ಸ್ವಂತ ವಿಮಾನ ಖರೀದಿ ಮಾಡಿದ ಕರ್ನಾಟಕದ ಸ್ಟಾರ್ ನಟಿ, ಮಂಗಳೂರಿನ ಬೆಡಗಿ..!

ಸ್ವಂತ ವಿಮಾನ ಖರೀದಿ ಮಾಡಿದ ಸ್ಟಾರ್ ನಟಿ ಮಂಗಳೂರಿನ ಬೆಡಗಿ..! ಇತ್ತೀಚೆಗೆ ‌ಭಾರತೀಯ ಚಿತ್ರರಂಗದ ಅನೇಕ ಸ್ಟಾರ್ ನಟ-ನಟಿಯರು ಹೊಸ ದುಬಾರಿ ಐಷಾರಾಮಿ ಕಾರುಗಳನ್ನು ಕೊಳ್ಳುವ ಮೂಲಕ ಭಾರಿ ಸುದ್ದಿಯಾಗುತ್ತಿದ್ದಾರೆ. ಆದರೆ ಇದೀಗ ಕರ್ನಾಟಕ ಮೂಲದ ದಕ್ಷಿಣ ಭಾರತದ ಸುಪ್ರಸಿದ್ದ ನಟಿಯೊಬ್ಬರು ನಾನು ಕೂಡ ಯಾರಿಗೂ ಕಮ್ಮಿ ಇಲ್ಲ ಎಂದು ವಿಮಾನವನ್ನೇ ಖರೀದಿ ಮಾಡಿ ಭಾರಿ ಸುದ್ದಿಯಾಗಿದ್ದಾರೆ.ಹಾಗಾದರೆ ಯಾರು ಕರ್ನಾಟಕ ಮೂಲದ ಫೇಮಸ್ ನಟಿ ಎಂದು ತಿಳಿಯುವುದಾದರೆ ಅವರು ಬೇರಾರು ಅಲ್ಲ ಟಾಲಿವುಡ್ ನ ಬಹು ಬೇಡಿಕೆಯ ನಟಿಯಾಗಿರುವ ನಟಿ ಪೂಜಾ ಹೆಗ್ಡೆ.ಹೌದು ನಟಿ ಪೂಜಾ ಹೆಗ್ಡೆ ಹುಟ್ಟಿ ಬೆಳೆದದ್ದು ಮಂಬೈನಲ್ಲಿಯಾದರು ಸಹ ಇವರ ತಂದೆ-ತಾಯಿ ಗಳಾದ ಮಂಜುನಾಥ್ ಹೆಗ್ಡೆ ಮತ್ತು ಲತಾ ಹೆಗ್ಡೆ ಕರ್ನಾಟಕದ ಮಂಗಳೂರಿನವರು.ಪೂಜಾ

ಹೆಗ್ಡೆ ಅವರಿಗೆ ಕಾಲೇಜು ದಿನಗಳಿಂದಾನೂ ಡ್ಯಾನ್ಸೊ ಮತ್ತು ಮಾಡೆಲಿಂಗ್ ಕ್ಷೇತ್ರದ ಕಡೆ ಅಪಾರ ಒಲವಿತ್ತು. ಹಾಗಾಗಿ 2009 ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದರು.ಈ ಸ್ಪರ್ಧೆಯಲ್ಲಿ ಪೂಜಾ ಹೆಗ್ಡೆ ಮಿಸ್ ಇಂಡಿಯಾ ಟ್ಯಾಲೆಂಟೆಡ್ ಆಗಿ ವಿಜಯಶಾಲಿ ಆದರೂ ಕೂಡ ಮೊದಲ ಸುತ್ತಿನಿಂದ ಹೊರ ಬರಬೇಕಾಗುತ್ತದೆ.ಆದರೆ ಮತ್ತೆ ಮರಳಿ ಪ್ರಯತ್ನ ಎಂಬಂತೆ 2010 ರಲ್ಲಿ ಮಿಸ್ ಯೂನಿವರ್ಸ್ ನಲ್ಲಿ ಎರಡನೇ ಸ್ಥಾನ ಪಡೆದು ರನ್ನರ್ ಅಪ್ ಆಗುತ್ತಾರೆ.ಮಾಡೆಲಿಂಗ್ ಕ್ಷೇತ್ರದಲ್ಲಿ ತಕ್ಕ ಮಟ್ಟಿಗೆ ಗುರುತಿಸಿಕೊಂಡಿದ್ದ ಪೂಜಾ ಹೆಗ್ಡೆ ಅವರಿಗೆ ತಮಿಳು ನಿರ್ದೇಶಕ ಮಿಸ್ಕಿನ್ ಅವರ ಮುಗಮೂಡಿ ಚಿತ್ರದಲ್ಲಿ ನಟ ಜೀವಾ ಅವರೊಟ್ಟಿಗೆ ಮೊದಲ ಬಾರಿಗೆ ಬಣ್ಣ ಹಚ್ಚಲು ಅವಕಾಶ ದೊರೆಯುತ್ತದೆ.

2012 ರಲ್ಲಿ ತೆರೆಕಂಡ ಈ ಮುಗಮೂಡಿ ಸಿನಿಮಾ ಉತ್ತಮ ಮೆಚ್ಚುಗೆ ಪಡೆದು ನಟಿ ಪೂಜಾ ಹೆಗ್ಡೆ ಅವರಿಗೆ ತೆಲುಗಿನ ಓಕಾ ಲೈಲಾ ಕೋಸಮ್ ಎಂಬ ಚಿತ್ರದಲ್ಲಿ ಅವಕಾಶ ಸಿಗುತ್ತದೆ.ಈ ಚಿತ್ರದಲ್ಲಿ ನಟಿ ಪೂಜಾ ಹೆಗ್ಡೆ ಅವರಿಗೆ ಅಪಾರ ಪ್ರಶಂಸೆ ಸಿಗುತ್ತದೆ. ಹೀಗೆ ಒಂದರ ನಂತರ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ನಟಿ ಪೂಜಾ ಹೆಗ್ಡೆ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುತ್ತಾರೆ. ಟಾಲಿವುಡ್ ನ ಬಹುತೇಕ ಸ್ಟಾರ್ ನಟರೊಂದಿಗೆ ನಟಿಸಿರುವ ಪೂಜಾ ಹೆಗ್ಡೆ ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಷನ್ ಅವರ ಮೆಹೆಂಜೋದಾರೋ ಎಂಬ ಚಿತ್ರದಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ ಮಂಗಳೂರಿನ ಈ ಬೆಡಗಿ.ಸದ್ಯಕ್ಕೆ ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ನಟಿ ಪೂಜಾ ಹೆಗ್ಡೆ ಅವರು ವಿಮಾನವನ್ನು ಖರೀದಿ ಮಾಡಿ ಸುದ್ದಿಯಾಗಿದ್ದಾರೆ.

Leave a Reply

%d bloggers like this: