ತಾವು ಮೂರನೇ ಮಗುವಿಗೆ ತಾಯಿಯಾಗುತ್ತಿದ್ದಾರಾ ಎಂಬುದಕ್ಕೆ ಸ್ಪಷ್ಟನೆ ಕೊಟ್ಟ ಕರೀನಾ ಕಪೂರ್ ಅವರು

ನನ್ನ ಗಂಡ ದೇಶದ ಜನಸಂಖ್ಯೆ ಹೆಚ್ಚಿಸಲು ತುಂಬ ಶ್ರಮ ಪಟ್ಟಿದ್ದಾರೆ ಎಂದ ಬಾಲಿವುಡ್ ಖ್ಯಾತ ನಟಿ. ಬಾಲಿವುಡ್ ಸ್ಟಾರ್ ನಟಿಯೊಬ್ಬರು ಈ ರೀತಿಯ ಹೇಳಿಕೆಯೊಂದನ್ನ ನೀಡಿದ್ದಾರೆ. ಈ ಒಂದು ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಆದರೆ ಈ ನಟಿ ಅಸಲಿಗೆ ಯಾವ ಸಂಧರ್ಭದಲ್ಲಿ ಯಾವ ಕಾರಣಕ್ಕಾಗಿ ಈ ಹೇಳಿದ್ದಾರೆ ಅನ್ನೋದನ್ನ ಈ ಲೇಖನದಲ್ಲಿ ತಿಳಿಸಲಾಗಿದೆ. ಹೌದು ಬಾಲಿವುಡ್ ಸ್ಟಾರ್ ನಟಿಯರ ಪೈಕಿ ಕರೀನಾ ಕಪೂರ್ ಕೂಡ ಒಬ್ಬರು. ಬಾಲಿವುಡ್ ಅಂಗಳಲ್ಲಿ ಈ ಸ್ಟಾರ್ ನಟ ನಟಿಯರ ಸಿನಿಮಾಗಳ ಬಗ್ಗೆ ಹೆಚ್ಚು ಸುದ್ದಿ ಆಗುತ್ತವೋ, ಇಲ್ಲವೊ ಗೊತ್ತಿಲ್ಲ. ಆದ್ರೇ ಈ ಸೆಲೆಬ್ರಿಟಿಗಳ ಗಾಸಿಪ್ ಮತ್ತು ವೈಯಕ್ತಿಕ ವಿಚಾರಗಳ ಕುರಿತು ಭಾರಿ ವೈರಲ್ ಆಗುತ್ತವೆ. ಅದೇ ರೀತಿಯಾಗಿ ಇದೀಗ ಸುದ್ದಿಯಾಗಿರುವುದು ಬಾಲಿವುಡ್ ಸ್ಟಾರ್ ನಟಿ ಕರೀನಾ ಕಪೂರ್ ಅವರ ವೈಯಕ್ತಿಕ ಜೀವನದ ಕುರಿತು.

ಹೌದು ನಟಿ ಕರೀನಾ ಕಪೂರ್ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಸಕ್ರೀಯರಾಗಿದ್ದು, ತಮ್ಮ ಸಿನಿಮಾಗಳ ಬಗ್ಗೆ ಮತ್ತು ತಮ್ಮ ವೈಯಕ್ತಿಕ ಜೀವನದ ಒಂದಷ್ಟು ವಿಚಾರಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಕರೀನಾ ಕಪೂರ್ ಅವರು ಸದ್ಯಕ್ಕೆ ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಅವರ ಲಾಲ್ ಸಿಂಗ್ ಛಡ್ಡಾ ಸಿನಿಮಾದಲ್ಲಿ ನಟಿಸಿದ್ದಾರೆ. ಭಾರಿ ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರ ಇದೇ ಆಗಸ್ಟ್ ತಿಂಗಳಿನಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ. ಇದರ ನಡುವೆ ನಟಿ ಕರೀನಾ ಕಪೂರ್ ಅವರು ತಮ್ಮ ಪತಿ ಸೈಫ್ ಅಲಿಖಾನ್ ಮತ್ತು ತಮ್ಮ ಇಬ್ಬರ ಮುದ್ದು ಮಕ್ಕಳೊಟ್ಟಿಗೆ ಯುರೋಪ್ ಪ್ರವಾಸ ಕೈಗೊಂಡಿದ್ದಾರೆ. ಯುರೋಪ್ ನ ಸುಂದರ ತಾಣದಲ್ಲಿ ನಿಂತು ತಮ್ಮ ಪತಿ ಸೈಫ್ ಅಲಿ ಜೊತೆಗೂಡಿ ಒಂದಷ್ಟು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಈ ಫೋಟೋವನ್ನು ಕರೀನಾ ಕಪೂರ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ರು. ಈ ಫೋಟೋ ನೋಡಿ ಕೆಲವು ನೆಟ್ಟಿಗರು ಕರೀನಾ ಕಪೂರ್ ಅವರ ಹೊಟ್ಟೆ ಸ್ವಲ್ಪ ದಪ್ಪವಾಗಿದೆ. ಬಹುಶಃ ಕರೀನಾ ಕಪೂರ್ ಮತ್ತೆ ಗರ್ಭೀಣಿ ಆಗಿರಬೇಕು. ಹಾಗಾಗಿ ಈ ಮೂಲಕ ಮೂರನೇ ಬಾರಿಗೆ ಗರ್ಭಿಣಿ ಆಗುತ್ತಿರುವ ಮುನ್ಸೂಚನೆ ನೀಡುತ್ತಿದ್ದಾರಾ ಎಂದು ಪ್ರಶ್ನೆ ಮಾಡಿ ಕಮೆಂಟ್ ಮಾಡಿದ್ರು. ಇದಕ್ಕೆ ನಟಿ ಕರೀನಾ ಕಪೂರ್ ಅವರು ದಯವಿಟ್ಟು ಎಲ್ಲಾರು ಸುಮ್ಮನಿರಿ. ನನ್ನ ಪತಿ ಸೈಫ್ ನಮ್ಮ ದೇಶದ ಜನಸಂಖ್ಯೆ ಹೆಚ್ಚು ಮಾಡಲು ಬಹಳಷ್ಟು ಶ್ರಮ ಹಾಕಿದ್ದಾರೆ. ನನ್ನ ಹೊಟ್ಟೆ ದಪ್ಪ ಆಗಿರೋದಕ್ಕೆ ಪಾಸ್ತಾ ಮತ್ತು ವೈನ್ ಕಾರಣ ಅಷ್ಟೇ ಎಂದು ಪ್ರತಿಕ್ರಿಯಿಸಿದ್ದಾರೆ. ಇದೀಗ ಈ ಪೋಸ್ಟ್ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ.

Leave a Reply

%d bloggers like this: