ತಾವು ಬಾಡಿಗೆ ಇದ್ದ ಮನೆಯನ್ನೇ 48 ಕೋಟಿ ಕೊಟ್ಟು ಖರೀದಿಸಿದ ಖ್ಯಾತ ನಟಿ ಮಾಧುರಿ ದೀಕ್ಷಿತ್ ಅವರು

ಸಿನಿಮಾ ಸೆಲೆಬ್ರಿಟಿಗಳು ಅಂದಾಕ್ಷಣ ಕೇವಲ ಅವರ ಸಿನಿಮಾ ವಿಚಾರವಾಗಿ ಮಾತ್ರ ಸುದ್ದಿ ಆಗಲ್ಲ. ಅವರ ಐಷಾರಾಮಿ ಜೀವನ ಶೈಲಿ, ಉಡುಗೆ ತೊಡುಗೆ, ವೈಯಕ್ತಿಕ ವಿಚಾರವಾಗಿಯೂ ಕೂಡ ಸುದ್ದಿ ಆಗ್ತಾನೇ ಇರ್ತಾರೆ. ಅದರಂತೆ ಇದೀಗ ಬಿಟೌನ್ ನಲ್ಲಿ ಸಖತ್ ಸುದ್ದಿ ಆಗಿರೋದು ಅಂದರೆ ಅದು ನಟಿ ಮಾಧುರಿ ದೀಕ್ಷಿತ್. ಅರೇ ಮಾಧುರಿ ದೀಕ್ಷಿತ್ ಅವರ ಯಾವುದಾದ್ರು ಸಿನಿಮಾ ರಿಲೀಸ್ ಅಗ್ತಿದ್ಯ ಅಂತ ನಿರೀಕ್ಷೆ ಮಾಡಬೇಡಿ. 90ರ ದಶಕದಲ್ಲಿ ಪಡ್ಡೆ ಹುಡುಗರ ಹಾಟ್ ಫೇವರೇಟ್ ಆಗಿದ್ದ ನಟಿ ಮಾಧುರಿ ದೀಕ್ಷಿತ್ ಅವರು ಸುದ್ದಿ ಆಗಿರೋದು ಸಿನಿಮಾದ ಮೂಲಕ ಅಲ್ಲ‌. ಅವರು ಖರೀದಿ ಮಾಡಿರೋ ಅರಮನೆ ಅಂತಹ ಐಷಾರಾಮಿ ಬಂಗಲೆಯ ಮಾಲೀಕರಾಗುವುದರ ಮೂಲಕ. ಹೌದು ನಟಿ ಮಾಧುರಿ ದೀಕ್ಷಿತ್ ಅವರು ಕೆಲವು ತಿಂಗಳುಗಳ ಹಿಂದೆಯಷ್ಟೇ ಒಂದು ದುಬಾರಿ ಬಂಗಲೆಯನ್ನ ಬಾಡಿಗೆಗೆ ಪಡೆದಿದ್ದರು. ಇದರ ಬಾಡಿಗೆಯೇ ಬರೋಬ್ಬರಿ ಹನ್ನೆರಡು ಲಕ್ಷ ರೂಗಳದ್ದಾಗಿತ್ತು.

ಆಗ ಬಿಟೌನ್ ನಲ್ಲಿ ಬಹುತೇಕ ಮಂದಿ ಅಬ್ಬಾ ಎಂದು ಅಷ್ಟೊಂದು ಬೆಲೆಯ ಬಾಡಿಗೆ ಮನೆಯಲ್ಲಿದ್ದಾರಾ ಮಾಧುರಿ ದೀಕ್ಷಿತ್ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು. ಆದರೆ ಇದೀಗ ಅದೇ ದುಬಾರಿ ಬೆಲೆಯ ಬಂಗಲೆಯನ್ನ ಮಾಧುರಿ ದೀಕ್ಷಿತ್ ಖರೀದಿ ಮಾಡಿದ್ದಾರೆ. ಮುಂಬೈನಲ್ಲಿನ ವರ್ಲಿಯಲ್ಲಿರೋ ಈ ಬಂಗಲೆಯನ್ನ ಬರೋಬ್ಬರಿ ನಲವತ್ತೆಂಟು ಕೋಟಿಗೆ ಮಾಧುರಿ ದೀಕ್ಷಿತ್ ಖರೀದಿ ಮಾಡಿದ್ದಾರೆ. ಈ ಐಷಾರಾಮಿ ಮನೆಯ ಪ್ರತಿ ಚದರ ಅಡಿಯ ಬೆಲೆ ತೊಂಭತ್ತು ಸಾವಿರಕ್ಕೂ ಹೆಚ್ಚು ಎಂದು ತಿಳಿದು ಬಂದಿದೆ. ಇನ್ನೂ ಈ ಬಂಗಲೆಯ ವಿಶೇಷತೆಗಳನ್ನ ತಿಳಿಯೋದಾದ್ರೆ ಈ ಮನೆಯ ಬಾಲ್ಕನಿಯಲ್ಲಿ ನಿಂತು ನೋಡಿದರೆ ಸಮುದ್ರದ ಅಲೆಗಳನ್ನ ಕಣ್ಮುಂದೆ ಹಾದು ಹೋದಂತಹ ಅನುಭವವನ್ನ ಪಡೆಯಬಹುದಂತೆ. ಅಂತಹ ನೈಸರ್ಗಿಕ ಪೂರಕವಾಗಿ ಈ ಮನೆಯಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಮುಂಬೈನಲ್ಲಿ ಬಾಲಿವುಡ್ ಅನೇಕ ಸ್ಟಾರ್ ನಟ ನಟಿಯರ ದುಬಾರಿ ಬೆಲೆಯ ಐಷಾರಾಮಿ ಮನೆಗಳಿವೆ. ಆದರೆ ನಟಿ ಮಾಧುರಿ ದೀಕ್ಷಿತ್ ಅವರು ಖರೀದಿ ಮಾಡಿರುವ ಈ ಮನೆ ಅವೆಲ್ಲವುಕ್ಕಿಂತ ವಿಶೇಷವಾಗಿದೆ ಎಂದು ಹೇಳುತ್ತಾರೆ ಬಾಲಿವುಡ್ ಮಂದಿ.

Leave a Reply

%d bloggers like this: