ಸೃಜನ್ ಲೋಕೇಶ್ ಪತ್ನಿ ಯಾರು ಗೊತ್ತಾ? ನಿಜಕ್ಕೂ ಅವರು ಮಾಡುತ್ತಿರುವ ಕೆಲಸ ಏನು ಗೊತ್ತಾ?ನೋಡಿ ಮೊದಲ ಸಲ

ಸ್ಯಾಂಡಲ್ ವುಡ್ ಮಾತಿನಮಲ್ಲ ಎಂದೇ ಕರೆಸಿಕೊಳ್ಳುವ ಮಜಾ ಟಾಕೀಸ್ ಖ್ಯಾತಿಯ ನಟ ಸೃಜನ್ ಲೋಕೇಶ್ ಅವರ ದಾಂಪತ್ಯ ಜೀವನ ಹೇಗಿದೆ ಗೊತ್ತಾ..ಕನ್ನಡ ಚಿತ್ರರಂಗದ ಖ್ಯಾತ ನಟರಾದ ಲೋಕೇಶ್ ಮತ್ತು ಗಿರೀಜಾ ಲೋಕೇಶ್ ಅವರ ಪುತ್ರರಾದ ಸೃಜನ್ ಲೋಕೇಶ್ ಅವರಿಗೆ ನಟನೆ ಎಂಬುದು ವಂಶಪಾರಂಪರ್ಯವಾಗಿ ಬಂದಿದೆ.ಇವರ ತಾತ ಸುಬ್ಬಯ್ಯ ನಾಯ್ಡು ಕೂಡ ಖ್ಯಾತ ಕಲಾವಿದರು ಮತ್ತು ನಿರ್ದೇಶಕರು ಕೂಡ.ರಂಗಭೂಮಿ ಕಲಾವದರಾಗಿದ್ದ ಸುಬ್ಬಯ್ಯ ನಾಯ್ಡು ಅವರು ಕನ್ನಡದ ಮೊಟ್ಟ ಮೊದಲ ಸಿನಿಮಾ ಸತಿ ಸುಲೋಚನ ಚಿತ್ರದಲ್ಲಿ ನಟಿಸಿದ್ದರು.ಕನ್ನಡ ಮಾತ್ರ ಅಲ್ಲದೆ ತೆಲುಗು ಚಿತ್ರದಲ್ಲಿಯೂ ಕೂಡ ಅಭಿನಯಿಸಿದ್ದರು.ಹೀಗೆ ನಟ ಸೃಜನ್ ಲೋಕೇಶ್ ಅವರು ತಮ್ಮ ತಂದೆ ಲೋಕೇಶ್ ಮತ್ತು ತಾತ ಸುಬ್ಬಯ್ಯ ನಾಯ್ಡು ಅವರಿಂದ ನಟನೆಯ ಬದುಕನ್ನ ಬಳುವಳಿಯಾಗಿ ಪಡೆದಿದ್ದಾರೆ.ಆದರೆ ಇವರಿಗೆ ಕನ್ನಡ ಚಿತ್ರರಂಗದಲ್ಲಿ ಹೇಳಿಕೊಳ್ಳುವಷ್ಟು ಯಶಸ್ಸು ಸಿಗದಿದ್ದರು ಸಹ ಕನ್ನಡ ಕಿರುತೆರೆ ಕೈ ಹಿಡಿದಿದೆ.

ಕನ್ನಡ ಕಿರುತೆರೆಯಲ್ಲಿ ಮಜಾ ಟಾಕೀಸ್ ಶೋ ಮೂಲಕ ಮನೆ ಮಾತಾಗಿರುವ ಸೃಜನ್ ಲೋಕೇಶ್ ಅವರು ಖ್ಯಾತ ನಟಿ ವಿಜಯಲಕ್ಷ್ಮಿ ಅವರನ್ನು ಪ್ರೀತಿಸಿ ಮದುವೆ ಕೂಡ ಆಗುತ್ತಿದ್ದರು.ಆದರೆ ಕಾರಾಣಾಂತರಗಳಿಂದ ಈ ಮದುವೆಗೆ ಬ್ರೇಕ್ ಬಿದ್ದಿತು.ತದ ನಂತರ ಸೃಜನ್ ಲೋಕೇಶ್ 2010 ರಲ್ಲಿ ನಟಿ ಗ್ರೀಷ್ಮಾ ಅವರನ್ನ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದರು. ನಟಿ ಗ್ರೀಷ್ಮಾ ರಂಗಭೂಮಿ ಕಲಾವಿದೆ ಮತ್ತು ಕಥಕ್ಕಳಿ ನೃತ್ಯ ಪ್ರವೀಣೆ ಕೂಡ ಹೌದು.ಈ ನಟ ಸೃಜನ್ ಲೋಕೇಶ್ ಮತ್ತು ನಟಿ ಗ್ರೀಷ್ಮಾ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ.ಇಬ್ಬರು ಪರಸ್ಪರ ಅನ್ಯೂನ್ಯತೆಯಿಂದ ಸುಂದರ ಬದುಕನ್ನ ಕಟ್ಟಿಕೊಂಡಿರುವ ಈ ದಂಪತಿಗಳು ಯೂಟ್ಯೂಬ್ ಚಾನೆಲ್ ವೊಂದನ್ನು ಆರಂಭಿಸಿ ಅಡುಗೆ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಾರೆ.ಈ ಯೂ ಟ್ಯೂಬ್ ಚಾನೆಲ್ ನಲ್ಲಿ ಗ್ರೀಷ್ಮಾ ವಿವಿಧ ಬಗೆಯ ಅಡುಗೆಗಳನ್ನು ವೀಕ್ಷಕರಿಗೆ ಪರಿಚಯಿಸುತ್ತಾರೆ.

ಜೊತೆಗೆ ಗ್ರೀಷ್ಮಾ ಅವರು ತಮ್ಮ ಧೀರ್ಘವರ್ಷಗಳ ಗೆಳತಿ ನಟಿ ಶ್ವೇತಾ ಚೆಂಗಪ್ಪ ಅವರೊಟ್ಟಿಗೆ ಬ್ಯೂಸಿನೆಸ್ ನಲ್ಲಿ ತೊಡಗಿಸಿಕೊಂಡಿದ್ದಾರೆ.ಈ ಬ್ಯೂಸಿನೆಸ್ ನಲ್ಲಿ ನಟಿ ಶ್ವೇತಾ ಚಂಗಪ್ಪ ಮತ್ತು ಗ್ರೀಷ್ಮಾ ಪಾಲುದಾರಿಕೆಯನ್ನು ಹೊಂದಿದ್ದಾರೆ.ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಈ ನಮ್ಮ ಲೇಖನದ ಆಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.