ತಾವು ಚಿತ್ರಕ್ಕೆ ಹಾಗೂ ರಿಯಾಲಿಟಿ ಶೋಗೆ ಪಡೆಯೋ ಸಂಭಾವನೆಯನ್ನು ವೇದಿಕೆ ಮೇಲೆ ಬಹಿರಂಗ ಪಡಿಸಿದ ನಟ ಜಗ್ಗೇಶ್ ಅವರು

ಕನ್ನಡ ಚಿತ್ರರಂಗದ ಸುಪ್ರಸಿದ್ದ ನಟ,ನಿರ್ದೇಶಕ ಕಮ್ ನಿರ್ಮಾಪಕರಾಗಿ ಕಲಾ ಸೇವೆಯಲ್ಲಿ ತೊಡಗಿರೋ ಜಗ್ಗೇಶ್ ಅವರು ಇತ್ತೀಚೆಗೆ ತಮ್ಮ ತೋತಾಪುರಿ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಒಂದಷ್ಟು ಮನದಾಳದ ಮಾತುಗಳನ್ನ ಹಂಚಿಕೊಂಡಿದ್ದಾರೆ. ಹೌದು ನಟ ಜಗ್ಗೇಶ್ ಅವರು ನಟಸಿರುವ ವಿಜಯ್ ಪ್ರಸಾದ್ ನಿರ್ದೇಶನದ ತೋತಾಪುರಿ ಭಾಗ1 ಸಿನಿಮಾ ಇದೇ ಸೆಪ್ಟೆಂಬರ್ 30ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ತಂಡ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಅದರಂತೆ ಈ ಪ್ರಚಾರ ಕಾರ್ಯಕ್ರಮದಲ್ಲಿ ನಿರ್ದೇಶಕ ವಿಜಯ್ ಪ್ರಸಾದ್ ಸೇರಿದಂತೆ ನಟ ಜಗ್ಗೇಶ್, ಧನಂಜಯ್, ನಟಿ ಸುಮನ್ ರಂಗನಾಥ್, ಅಧಿತಿ ಪ್ರಭುದೇವ ಅವರು ಭಾಗವಹಿಸಿದ್ದರು. ಅದರಂತೆ ನಟ ಜಗ್ಗೇಶ್ ಅವರು ತಮ್ಮ ಅಭಿನಯದ ತೋತಾಪುರಿ ಸಿನಿಮಾದ ಬಗ್ಗೆ ಅಪಾರ ಮೆಚ್ಚುಗೆಯನ್ನ ವ್ಯಕ್ತಪಡಿಸಿ.

ಈ ಚಿತ್ರ ಕನ್ನಡಕ್ಕೆ ಒಂದು ಅತ್ಯುತ್ತಮವಾದ ಚಿತ್ರ ಎಂದು ಹೇಳುತ್ತಾ ತಾವು ನಡೆದು ಬಂದ ಹಾದಿಯ ಒಂದಷ್ಟು ನೆನಪುಗಳು ಮತ್ತು ತಾವು ಇಂದು ಸುಸ್ದಿತಿಯಲ್ಲಿರೋ ದಿನಗಳನ್ನ ಪತ್ರಕರ್ತರೊಂದಿಗೆ ಹಂಚಿಕೊಂಡಿದ್ದಾರೆ. ಇದರ ನಡುವೆ ನಾವು ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕಾದರೆ ಎಷ್ಟೆಲ್ಲಾ ಕಷ್ಟ ಪಟ್ವು. ನಿರ್ದೆಶಕರತ್ರ ಹೊಡಿಸ್ಕೊಂಡು, ಉಗಿಸ್ಕೊಂಡು ಭಯದಲ್ಲೇ ಕೆಲ್ಸ ಮಾಡಿ ವರ್ಷಾನುಗಟ್ಟಲೇ ಶ್ರಮ ಹಾಕಿ ಹೆಸರು ಮಾಡಿದ್ದೇವೆ. ಆದ್ರೇ ಇವತ್ತು ಸೋಶಿಯಲ್ ಮೀಡಿಯಾಗಳಲ್ಲಿ ಬಹು ಬೇಗ ಜನಪ್ರಿಯ ಆಗ್ಬಿಡ್ತಾರೆ. ಅವರಲ್ಲಿ ನೈಜ ಪ್ರತಿಭೆ ಇದ್ರೆ ಫೇಮಸ್ ಆಗ್ಲಿ. ಆದ್ರೇ ಏನೂ ಇಲ್ಲದೆ ಅನಗತ್ಯ ವಿಚಿತ್ರ ವ್ಯಕ್ತಿತ್ವಗಳ ಮೂಲಕ ದಿಢೀರ್ ಜನಪ್ರಿಯ ಆಗ್ತಿರೋದು ನೋಡಿದ್ರೆ ನನಗೆ ನಾವ್ ಎಲ್ ಹೋಗಿ ಮುಟ್ತೀವಿ. ಏನಾಗ್ತಿದೆ ಸಮಾಜ ಅಂತ ಯೋಚನೆ ಮಾಡ್ತೀನಿ. ಕೆಲವು ಸಲ ನಾನ್ ಏನ್ ಮಾತಾಡಿದ್ರೂ ಕೆಲವ್ರು ಕೊಂಕು ಆಡ್ತಾರೆ. ನಾನ್ ಈಗ ಯಾರ್ ಸವಾಸಕ್ಕೂ ಹೋಗ್ತಿಲ್ಲ. ನಾನಾಯಿತು ನನ್ ಕೆಲ್ಸ ಆಯ್ತು ಅಂತ ಇರ್ತಿದಿನಿ. ನನಗೆ ಯಾರಾದ್ರು ವಿಷಯ ಹೊರತು ಪಡಿಸಿ ಪ್ರಶ್ನೆ ಕೇಳಿದ್ರೆ ಅವ್ರಿಗೆ ನಮಸ್ಕಾರ ಮಾಡಿ ಹೊರಟ್ಹೋಗ್ತಿನಿ ಅಂತ ಹೇಳಿದ್ದಾರೆ.

ಅದರ ಜೊತೆಗೆ ನನಗೆ ಇರೋದ್ ಒಬ್ಳು ಹೆಂಡ್ತಿ. ಇಬ್ರೇ ಮಕ್ಳು. ನನಗೆ ಎರಡೆರಡ್ ಸೆಟಪ್ ಇಲ್ಲ. ನನ್ ಮಕ್ಳು ನನ್ ಹೆಸ್ರನ್ನ ಎಲ್ಲೂ ಕೂಡ ಬಳಸ್ಕೊಳಲ್ಲ. ನನ್ನದು ಆನಂದಮಯ ಜೀವನ ಭಗವಂತ ನನಗೆ ಒಳ್ಳೆ ಬದುಕು ನೀಡಿದ್ದಾನೆ. ಸಿನಿಮಾವೊಂದಕ್ಕೆ ಎರಡು ಕೋಟಿ ಸಂಬಳ ಕೊಡ್ತಾರೆ. ಟಿವಿಲಿ ಕೂಡ ಎರಡ್ಮೂರ್ ಕೋಟಿ ಸಂಬ್ಳ ಕೊಡ್ತಾರೆ. ಇದಕ್ಕಿಂತ ಇನ್ನೇನ್ ಬೇಕ್ ನನಗೆ. ನನ್ಗ್ ನನ್ ಹೆಂಡ್ತಿ ಮಕ್ಳನ್ನ ಸಾಕೋಕೆ ಇಷ್ಟು ಸಾಕು. ಹೀಗೆ ನಟ ಜಗ್ಗೇಶ್ ಅವರು ಇತ್ತೀಚೆಗೆ ತಾವು ಸಾರ್ವಜನಿಕವಾಗಿ ಹೇಗಿರ್ಬೇಕು ಅಂತ ನಿರ್ಣಯ ಮಾಡಿದ್ದೀನಿ ಅಂತ ತಿಳಿಸಿದ್ದಾರೆ. ಎಂ.ಎಲ್.ಸಿ ಆಗಿರೋ ಜಗ್ಗೇಶ್ ಸಿನಿಮಾ ಮತ್ತು ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ಕೂಡ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಇನ್ನು ಇವರ ನಟನೆಯ ತೋತಾಪುರಿ ಸಿನಿ‌ಮಾ ಇದೇ ಸೆಪ್ಟೆಂಬರ್ 30ಕ್ಕೆ ರಿಲೀಸ್ ಆಗುತ್ತಿದ್ದು, ಚಿತ್ರದಲ್ಲಿ ಧನಂಜಯ್, ದತ್ತಣ್ಣ, ಸುಮನ್ ರಂಗನಾಥ್, ಅಧಿತಿ ಪ್ರಭುದೇವ, ವೀಣಾ ಸುಂದರ್ ಸೇರಿದಂತೆ ಪ್ರಮುಖ ಕಲಾವಿದರು ನಟಿಸಿದ್ದಾರೆ.

Leave a Reply

%d bloggers like this: