ಶ್ರೀಕೃಷ್ಣ ಜನ್ಮಾಷ್ಟಮಿ ದಿನ ತಮ್ಮ ಅವಳಿ ಜವಳಿ ಮಕ್ಕಳನ್ನು ಪರಿಚಯಿಸಿದ ನಟಿ ಅಮೂಲ್ಯ ಅವರು

ಚಂದನವನದ ಸುಪ್ರಸಿದ್ದ ನಟಿ ಅಮೂಲ್ಯ ಅವರು ತಮ್ಮ ಮುದ್ದು ಅವಳಿ ಮಕ್ಕಳನ್ನ ಪರಿಚಯಿಸಿದ್ದಾರೆ. ನಟಿ ಅಮೂಲ್ಯ ಅವರಿಗೆ ಅವಳಿ ಮಕ್ಕಳಾಗಿದ್ದು ಗೊತ್ತೇ ಇದೆ. ಇದು ಭಾರಿ ಸುದ್ದಿಯಂತೆ ಎಲ್ಲೆಡೆ ವೈರಲ್ ಕೂಡ ಆಗಿತ್ತು. ಬಹುತೇಕರು ಅಮೂಲ್ಯ ಅವರಿಗೆ ಅವಳಿ ಮಕ್ಕಳು ಅಂದಾಗ ಅಚ್ಚರಿ ವ್ಯಕ್ತಪಡಿಸಿ ಸಂತೋಷ ಪಟ್ಟಿದ್ದರು. ನಿನ್ನೆ ನಟಿ ಅಮೂಲ್ಯ ಮತ್ತು ಜಗದೀಶ್ ಚಂದ್ರ ದಂಪತಿಗಳು ತಮ್ಮ ಮನೆಯಲ್ಲಿ ಕೃಷ್ಣ ಜನ್ಮಾಷ್ಠಮಿ ಹಬ್ಬವನ್ನ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಕೃಷ್ಣಾಷ್ಠಮಿ ಹಬ್ಬದ ಪ್ರಯುಕ್ತ ತಮ್ಮ ಮುದ್ದು ಅವಳಿ ಮಕ್ಕಳನ್ನ ಸಾರ್ವಜನಿಕವಾಗಿ ಇದೇ ಮೊದಲ ಬಾರಿಗೆ ಪರಿಚಯಿಸಿದ್ದಾರೆ. ಈ ಪುಟಾಣಿ ಕಂದಮ್ಮಗಳ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡ ಅಮೂಲ್ಯ ದಂಪತಿಗಳು ತಮ್ಮ ಮುದ್ದಿನ ಕಂದಮ್ಮಗಳ ಮೇಲೆ ನಿಮ್ಮ ಶುಭ ಆಶೀರ್ವಾದ ಇರಲಿ ಎಂದು ಬರೆದುಕೊಂಡಿದ್ದಾರೆ. ನಟಿ ಅಮೂಲ್ಯ ಅವರು ಶಿವರಾತ್ರಿ ಹಬ್ಬದಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು.

ಇದು ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಸದ ವಿಚಾರವಾಗಿತ್ತು. ಆದರೆ ಅವರ ಅಭಿಮಾನಿಗಳಗೆ ತಮ್ಮ ನೆಚ್ಚಿನ ನಟಿಯ ಮಕ್ಕಳನ್ನ ನೋಡುವ ಆಸೆಯಿತ್ತು. ಇದೀಗ ಅವರ ಅಭಿಮಾನಿಗಳಿಗೆ ಅಮೂಲ್ಯ ದಂಪತಿಗಳು ತಮ್ಮ ಮಕ್ಕಳ ಫೋಟೋವನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವುದರಿಂದ ಸಂತೋಷ ವ್ಯಕ್ತಪಡಿಸಿ, ಮುದ್ದು ಮಕ್ಕಳ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ. ಇನ್ನು ಈ ತಮ್ಮ ಅವಳಿ ಮಕ್ಕಳ ಫೋಟೋಶೂಟ್ ನಲ್ಲಿ ನಟಿ ಅಮೂಲ್ಯ ಅವರು ಹಸಿರು ಬಣ್ಣದ ಲಾಂಗ್ ಗೌನ್ ಧರಿಸಿ ಮಿರ ಮಿರ ಮಿಂಚಿದ್ದಾರೆ. ಮಕ್ಕಳಾದ ನಂತರ ಅಮೂಲ್ಯ ಅವರು ಮತ್ತೆ ಸಖತ್ ಸ್ಲಿಮ್ ಆಗಿದ್ದಾರೆ. ಒಟ್ಟಾರೆಯಾಗಿ ನಟಿ ಅಮೂಲ್ಯ ಮತ್ತು ಜಗದೀಶ್ ಚಂದ್ರ ದಂಪತಿಗಳು ತಮ್ಮ ಮುದ್ದಾದ ಮಕ್ಕಳೊಟ್ಟಿಗೆ ಫೋಟೋ ಶೂಟ್ ಮಾಡಿಸಿಕೊಂಡು ಸಖತ್ ಕ್ಯೂಟ್ ಜೋಡಿಗಳಂತೆ ಕಾಣಿಸಿಕೊಂಡಿದ್ದಾರೆ. ಈ ದಂಪತಿಗಳ ಫೋಟೋ ನೋಡಿ ಅಭಿಮಾನಿಗಳು ಮಾತ್ರ ಅಲ್ಲದೆ ಒಂದಷ್ಟು ಸೆಲೆಬ್ರಿಟಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿ ಕ್ಯೂಟ್ ಕಪಲ್ಸ್ ಎಂದು ಕಮೆಂಟ್ ಮಾಡಿದ್ದಾರೆ.

Leave a Reply

%d bloggers like this: