೋಗದಾತರಾಗಿ ಬರೋಬ್ಬರಿ 7 ಸಾವಿರ ಕೋಟಿ ಒಡೆಯನಾಗಿರುವಿದು ನಿಜಕ್ಕೂ ಕೂಡ ನಮ್ಮ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.

Leave a Reply

%d bloggers like this: