ಬಾನುವಾರ ದಿನದಂದು ರಜೆ ಕೊಡಲು ಕಾರಣ ಇವರೇ ನೋಡಿ. ಇಂದಿಗೂ 99% ಜನರಿಗೆ ಗೊತ್ತಿಲ್ಲ. ರೋಚಕ ಕಥೆ

ವಾರವಿಡೀ ದುಡಿದು ವೀಕೆಂಡ್ ಬಂತೆಂದರೆ ಮುಖ ಅರಳಿಸುವ ನಮಗೆ ಭಾನುವಾರ ರಜಾ ದಿನ ಎಂದು ಯಾರು ಮಾಡಿದರು‌.ಜೊತೆಗೆ ಏಕೆ ಮಾಡಿದರು,ಯಾವ ಕಾಲದಿಂದ ಈ ಭಾನುವಾರವನ್ನ ರಜಾ ದಿನ ಎಂದು ಮಾಡಿದ್ದಾರೆ ಎಂಬ ಕೊಂಚ ಮಾಹಿತಿ ಇಲ್ಲಿದೆ.ಸಾಮಾನ್ಯವಾಗಿ ಶಾಲಾ-ಕಾಲೇಜುಗಳಿಂದ ಹಿಡಿದು ಕಾರ್ಪೋರೇಟ್ ಕಂಪನಿಗಳವರೆಗೆ ಭಾನುವಾರ ರಜೆ ಇರುವುದನ್ನ ಕಾಣುತ್ತೇವೆ.ನಾವು ಕೂಡ ಈ ಒಂದು ವಿಶ್ರಾಂತಿ ಅಥವಾ ಹೊರ ಪ್ರವಾಸ ಕೈಗೊಳ್ಳುತ್ತೇವೆ.ಆದರೆ ಈ ವಾರಪೂರ್ತಿ ದುಡಿದು ಈ ಭಾನುವಾರವನ್ನು ರಜಾ ದಿನ ಎಂದು ಮಾಡಿದರು ಎಂದು ತಿಳಿಯುವುದಾದರೆ.ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮನ್ನ ಆಳುತ್ತಿದ್ದ ಬ್ರಿಟೀಷರು ಪ್ರತಿ ಭಾನುವಾರದಂದು ಪ್ರಾರ್ಥನೆ ಮಾಡಲು ಚರ್ಚ್ ಗೆ ಭೇಟಿ ನೀಡುತ್ತಿದ್ದರು.ಆದರೆ ನಮಗೆ ಮಾತ್ರ ವಿಶ್ರಾಂತಿ ಕೊಡದೆ ನಿರಂತರವಾಗಿ ವಾರಪೂರ್ತಿ ದುಡಿಮೆ ಮಾಡಿಸುತ್ತಿದ್ದರು. ಈ ಶೋಷಣೆಯ ವಿರುದ್ದ ನಾರಾಯಣ್ ಮೇಘಾಜಿ ಲೋಖಂಡೆ ಎಂಬುವವರು ಬ್ರಿಟಿಷರ ಬಳಿ ಮನವಿಯೊಂದನ್ನ ಮಾಡುತ್ತಾರೆ. ಸ್ವಾಮಿ ನಾವು ವಾರಪೂರ್ತಿ ದುಡಿದು ನಮಗೆ ದೈಹಿಕ,ಮಾನಸಿಕ ಆಯಾಸ ಆಗಿರುತ್ತಿದೆ.

ವಾರದಲ್ಲಿ ಒಂದು ದಿನ ನಮಗೆ ವಿಶ್ರಾಂತಿಯ ಅಗತ್ಯವಿರುತ್ತದೆ ಹಾಗಾಗಿ ತಾವು ಚರ್ಚ್ ಹೋಗುವ ದಿನವನ್ನು ನಮಗೆ ರಜಾ ದಿನವನ್ನಾಗಿ ಘೋಷಣೆ ಮಾಡಿ ಎಂದು ತಿಳಿಸುತ್ತಾರೆ.ನಾರಾಯಣ್ ಮೇಘಾಜಿ ಲೋಖಂಡೆ ಅವರ ಈ ಮನವಿಯನ್ನ ಬ್ರಿಟಿಷರು ತಿರಸ್ಕಾರ ಮಾಡುತ್ತಾರೆ. ಇದರಿಂದ ನಾರಾಯಣ ಮೇಘಜಿ ಲೋಖಂಡೆ ಅವರು ಎದೆಗುಂದದೆ ಬ್ರಿಟಿಷರ ವಿರುದ್ಧ ಹೋರಾಟ ಮಾಡುತ್ತಾರೆ.1881 ರಿಂದ 1889 ರವರೆಗೆ ಮಾಡಿದ ನಿರಂತರ ಹೋರಾಟದ ಅಂತಿಮವಾಗಿ ನಾರಾಯಣ ಮೇಘಜಿ ಲೋಖಂಡೆ ಅವರ ಮನವಿಗೆ ಬಿಟಿಷರು ಶರಣಾಗಬೇಕಾಗುತ್ತದೆ. ಇದರ ಫಲವಾಗಿ ಬ್ರಿಟೀಷರು 1889 ರಲ್ಲಿ ಭಾನುವಾರದ ದಿನವನ್ನು ರಜಾದಿನ ಎಂದು ಘೋಷಣೆ ಮಾಡುತ್ತಾರೆ.ಈ ಭಾನುವಾರದ ದಿನವನ್ನೇ ಏಕೆ ರಜಾ ದಿನವನ್ನಾಗಿ ಮಾಡಬೇಕು ಆಲೋಚನೆ ಮಾಡಿದ್ದರು ಅಂದರೆ ಭಾನುವಾರ ತಿಂಗಳ ಮೊದಲ ದಿನ.ಅಂದರೆ ತಿಂಗಳು ಆರಂಭವಾಗುವುದಕ್ಕೆ ಮೊದಲ ದಿನವನ್ನು ಶುಭದಿನ ಎಂದು ಪೂಜಿಸುವುದು ಉಂಟು.

ಇಂದು ನಾವು ಯಾವುದೇ ಕೆಲಸ ಕಾರ್ಯಗಳನ್ನು ಆರಂಭ ಮಾಡಬೇಕಾದರೆ ಗಣೇಶ ಮೂರ್ತಿಗೆ ಹೇಗೆ ಪೂಜೆ ಮಾಡುತ್ತೇವೋ ಹಾಗೆ ಅಂದು ಭಾನುವಾರ ದೇವರಿಗೆ ಪ್ರಾರ್ಥನೆ ಮಾಡಿ ಇಡೀ ತಿಂಗಳ ದಿನವೆಲ್ಲಾ ಉತ್ತಮವಾಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿ ಆ ಒಂದು ದಿನವನ್ನ ವಿಶ್ರಾಂತಿ ಪಡೆಯುವ ಉದ್ಧೇಶವನ್ನು ಭಾನುವಾರದ ರಜಾ ದಿನ ಒಳಗೊಂಡಿತ್ತು.ಒಟ್ಟಾರೆಯಾಗಿ ಇಂದು ಶಾಲಾ ಮಕ್ಕಳಿಗೆ, ದುಡಿಯುವ ಶ್ರಮಿಕರಿಗೆ ವಾರ ಪೂರ್ತಿ ದುಡಿದು ಒಂದು ದಿನ ವಿಶ್ರಾಂತಿ ಪಡೆಯುವ ಪದ್ದತಿ ಆಚರಣೆಯಲ್ಲಿದೆ ಅಂದರೆ ಅದಕ್ಕೆ ನಾರಾಯಣ್ ಮೇಘಾಜಿ ಲೋಖಂಡೆ ಅವರ ಹೋರಾಟದ ಕೊಡುಗೆ ಎಂದು ನಾವು ನೆನೆಯಬೇಕಾಗಿದೆ.

Leave a Reply

%d bloggers like this: