ಸ್ವಾಭಿಮಾನ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಪುಷ್ಪ ಚಿತ್ರದ ಕಲೆಕ್ಷನ್ ಕರ್ನಾಟಕದಲ್ಲಿ ಎಷ್ಟು?..

ಸ್ವಾಭಿಮಾನ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಪುಷ್ಪ ಚಿತ್ರದ ಕಲೆಕ್ಷನ್ ಕರ್ನಾಟಕದಲ್ಲಿ ಎಷ್ಟು..! ಟಾಲಿವುಡ್ ಸ್ಟೈಲೀಶ್ ಸ್ಟಾರ್ ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಲ್ಲಿ ಮೂಡಿಬಂದಿರುವ ಪುಷ್ಪ ಸಿನಿಮಾ ಡಿಸೆಂಬರ್ 17 ರಂದು ದೇಶಾದ್ಯಂತ ಬಿಡುಗಡೆಯಾಗಿದೆ. ಪುಷ್ಪ ಚಿತ್ರ ಬಿಡುಗಡೆಗೆ ಮುನ್ನ ತನ್ನ ಟೀಸರ್, ಟ್ರೇಲರ್ ಮತ್ತು ಲಿರಿಕಲ್ ಸಾಂಗ್ಸ್ ಗಳಿಂದ ಸಾಕಷ್ಟು ಕ್ರೇಜ಼್ ಹುಟ್ಟು ಹಾಕಿತ್ತು. ಇದರಿಂದಲೇ ಪುಷ್ಪ ಚಿತ್ರ ನೋಡಲು ಅಲ್ಲು ಅರ್ಜುನ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು. ಆದರೆ ಪಂಚ ‌ಭಾಷೆಗಳಲ್ಲಿ ರಿಲೀಸ್ ಆದ ಪುಷ್ಪ ಸಿನಿಮಾ ಎಲ್ಲಾ ಭಾಷೆಯ ಅವತರಣಿಕೆಯಲ್ಲಿ ತೆರ ಕಂಡಿತ್ತು. ಆದರೆ ಕನ್ನಡದ ಅವತರಣಿಕೆಯಲ್ಲಿ ಪುಷ್ಪ ಚಿತ್ರ ಕೇವಲ ಬೆರಳೆಣೆಕೆಯಲ್ಲಿ ಮಾತ್ರ ರಾಜ್ಯದಲ್ಲಿ ಪ್ರದರ್ಶನ ಕಂಡಿತು. ಇದು ಕನ್ನಡಿಗರ ಕೆಂಗಣ್ಣಿಗೆ ಕಾರಣವಾಗಿತ್ತು.

ಪುಷ್ಪ ಸಿನಿಮಾ ಚಿತ್ರತಂಡ ಮಾಡಿದ ಈ ತಪ್ಪಿಗೆ ಕನ್ನಡಿಗರು ಪುಷ್ಪ ಸಿನಿಮಾವನ್ನು ನಾವು ನೋಡುವುದಿಲ್ಲ ಎಂದು ಅಭಿಯಾನವನ್ನು ಆರಂಭ ಮಾಡಿದ್ದರು. ಅದರಂತೆ ಪುಷ್ಪ ಸಿನಿಮಾ ಕೂಡ ನಿರೀಕ್ಷೆ ಮಟ್ಟಕ್ಕೆ ತಲುಪದೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಅವರಿಗೆ ಕರ್ನಾಟಕದಲ್ಲಿಯೂ ಕೂಡ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಅವರ ನಟನೆಯ ಎಲ್ಲಾ ಸಿನಿಮಾಗಳು ರಾಜಧಾನಿ ಬೆಂಗಳೂರಿನಲ್ಲಿ ಉತ್ತಮ ಗಳಿಕೆ ಮಾಡಿವೆ. ಅದರಂತೆ ಇದೀಗ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದ ಪುಷ್ಪ ಚಿತ್ರ ಕೂಡ ಈ ಅಸಮಾಧಾನದ ನಡುವೆಯು ಸಹ ಎಷ್ಟು ಕಲೆಕ್ಷನ್ ಮಾಡಿರಬಹುದು ಎಂಬುದು ಎಲ್ಲರ ಊಹೆ ಆಗಿದೆ.

ಮಲ್ಟಿ ಪ್ಲೆಕ್ಸ್ ಗಳಲ್ಲಿ ರಿಲೀಸ್ ಆಗುವ ಒಂದು ದಿನದ ಮುನ್ನವೇ ಎಲ್ಲಾ ಟಿಕೆಟ್ ಗಳು ಸೋಲ್ಡ್ ಔಟ್ ಆಗಿ ಭರ್ಜರಿ ಕಲೆಕ್ಷನ್ ಮಾಡಿಕೊಂಡಿತ್ತು. ಫಸ್ಟ್ ಡೇ ಫಸ್ಟ್ ಶೋ ನಲ್ಲಿ ಚಿತ್ರಮಂದಿರಗಳು ತುಂಬಿ ತುಳುಕಿ ಭರ್ಜರಿ ಕಲೆಕ್ಷನ್ ಮಾಡಿದೆ. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರು ಸಹ ಕಲೆಕ್ಷನ್ ಅಲ್ಲಿ ಮಾತ್ರ ಭಾರಿ ಗಳಿಕೆ ಮಾಡಿ ದಾಖಲೆ ಮಾಡಿದೆ. ಹೌದು ಬರೋಬ್ಬರಿ 180 ಕೋಟಿ ವೆಚ್ಚದ ಅದ್ದೂರಿತನದ ಪುಷ್ಪ ಸಿನಿಮಾ ಬಿಡುಗಡೆಯಾದ ಮೂರೇ ದಿನದಲ್ಲಿ 175 ಕೋಟಿಗೂ ಅಧಿಕ ಗಳಿಕೆ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಕರ್ನಾಟಕದಲ್ಲಿ ಮೊದಲ ದಿನವೇ ಬರೋಬ್ಬರಿ ಐದೂವರೆ ಕೋಟಿ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿದೆ. ಪುಷ್ಪ ಚಿತ್ರಕ್ಕೆ ನಿರ್ದೇಶಕ ಸುಕುಮಾರ್ ಆಕ್ಷನ್ ಕಟ್ ಹೇಳಿದ್ದು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಈ ಪುಷ್ಪ ಸಿನಿಮಾವನ್ನು 180 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಿದೆ.

Leave a Reply

%d bloggers like this: