ಸೂಪರ್ ಹಿಟ್ 777 ಚಾರ್ಲಿ ಚಿತ್ರವನ್ನು ಇದೆ ವಾರ ಮನೆಯಲ್ಲೇ ಕೂತು ವೀಕ್ಷಿಸಬಹುದು

ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಸೂಪರ್ ಹಿಟ್ ಚಿತ್ರ 777 ಚಾರ್ಲಿ ಕೊನೆಗೂ ಓಟಿಟಿ ಪ್ಲಾಟ್ ಫಾರ್ಮ್ ಬರುತ್ತಿದೆ. ಹೌದು ಕನ್ನಡದಲ್ಲಿ ಕೆಜಿಎಫ್ 2 ಚಿತ್ರದ ನಂತರ ಪ್ಯಾನ್ ಇಂಡಿಯಾ ಸಿನಿಮಾವಾಗಿ ಹೊರ ಹೊಮ್ಮಿದ ಚಿತ್ರಗಳಲ್ಲಿ ಕಿರಣ್ ರಾಜ್ ನಿರ್ದೇಶನದ 777 ಚಾರ್ಲಿ ಚಿತ್ರ ಕೂಡ ಒಂದಾಗಿದೆ. ಮನುಷ್ಯ ಮತ್ತು ಈ ನಾಯಿಯ ನಡುವಿನ ಭಾಂಧವ್ಯದ ಕುರಿತು ಭಾವನಾತ್ಮಕ ಕಥಾಹಂದರ ಹೊಂದಿರ ಈ 777 ಚಾರ್ಲಿ ಸಿನಿಮಾ ಪಂಚ ಭಾಷೆಗಳಲ್ಲಿ ದೇಶಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿ ಅಭೂತಪೂರ್ವ ಪ್ರತಿಕ್ರಿಯೆ ಪಡೆದುಕೊಂಡಿತು. ಈ 777 ಚಾರ್ಲಿ ಸಿನಿಮಾ ನೋಡಿದ ಪ್ರತಿಯೊಬ್ಬ ಸಿನಿ ಪ್ರೇಕ್ಷಕರು ಸಹ ಥಿಯೇಟರ್ ಇಂದ ಹೊರ ಬರಬೇಕಾದಾಗ ಕಣ್ಣಂಚಿನಲ್ಲಿ ನೀರು ಜಿನುಗಿತ್ತು. ಅಷ್ಟರ ಮಟ್ಟಿಗೆ 777 ಚಾರ್ಲಿ ಸಿನಿಮಾ ಸಿನಿ ಪ್ರೇಕ್ಷಕರ ನಾಡಿಮಿಡಿತ ಅರಿತು ಅವರ ಮನಸ್ಸನ್ನ ಗೆದ್ದಿತ್ತು.

ರಕ್ಷಿತ್ ಶೆಟ್ಟಿ ಅವರ ಅಭಿನಯಕ್ಕೆ ಎಷ್ಟು ಮೆಚ್ಚುಗೆ ವ್ಯಕ್ತವಾಯಿತೋ, ಅದರಂತೆ ಚಾರ್ಲಿ ಶ್ವಾನದ ನಟನೆಗೂ ಕೂಡ ಎಲ್ಲೆಡೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ರೀಲಿಸ್ ಆದ ದೇಶದೆಲ್ಲೆಡೆ ಬರೋಬ್ಬರಿ ನೂರೈವತ್ತು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ 777 ಚಾರ್ಲಿ ಸಿನಿಮಾ ಇದೇ ಜುಲೈ 29ಕ್ಕೆ ಐವತ್ತು ದಿನಗಳನ್ನು ಪೂರೈಸಿಕೊಳ್ಳಲಿದೆ. ಅಂದೇ 777 ಚಾರ್ಲಿ ಸಿನಿಮಾ ಓಟಿಟಿ ಪ್ಲಾಟ್ ಫಾರ್ಮ್ ವೂಟ್ ನಲ್ಲಿ ರಿಲೀಸ್ ಆಗಲಿದೆ ಎಂದು ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರ ಬಿದ್ದಿದೆ. ಇನ್ನು ಥಿಯೇಟರ್ ನಲ್ಲಿ 777ಚಾರ್ಲಿ ಸಿನಿಮಾವನ್ನು ನೋಡದೇ ಮಿಸ್ ಮಾಡಿಕೊಂಡವರು ನಿಮ್ಮ ಮನೆಯಲ್ಲಿಯೇ ಕೂತು ವೂಟ್ ನಲ್ಲಿ ಚಾರ್ಲಿ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಇನ್ನು ಈ ಹಿಂದೆ ನಟ ರಕ್ಷಿತ್ ಶೆಟ್ಟಿ ಅವರು ತಮ್ಮ ಪರಮ್ವಾ ಸಂಸ್ಥೆಯಡಿ ನಿರ್ಮಾಣವಾದ ಈ 777 ಚಾರ್ಲಿ ಸಿನಿಮಾ 150 ಕೋಟಿ ಕಲೆಕ್ಷನ್ ಮಾಡಿದ ಹಿನ್ನೆಲೆ ತನ್ನ ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಕೂಡ ಲಾಭಾಂಶದಲ್ಲಿ ಶೇಕಡಾ ಐದರಷ್ಟು ಪಾಲನ್ನು ನೀಡುವುದಾಗಿ ತಿಳಿಸಿದ್ದರು. ಚಾರ್ಲಿ ಸಿನಿಮಾ ಇಪ್ಪತ್ತೈದು ದಿನಗಳನ್ನು ಪೂರೈಸಿದ ಸಂಭ್ರಮಾಚರಣೆಯಲ್ಲಿಯೇ ಈ ಒಂದು ಉದಾರತೆಯನ್ನ ಮೆರೆದ ರಕ್ಷಿತ್ ಶೆಟ್ಟಿ ಅವರು ಚಾರ್ಲಿ ಶ್ವಾನದ ಹೆಸರಲ್ಲಿ ಬ್ಯಾಂಕ್ ನಲ್ಲಿ ಇಂತಿಷ್ಟು ಹಣವನ್ನ ಡೆಪಾಸಿಟ್ ಇಟ್ಟು ಅದರಿಂದ ಬರುವ ಬಡ್ಡಿಯ ಹಣವನ್ನ ಬೀದಿ ಬದಿ ನಾಯಿಗಳ ರಕ್ಷಣೆ ಮಾಡಿ ಅವುಗಳ ನಿರ್ವಹಣೆ ಮಾಡುವ ಎನ್.ಜಿ.ಓ.ಗಳಿಗೆ ನೀಡುವುದಾಗಿ ತಿಳಿಸಿದ್ದರು. ಒಟ್ಟಾರೆಯಾಗಿ ನಟ ರಕ್ಷಿತ್ ಶೆಟ್ಟಿ ಅವರು ತಮ್ಮ ಚಿತ್ರದ ಯಶಸ್ಸನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದರು. ಇದೀಗ ಓಟಿಟಿಗೆ ಚಾರ್ಲಿ ಸಿನಿಮಾ ಮಾರಾಟವಾಗಿದ್ದು, ಇದೇ ಜುಲೈ 29ರಂದು ವೂಟ್ ನಲ್ಲಿ ಪ್ರಸಾರವಾಗುತ್ತಿದೆ.

Leave a Reply

%d bloggers like this: