ಸ್ಟಾರ್ ನಟರಿಗೆ ಲಕ್ಕಿ ಎನಿಸಿದ್ದ ಥಿಯೇಟರ್ ಶಾಶ್ವತ ಬಂದ್! ಚಿತ್ರರಂಗಕ್ಕೆ ಬಾರಿ ಹೊಡೆತ

ಕನ್ನಡ ಚಲನ ಚಿತ್ರರಂಗಕ್ಕೆ ಶಾಕಿಂಗ್ ಮೇಲೆ ಶಾಕಿಂಗ್ ಸುದ್ದಿ ಒದಗಿಬರುತ್ತಿದೆ.ಸಿನಿಮಾರಂಗದ ವ್ಯಾಪಾರ ಕೇಂದ್ರಗಳಾಗಿರುವ ಸಿನಿಮಾ ಮಂದಿರಗಳು ಚಿತ್ರರಂಗದ ಪ್ರಮುಖ ಭಾಗವಾಗಿ ಕಾರ್ಯ ನಿರ್ವಹಿಸುತ್ತವೆ. ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗುತ್ತವೆ ಅಂದರೆ ಚಿತ್ರಮಂದಿರಗಳು ಹೂವಿನ ಅಲಂಕಾರದಿಂದ ವೈಭವ ಮೇಳೈಸುತ್ತವೆ.ಅಭಿಮಾನಿಗಳು ಸಂತೋಷ,ಸಂಭ್ರಮ ಹರ್ಷೋಧ್ಧಾಗರಗಳಿಂದ ನೆಚ್ಚಿನ ನಟನಿಗೆ ಜೈಕಾರ ಕೂಗುತ್ತಿರುತ್ತಾರೆ.ಈ ದೃಶ್ಯ ಸನ್ನಿವೇಶಗಳನ್ನು ನೋಡಲು ಮುಂದಿನ ದಿನಗಳಲ್ಲಿ ಅಸಾಧ್ಯವಾಗಬಹುದು.ಏಕೆಂದರೆ ರಾಜ್ಯದಲ್ಲಿ ಅನೇಕ ಚಿತ್ರಮಂದಿರಗಳು ಬಾಗಿಲು ಮುಚ್ಚುತ್ತಿವೆ.ಸಾಲು ಸಾಲು ಸಂಕಷ್ಟಗಳು,ಕೋವಿಡ್ ಲಾಕ್ಡೌನ್ ಪರಿಣಾಮ ಚಿತ್ರಮಂದಿರದ ಮಾಲೀಕರು ಅಪಾರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.ಸಿನಿಮಾ ಮಂದಿರದ ನಿರ್ವಹಣೆ,ಸಿಬ್ಬಂದಿ ವೇತನ,ಇನ್ನಿತರ ಖರ್ಚು-ವೆಚ್ಚಗಳು ಮಾಲೀಕರಿಗೆ ಹೊರೆಯಾಗಿದೆ.ಒಂದೆಡೆ ಕೋವಿಡ್ ಲಾಕ್ಡೌನ್ ಕಠಿಣ ಮಾರ್ಗಸೂಚಿಯಡಿ ಚಿತ್ರರಂಗ ಕೂಡ ಸಂಪೂರ್ಣ ಸ್ಥಬ್ದವಾಗಿ ಸಿನಿಮಾ ಚಿತ್ರೀಕರಣ ನಿಲ್ಲಿಸಿತ್ತು.

ಇತ್ತೀಚೆಗೆ ಶೇಕಡಾ 100 ರಷ್ಟು ಅವಕಾಶ ನೀಡಿದರು ಕೂಡ ಜನರ ಸಿನಿಮಾ ಮಂದಿರದತ್ತ ಮುಖ ಮಾಡಲು ಆಲಸ್ಯ ಮಾಡುತ್ತಿದ್ದಾರೆ.ಇದಕ್ಕೆ ಪ್ರಮುಖ ಕಾರಣ ಓಟಿಟಿ ಪ್ಲಾಟ್ ಫಾರ್ಮ್ ಮೂಲಕ ಚಿತ್ರಗಳು ತೆರೆ ಕಾಣುತ್ತಿರುವುದು‌.ಹೀಗೆ ಅನೇಕ ಸವಾಲುಗಳು ಚಿತ್ರಮಂದಿರದ ಮಾಲೀಕರಿಗೆ ಎದುರಾದ ಕಾರಣ ಮಾಲೀಕರು ಅನಿವಾರ್ಯವಾಗಿ ಸಿನಿಮಾ ಮಂದಿರಗಳನ್ನು ಹೊಡೆದಾಕಿ ವಾಣಿಜ್ಯ ಮಳಿಗೆಗಳು,ಮಾಲ್ ಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ.ಈಗಾಗಲೇ ರಾಜ್ಯದ ಹಲವೆಡೆ ಅನೇಕ ಚಿತ್ರಮಂದಿರಗಳು ಮುಚ್ಚಿ ಹೋಗಿವೆ.ಅವುಗಳಲ್ಲಿ ಪ್ರಮುಖವಾಗಿ ನಾಲ್ಕಾರು ದಶಕಗಳಿಂದ ಚಿತ್ರ ರಸಿಕರಿಗೆ ಬೆಳ್ಳಿತೆರೆಯ ಮೇಲೆ ಮನರಂಜನೆ ನೀಡಿದಂತಹ ಬೆಂಗಳೂರಿನ ತ್ರಿಭುವನ್,ಕಪಾಲಿ,ಸಾಗರ್ ,ಮಂಡ್ಯದ ಸಿದ್ದಾರ್ಥ್ ಚಿತ್ರಮಂದಿರ,ಮೈಸೂರಿನ ಶ್ರೀ,ಸರಸ್ವತಿ,ಶಾಂತಲಾ ಥಿಯೇಟರ್ ಗಳು ಈಗಾಗಲೇ ನೆನಪಿನಂಗಳಕ್ಕೆ ಸೇರಿವೆ.

ಇದರ ಸಾಲಿಗೆ ಇದೀಗ ರಾಜಧಾನಿಯ ಪ್ರಮುಖ ಸಿನಿಮಾ ಥಿಯೇಟರ್ ಆಗಿರುವ ಸ್ಯಾಂಡಲ್ ವುಡ್ ನ ಅನೇಕ ಸ್ಟಾರ್ ನಟರ ಅದೃಷ್ಟದ ಸಿನಿಮಾ ಥಿಯೇಟರ್ ಅನಿಸಿಕೊಂಡಿದ್ಧ ಮೇನಕ ಚಿತ್ರಮಂದಿರ ಕೂಡ ಮುಚ್ಚಲ್ಪಡುತ್ತಿದೆ.ಬರೋಬ್ಬರಿ ಮೂರು ದಶಕಗಳ ಕಾಲ ಚಂದನವನದ ಸ್ಟಾರ್ ನಟರಾದಂತಹ ಡಾ.ರಾಜ್ ಕುಮಾರ್,ಸಾಹಸ ಸಿಂಹ ವಿಷ್ಣು ವರ್ಧನ್,ಶಿವರಾಜ್ ಕುಮಾರ್,ಪುನೀತ್ ರಾಜ್ ಕುಮಾರ್,ಯಶ್,ದರ್ಶನ್,ಸುದೀಪ್ ಹೀಗೆ ನಟರ ಸಿನಿಮಾಗಳನ್ನ ಪ್ರದರ್ಶನಗೊಳಿಸಿದ ಮೇನಕಾ ಥಿಯೇಟರ್ ಇನ್ನು ನೆನಪು ಮಾತ್ರ.ರಾಜ್ಯದಲ್ಲಿ ಒಂದೊಂದೆ ಥಿಯೇಟರ್ ಗಳು ಮುಚ್ಚುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಅಪಾರ ನಷ್ಟವೇ ಸರಿ.

Leave a Reply

%d bloggers like this: