ಸ್ವಂತ ಮಗಳಿಗೆ ಲಿಪ್ ಲಾಕ್ ಮಾಡಿ ಸಂಚಲನ ಸೃಷ್ಟಿಸಿದ್ದ ಮಹೇಶ್ ಭಟ್! ಈತನ ಆಸೆ ಕೇಳಿ ಶಾಕ್ ಇಡೀ ದೇಶದ ಜನ

ತನ್ನ ಮಗಳನ್ನೇ ಮದುವೆ ಆಗಬೇಕು ಎಂದು ಹೇಳಿಕೆ ನೀಡಿದ್ದ ಬಾಲಿವುಡ್ ಖ್ಯಾತ ನಿರ್ದೇಶಕ ಸಾರ್ವಜನಿಕರಿಂದ ಒದೆ ತಿಂದ್ರೆ…! ಹೌದು ಸಿನಿಮಾ ಸೆಲೆಬ್ರಿಟಿಗಳಳು ಅಂದಮೇಲೆ ಒಂದಲ್ಲ ಒಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಈ ಸಾರ್ವಜನಿಕ ಕ್ಷೇತ್ರದಲ್ಲಿ ಇರುವ ವ್ಯಕ್ತಿಗಳಿಗೆ ಅವರದ್ದೇ ಆದ ಸಾಮಾಜಿಕ ಜವಾಬ್ದಾರಿ ಇರುತ್ತದೆ. ಅದರಲ್ಲಿಯೂ ಈ ರಾಜಕೀಯ ಕ್ಷೇತ್ರ ಮತ್ತು ಸಿನಿಮಾ ಕ್ಷೇತ್ರದಲ್ಲಿ ಇರುವವರು ಆದಷ್ಟು ಹೆಚ್ಚು ಬದ್ದತೆ ಜವಬ್ದಾರಿ ಹೊಂದಿರುತ್ತಾರೆ. ಏಕೆಂದರೆ ಲಕ್ಷಾಂತರ ಮಂದಿ ಅವರನ್ನ ಅನುಸರಿಸುತ್ತಾರೆ. ಸಿನಿಮಾ ನೋಡಿ ಪ್ರಭಾವಿತರಾಗುವ ಸಿನಿ ಪ್ರೇಕ್ಷಕರಿಗೆ ತಮ್ಮ ನೆಚ್ಚಿನ ನಟನ ಮೇಲೆ ಅಪಾರ ಅಭಿಮಾನ ಇರುತ್ತದೆ. ಅವರ ಪ್ರತಿಯೊಂದು ನಡವಳಿಕೆಯ ಬಗ್ಗೆ ಗಮನ ಹರಿಸುತ್ತಿರುತ್ತಾರೆ. ಅದರಿಂದ ಸಿನಿಮಾ ಕ್ಷೇತ್ರದ ವ್ಯಕ್ತಿಗಳು ತಾವು ಆಡುವ ಮಾತಿನ ಬಗ್ಗೆ ಬಹಳ ಜಾಗೃತಿ ವಹಿಸಬೇಕಾಗಿರುತ್ತದೆ.

ಸಾರ್ವಜನಿಕ ವೇದಿಕೆಗಳಲ್ಲಿ ಅವರು ಮಾತನಾಡುವಾಗ ಅವರು ಕೊಂಚ ಎಡವಿದರು ಕೂಡ ಅದು ತುಂಬಾ ವಿವಾದಕ್ಕೆ ಎಡೆಮಾಡಿಕೊಡುತ್ತದೆ. ಸಾಮಾನ್ಯವಾಗಿ ಸಿನಿಮಾ ಕ್ಷೇತ್ರದ ಕೆಲವು ನಟ-ನಟಿಯರು ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ಇನ್ನಿತರ ವಿವಾದಾತ್ಮಕ ಹೇಳಿಕೆ ಅಥವಾ ತಮ್ಮ ವೈಯಕ್ತಿಕ ವಿಚಾರಗಳಿಗೆ ವಿವಾದಕ್ಕೆ ಸಿಲುಕಿ ಭಾರಿ ಚರ್ಚೆಗೆ ಕಾರಣವಾಗುತ್ತಾರೆ. ಅಂತೆಯೇ ಬಾಲಿವುಡ್ ಖ್ಯಾತ ನಿರ್ದೇಶಕ ಕಮ್ ನಿರ್ಮಾಪಕ ಆದಂತಹ ಮಹೇಶ್ ಭಟ್ ಅವರು ಕೂಡ ಅನೇಕ ವಿವಾದಗಳಿಗೆ ತುತ್ತಾಗಿದ್ದಾರೆ. ಹೌದು ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ಕಮ್ ನಿರ್ಮಾಪಕ ಮಹೇಶ್ ಭಟ್ ಅವರು ತಮ್ಮ ಚಿತ್ರದ ಹೊರತಾಗಿಯೂ ಕೂಡ ಹೆಚ್ಚು ಸುದ್ದಿಯಾಗುತ್ತಲೇ ಇರುತ್ತಾರೆ.

ಮಹೇಶ್ ಭಟ್ ಅವರಿಗೆ ನಾಲ್ಕು ಜನ ಮಕ್ಕಳು. ಪೂಜಾ ಭಟ್, ರಾಹುಲ್ ಭಟ್, ನಾನಾ ಬಾಯಿ ಭಟ್ ಮತ್ತು ಸದ್ಯಕ್ಕೆ ಬಾಲಿವುಡ್ ಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ನಟಿ ಆಲಿಯಾ ಭಟ್ ಕೂಡ. ಮಗಳು ಪೂಜಾ ಭಟ್ ಅವರಿಗೆ ತಮ್ಮ ತಂದೆ ಮಹೇಶ್ ಭಟ್ ಅವರನ್ನ ಕಂಡರೆ ತುಂಬಾ ಅಚ್ಚುಮೆಚ್ಚು. ಅದರಂತೆ ಮಹೇಶ್ ಭಟ್ ಅವರಿಗೆ ಸಹ ಮಗಳು ಪೂಜಾ ಭಟ್ ಅವರನ್ನ ಕಂಡರೆ ಅಷ್ಟೇ ಪ್ರೀತಿ ಇರುತ್ತದೆ. ಅದು ಯಾವ ಮಟ್ಟಿಗೆ ಅಂದರೆ ಪೂಜಾ ಭಟ್ ತಮ್ಮ ತಂದೆ ಯಾವ ಶೂಟಿಂಗ್ ಸ್ಪಾಟ್ ನಲ್ಲಿದ್ದರು ಕೂಡ ಅವರು ಅಲ್ಲಿರುತ್ತಿದ್ದರು.

ಮಹೇಶ್ ಭಟ್ ಅವರ ಎಲ್ಲಾ ಸಂಪೂರ್ಣ ಕೆಲಸ ಕಾರ್ಯಗಳಲ್ಲಿ ಅವರು ಬೆನ್ನೆಲುಬಾಗಿ ಸಹಾಯಕಿ ಆಗಿ ಇರುತ್ತಿದ್ದರು. ಅಂತೆಯೇ ಖಾಸಗಿ ಸಂದರ್ಶನವೊಂದರಲ್ಲಿ ಮಹೇಶ್ ಭಟ್ ಅವರು ತಮ್ಮ ಮಗಳ ಬಗ್ಗೆ ಅತೀ ಆತ್ಮ ವಿಶ್ವಾಸದಿಂದ ಮಾತನಾಡುವ ಸಂಧರ್ಭದಲ್ಲಿ ನಾನು ನನ್ನ ಮಗಳು ಪೂಜಾಭಟ್ ಅವಳನ್ನೆ ಮದುವೆ ಆಗುವ ಆಸೆಯಿದೆ ಎಂದು ಹೇಳುತ್ತಾರೆ. ಇದು ಭಾರಿ ಚರ್ಚೆಗೆ ಆಸ್ಪದ ಕೊಡುತ್ತದೆ. ಅಷ್ಟೇ ಅಲ್ಲದೆ ಇದರ ಬೆನ್ನಲ್ಲೇ ಮಹೇಶ್ ಭಟ್ ಅವರು ತಮ್ಮ ಮಗಳು ಪೂಜಾ ಭಟ್ ಅವರಿಗೆ ನೇರವಾಗಿ ತುಟಿಗೆ ಮುತ್ತಿಡುವ ಮೂಲಕ ಭಾರಿ ಸುದ್ದಿಯಾಗುತ್ತಾರೆ. ಈ ಫೋಟೋವೊಂದುನಿಯತಕಾಲಿಕೆ ಯೊಂದರಲ್ಲಿ ಪ್ರಕಟ ಕೂಡ ಆಗುತ್ತದೆ.

ಅಂದಿನ ದಿನಗಳಲ್ಲಿ ಮಹೇಶ್ ಭಟ್ ಅವರಿಗೆ ಸಾರ್ವಜನಿಕರು ಸೇರಿದಂತೆ ಅನೇಕ ಸಂಸ್ಥೆಗಳು ಛೀಮಾರಿ ಹಾಕುತ್ತವೆ. ಜೊತೆಗೆ ಅವರಿಗೆ ಎಚ್ಚರಿಕೆ ಕೂಡ ನೀಡುತ್ತವೆ‌. ಇದರಿಂದ ಮಹೇಶ್ ಭಟ್ ಅವರು ವರ್ಷಗಳ ಕಾಲ ಸಾರ್ವಜನಿಕವಾಗಿ ಎಲ್ಲಿಯೂ ಕೂಡ ಕಾಣಿಸಿಕೊಳ್ಳಲು ಹೋಗುವುದಿಲ್ಲ. ಒಟ್ಟಾರೆಯಾಗಿ ಒಬ್ಬ ಸಿನಿಮಾ ಸೆಲೆಬ್ರಿಟಿ ತನ್ನ ಒಂದು ದುರ್ವರ್ತನೆ ಕೆಟ್ಟ ನಡವಳಿಕೆಯಿಂದ ಏನೆಲ್ಲಾ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಮಹೇಶ್ ಭಟ್ ಒಳ್ಳೆಯ ಉದಾಹರಣೆ ಆಗಿದ್ದಾರೆ.

Leave a Reply

%d bloggers like this: