ತಾನು ಪ್ರೀತಿಸಿದ ವ್ಯಕ್ತಿ ಸಿಗಲಿಲ್ಲ ಎಂದು ತಾನು ಮದುವೆಯೇ ಆಗಲಿಲ್ಲ ಈ ಸ್ಟಾರ್ ನಟಿ..!

ತಾನು ಪ್ರೀತಿಸಿದ ವ್ಯಕ್ತಿ ಸಿಗಲಿಲ್ಲ ಎಂದು ತಾನು ಮದುವೆಯೇ ಆಗಲಿಲ್ಲ ಈ ಸ್ಟಾರ್ ನಟಿ…! ಪ್ರತಿಯೊಬ್ಬರಿಗೂ ಪ್ರೀತಿ ಹುಟ್ಟುತ್ತದೆ.ಈ ಪ್ರೀತಿ ಪರಸ್ಪರ ಇಬ್ಬರಿಗೂ ಒಪ್ಪಿಗೆಯಾಗಿ ಜೊತೆಯಾಗುವುದು ಅವರವರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ.ಪರಸ್ಪರ ಇಬ್ಬರೂ ಪ್ರೀತಿಸಿ ಮದುವೆ ಆಗಬೇಕು ಎಂದುಕೊಂಡು ಒಂದು ದಿನ ಯಾವುದೋ ಒಂದು ರೀತಿಯ ಕ್ಷುಲ್ಲಕ ಕಾರಣ ಅಥವಾ ಇನ್ಯಾವುದೋ ಹೊಂದಾಣಿಕೆಯ ಕಾರಣಗಳಿಂದಾಗಿ ಪ್ರೇಮಿಗಳು ದೂರ ಆಗುತ್ತಾರೆ.ಇಂತಹ ಘಟನೆಗಳು ಬಹುತೇಕ ನಡೆಯುತ್ತವೆ.ಸಾಮಾನ್ಯರಂತೆ ಇದು ಸ್ಟಾರ್ ನಟ-ನಟಿಯರಿಗೂ ಕೂಡ ಹೊರತಾಗಿಲ್ಲ.ಅಂತೆಯೇ 90 ರ ದಶಕದಲ್ಲಿ ಇಡೀ ಭಾರತೀಯ ಚಿತ್ರರಂಗದಾದ್ಯಂತ ತಮ್ಮ ಸೌಂದರ್ಯದಿಂದ ಸಿನಿಪ್ರಿಯರ ಕಣ್ಮನ ಸೆಳೆದು ಮಿಂಚಿದ್ದ ನಟಿ ನಗ್ಮಾ ನಲವತ್ತಾರು ವರ್ಷಗಳಾದರು ಕೂಡ ತಾವು ಪ್ರೀತಿಸಿದ ವ್ಯಕ್ತಿ ಸಿಗದಿದ್ದಕ್ಕಾಗಿ ಮದುವೆ ಆಗದೆ ಒಬ್ಬಂಟಿಯಾಗಿ ಬದುಕು ನಡೆಸುತ್ತಿದ್ದಾರೆ.

ನಟಿ ನಗ್ಮಾ ಅವರು ಪ್ರೀತಿಸಿದ ವ್ಯಕ್ತಿ ಬೇರಾರು ಅಲ್ಲ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸೌರವ್ ಗಂಗೂಲಿ.ಬಂಗಾಳದ ಹುಲಿ ಎಂದೇ ಹೆಸರಾದ ಕ್ರಿಕೆಟಿಗ ಸೌರವ್ ಗಂಗೂಲಿ ಮತ್ತು ನಗ್ಮಾ ಅವರು ಪರಸ್ಪರ ಪ್ರೀತಿಸುತ್ತಿದ್ದರು.ಮದುವೆಯನ್ನು ಕೂಡ ಮಾಡಿಕೊಳ್ಳುವ ಯೋಜನೆಯಲ್ಲಿದ್ದರು.ಆದರೆ ನಟಿ ನಗ್ಮಾ ಅವರು ಮದುವೆಯಾದ ನಂತರವೂ ಕೂಡ ನಟಿಸುತ್ತೇನೆ ಎಂಬ ನಿರ್ಧಾರ ಮುಂದಿಟ್ಟಾಗ ಗಂಗೂಲಿ ಅವರು ಒಪ್ಪಿಗೆ ಸೂಚಿಸದ ಕಾರಣ ಇವರಿಬ್ಬರ ಪ್ರೀತಿಗೆ ವಿರಾಮ ಬಿದ್ದಿತು.ನಟಿ ನಗ್ಮಾ ಅವರು ಅಂದಿನ ದಿನಮಾನಗಳಲ್ಲಿ ಹಿಂದಿ,ತಮಿಳು ತೆಲುಗು,ಮಲೆಯಾಳಂ,ಮರಾಠಿ,ಭೋಜ್ ಪುರಿ ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕನ್ನಡದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಗೆ ಕುರುಬನ ರಾಣಿ,ಕ್ರೇಜಿ಼ ಸ್ಟಾರ್ ರವಿ ಚಂದ್ರನ್ ಅವರ ಜೋಡಿಯಾಗಿ ರವಿಮಾಮ,ವಿಷ್ಣು ವರ್ನನ್ ಅವರೊಟ್ಟಿಗೆ ಹೃದಯವಂತ ಚಿತ್ರದಲ್ಲಿ ನಟಿಸಿದ್ದಾರೆ.1990 ರಲ್ಲಿ ಸಲ್ಮಾನ್ ಖಾನ್ ಅಭಿನಯದ ಭಾಗಿ ಚಿತ್ರದ ಮೂಲಕ ನಗ್ಮಾ ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟರು.ಸದ್ಯಕ್ಕೆ ನಟಿ ನಗ್ಮಾ ಅವರು ರಾಜಕೀಯವಾಗಿ ಗುರುತಿಸಿಕೊಂಡಿದ್ದಾರೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ. ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ.