ಸುಧಾಮೂರ್ತಿ ಅಮ್ಮನವರ ಮನೆ ಹೇಗಿದೆ ಗೊತ್ತಾ? ಇಲ್ಲಿವರೆಗೂ ಸಂಪಾದನೆ ಮಾಡಿರುವ ಆಸ್ತಿ ಎಷ್ಟು ಗೊತ್ತಾ? ನೋಡಿ ಒಮ್ಮೆ

ಭಾರತದ ಪ್ರತಿಷ್ಟಿತ ಸಾಫ್ಟ್ ವೇರ್ ಉದ್ಯಮ ಇನ್ಫೋಸಿಸ್ ಸಂಸ್ಥೆಯ ಸುಧಾಮೂರ್ತಿ ಅವರು ನೂರಾರು ಕೋಟಿಯ ಒಡತಿಯಾಗಿದ್ದರು ಕೂಡ ಅವರು ಎಂದಿಗೂ ಕೂಡ ಐಷಾರಾಮಿ ವಿಲಾಸಿ ವ್ಯಕ್ತಿಯಾಗಿ ಕಾಣಿಸಿಕೊಂಡವರಲ್ಲ. ಇಂದಿಗೂ ಕೂಡ ಅವರ ಮಾಂಗಲ್ಯ ಇರುವುದು ಕರಿಮಣಿಯ ಸರದಲ್ಲಿ ಎಂಬುದು ಗಮನಾರ್ಹವಾದ ವಿಷಯ. ನಮ್ಮ ದೇಶದಲ್ಲಿ ಶ್ರೀಮಂತರಿಗೆ ಏನೂ ಕೊರತೆ ಇಲ್ಲ. ಆದರೆ ಸರಳತೆಯ ಶ್ರೀಮಂತರ ಕೊರತೆ ಖಂಡಿತಾ ಇದೆ. ಅಂತಹ ಕೊರತೆ ನೀಗಿಸುವ ನಿಟ್ಟಿನಲ್ಲಿ ಅಪರೂಪದಲ್ಲಿ ಅಪರೂಪ ಎಂಬಂತೆ ಸಿಗುವುದು ಸುಧಾಮೂರ್ತಿ ಅವರಂತಹ ಸರಳ ವ್ಯಕ್ತಿತ್ವದ ವ್ಯಕ್ತಿಗಳು. ಸುಧಾಮೂರ್ತಿ ಯವರು ಸದಾ ಕರುನಾಡಿನ ಜನತೆಗೆ ತಮ್ಮ ಉದಾರತೆಯನ್ನು ತೋರುತ್ತಿದ್ದಾರೆ.ಅದರಲ್ಲೂ ಕರ್ನಾಟಕದಲ್ಲಿ ಆದ ಅತೀವೃಷ್ಟಿ ಮಳೆಯಿಂದಾಗಿ ಅರ್ಧ ಕರ್ನಾಟಕವೇ ಮುಳುಗಿಹೋಗಿತ್ತು ಆಗ ನಿರಾಶ್ರಿತರಾದವರಿಗೆ ತಮ್ಮ ಸಂಸ್ಥೆಯ ಮುಖಾಂತರ ಲಕ್ಷಾಂತರ ರೂ.ಗಳನ್ನು ಜನರ ಜೀವನಮಟ್ಟ ಸುಧಾರಿಸಲು ನೆರವಾದರು. ಮನೆಗಳನ್ನೂ ಸಹ ನಿರಾಶ್ರಿತರಿಗೆ ಕಟ್ಟಿಕೊಟ್ಟರು. ಕೋವಿಡ್ ಸಂಧರ್ಭದಲ್ಲಿಯೂ ಕೂಡ ಅಪಾರ ನೆರವು ನೀಡಿದ್ದಾರೆ.

ಭಾರತೀಯ ಐಟಿ ಕ್ಷೇತ್ರದ ವೈಭವದ ಸಂಕೇತವಾಗಿರುವ ಕರ್ನಾಟಕದ ಹೆಮ್ಮೆಯ ಸಂಸ್ಥೆ ಇನ್ಫೋಸಿಸ್ ಕಂಪನಿಯನ್ನು ಕಟ್ಟಿ ಬೆಳೆಸಿರುವ ನಾರಯಣ್ ಮೂರ್ತಿ ಮತ್ತು ಸುಧಾಮೂರ್ತಿ ಅವರ ಸಾಧನೆ ನಿಜಕ್ಕೂ ಕೂಡ ಎಲ್ಲರಿಗೂ ಮಾದರಿಯಾಗಿದೆ. ಇಂದು ಇನ್ಫೋಸಿಸ್ ಸಂಸ್ಥೆಯು ಜಗತ್ತಿನ ಪ್ರತಿಷ್ಟಿತ ಸಂಸ್ಥೆಗಳಾದ ರೀಬಾಕ್, ವೀಸಾ, ಬೋಯಿಂಗ್,ಸಿಸ್ಕೋ ಸಿಸ್ಟಮ್, ನ್ಯುಯಾರ್ಕ್ ಲೈಫ್ ಅಂತಹ ಸಂಸ್ಥೆಗಳು ಸೇರಿದಂತೆ ಬರೋಬ್ಬರಿ 315 ಕಂಪನಿಗಳು ಇನ್ಫೋಸಿಸ್ ಕಂಪನಿಯ ಕ್ಲೈಂಟ್ಸ್ ಗಳಾಗಿವೆ.ಇಂದು ಇನ್ಫೋಸಿಸ್ ಸಂಸ್ಥೆ ನಾಜ಼ಡಕ್ ಲಿಸ್ಟ್ ನಲ್ಲಿ ಮೊದಲ ಭಾರತೀಯ ಕಂಪನಿಯಾಗಿ ಹೊರಹೊಮ್ಮಿದೆ.ಇಂದು ಇನ್ಫೋಸಿಸ್ ಸಂಸ್ಥೆ ಭಾರತದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ಎಕ್ಸ್ಪೋರ್ಟಿಂಗ್ ಕಂಪನಿಯಾಗಿದೆ. ಇನ್ಫೋಸಿಸ್ ಯಲ್ಲಿ ಮಾರ್ಚ್ 2020 ರ ಮಾಹಿತಿಯಂತೆ 2,42,375 ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದು, ಇನ್ಫೋಸಿಸ್ ಸಂಸ್ಥೆಯ ಒಟ್ಟು ಆಸ್ತಿಯ ಮೌಲ್ಯ ಬರೋಬ್ಬರಿ 8355 ಕೋಟಿ.ರೂ ಗಳಾಗಿದೆ.

ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ತಮ್ಮ ಸಂಸ್ಥೆಯನ್ನ ಸಹಯೋಗ ಮಾಡಿಕೊಂಡು ಅನೇಕ ಅಶಕ್ತರಿಗೆ ಆರೋಗ್ಯ, ಅಸಹಾಯಕತೆಯ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ವಿಧ್ಯಾಭ್ಯಾಸವನ್ನು ಕೂಡ ನೋಡಿಕೊಳ್ಳುತ್ತಿದ್ದಾರೆ ಸುಧಾಮೂರ್ತಿ ಅವರು. ಸುಧಾಮೂರ್ತಿ ಅವರು ಬೆಂಗಳೂರಿನ ಜಯನಗರದಲ್ಲಿ ಐಷಾರಾಮಿ ಮನೆಯನ್ನ ಹೊಂದಿದ್ದು ಬರೋಬ್ಬರಿ 775 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರಂತೆ. ಇಷ್ಟೆಲ್ಲಾ ಆಸ್ತಿ ಪಾಸ್ತಿ ಹೆಸರಿದ್ದರು ಕೂಡ ಎಲ್ಲಿಯೂ ಸಹ ಅಹಂಕಾರದ ವ್ಯಕ್ತಿತ್ವ ದುಂದು ವೆಚ್ಚ ಐಷಾರಾಮಿ ಬದುಕನ್ನ ಅಳವಡಸಿಕೊಳ್ಳದೆ ಸಾಮಾನ್ಯರಂತೆ ಆದರ್ಶ ಬದುಕನ್ನು ನಡೆಸುತ್ತಿದ್ದಾರೆ. ಸುಧಾಮೂರ್ತಿ ಅವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು ಕೂಡ ಪ್ರವೃತ್ತಿಯಾಗಿ ಸಾಹಿತ್ಯವನ್ನು ಅಧ್ಯಾಯನ ಮಾಡಿಕೊಂಡು ಪುಸ್ತಕವನ್ನ ಬರೆದಿದ್ದಾರೆ.