ಸನ್ನಿ ಲಿಯೋನ್ ಗೆ ಒಂದು ಐಟಂ ಹಾಡಿಗೆ ಇಷ್ಟೊಂದು ಸಂಭಾವನೆ ಪಡೆಯುತ್ತಾರೆ.. ಯಾವ ಹೀರೋ ಗು ಕಮ್ಮಿಯಿಲ್ಲ

ಸ್ಯಾಂಡಲ್ ವುಡ್ ಮತ್ತೆ ಎಂಟ್ರಿ ಕೊಟ್ಟ ಬಾಲಿವುಡ್ ಬೋಲ್ಡ್ ನಟಿ ಸನ್ನಿಲಿಯೋನ್.ಕನ್ನಡದ ಈ ಸಿನಿಮಾದಲ್ಲಿ ಬರುವ ಕೇವಲ ಒಂದು ಹಾಡಿನ ಡ್ಯಾನ್ಸಿಗೆ ಮಾದಕ ನಟಿ ಸನ್ನಿ ಲಿಯೋನ್ ಪಡೆದ ಸಂಭಾವನೆ,ಸ್ಟಾರ್ ನಟಿಯರನ್ನೇ ನಿಬ್ಬೆರಗಾಗಿಸಿದೆ. ಹೌದು ತಮ್ಮ ಬೋಲ್ಡ್ ನಟನೆ ಹಾಗೂ ಹಾಟ್ ಫೋಟೋ ಶೂಟ್ ಮೂಲಕ ಬಿ-ಟೌನ್ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಸುದ್ದಿಯಲ್ಲಿರುವ ನಟಿ ಸನ್ನಿ ಲಿಯೋನ್ ಬಾಲಿವುಡ್ ಮಾತ್ರ ಅಲ್ಲದೆ,ಕನ್ನಡದ ಚಿತ್ರಗಳಲ್ಲಿಯೂ ಕೂಡ ತಮ್ಮ ಮಾದಕ ನೃತ್ಯ ಪ್ರದರ್ಶನ ಮಾಡಿದ್ದಾರೆ.ಕೇವಲ ಬೋಲ್ಡ್ ಪಾತ್ರಗಳ ಮೂಲಕ ಸುದ್ದಿಯಾಗದೆ ತಮ್ಮ ಮಾನವೀಯತೆ ಕಾರ್ಯಗಳ ಮೂಲಕವೂ ಕೂಡ ದೇಶಾದ್ಯಂತ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ ನಟಿ ಸನ್ನಿ ಲಿಯೋನ್.

ಕನ್ನಡದಲ್ಲಿ ಜೋಗಿ ಪ್ರೇಮ್ ನಟನೆಯ ಡಿ.ಕೆ.ಚಿತ್ರದಲ್ಲಿ ಸೇಸಮ್ಮಳಾಗಿ ಕುಣಿದು ಕುಪ್ಪಳಿಸಿದ ಸನ್ನಿ ತದ ನಂತರ ಇಂದ್ರಜಿತ್ ಲಂಕೇಶ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಲವ್ ಯೂ ಆಲಿಯಾ ಸಿನಿಮಾದಲ್ಲಿ ಸೃಜನ್ ಲೋಕೇಶ್ ಅವರೊಟ್ಟಿಗೂ ಕೂಡ ಡ್ಯಾನ್ಸ್ ಮಾಡಿದ್ದಾರೆ.ಅಷ್ಟೇ ಅಲ್ಲದೆ ನಟಿ ಅಧಿತಿ ಪ್ರಭುದೇವ ಮತ್ತು ಸಚಿನ್ ಧನ್ ಪಾಲ್ ಮುಖ್ಯ ಭೂಮಿಕೆಯ ಚಾಂಪಿಯನ್ ಸಿನಿಮಾದಲ್ಲಿಯೂ ನಟಿ ಸನ್ನಿ ಲಿಯೋನ್ ಬಣ್ಣ ಹಚ್ಚಿದ್ದಾರೆ.ಇದೀಗ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ನಿರ್ಮಾಣದಲ್ಲಿ ತಯಾರಾಗುತ್ತಿರುವ ಕಾಟನ್ ಪೇಟೆ ಸಿನಿಮಾದ ವಿಶೇಷ ಹಾಡೊಂದರಲ್ಲಿ ಹೆಜ್ಜೆ ಹಾಕಲಿದ್ದಾರೆ.

ವಿ.ರಾಜ್ ಕಃಮಾರ್ ನಿರ್ದೇಶನದ ಈ ಕಾಟನ್ ಪೇಟೆ ಸಿನಿಮಾ ತೆಲುಗಿನಲ್ಲಿ ಸೀತಣ್ಣ ಪೇಟೆ ಗೇಟ್ ಎಂಬ ಶೀರ್ಷಿಕೆಯಲ್ಲಿ ತಯಾರಾಗುತ್ತಿದೆ.ಇದೇ ಸೆಪ್ಟೆಂಬರ್ ತಿಂಗಳ 27 ರಂದು ನಟಿ ಸನ್ನಿ ಲಿಯೋನ್ ಹೈದರಾಬಾದ್ ಗೆ ಬರಲಿದ್ದು,ಮೂರು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.ಇನ್ನು ಆಸಕ್ತಿಕರ ವಿಚಾರ ಅಂದರೆ ಈ ಕಾಟನ್ ಪೇಟೆ ಚಿತ್ರದ ಒಂದು ಹಾಡಿಗೆ ಬರೋಬ್ಬರಿ ಐವತ್ತು ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

%d bloggers like this: